ಆತ್ಮ ಯೋಜನೆಯಡಿ ನೇರ ಬಿತ್ತನೆ ತಾಂತ್ರಿಕತೆಗಳ ಕುರಿತು ಪ್ರಾತ್ಯಕ್ಷತೆ ಹಾಗೂ ತರಬೇತಿ ಕಾರ್ಯಕ್ರಮ

1
752

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

   

ಬೈಂದೂರು ಜೂನ್.03 : ರೈತ ಸಂಪರ್ಕ ಕೇಂದ್ರ ಬೈಂದೂರು 2017-18 ನೇ ಸಾಲಿನ ಆತ್ಮ ಯೋಜನೆಯಡಿ ನೇರ ಬಿತ್ತನೆ ತಾಂತ್ರಿಕತೆಗಳ ಕುರಿತು ಪ್ರಾತ್ಯಕ್ಷತೆ ಹಾಗೂ ತರಬೇತಿ ಕಾರ್ಯಕ್ರಮ ಶುಕ್ರವಾರ ಬೆಳಿಗ್ಗೆ ಕೆರ್ಗಾಲಿನಲ್ಲಿ ನಡೆಯಿತು.ಈ ಕಾರ್ಯಕ್ರಮವನ್ನು ಎಸ್ ಜೆ ಪಾಟೀಲ್ ವಿಜ್ಞಾನಿಗಳು ಉದ್ಘಾಟಿಸಿದರು. ಬಳಿಕ ನೇರ ಬಿತ್ತನೆ ತಾಂತ್ರಿಕತೆಗಳ ಬಗ್ಗೆ ಮಾಹಿತಿ ಹಾಗೂ ತಾಕಿನಲ್ಲಿ ಪ್ರಾತ್ಯಕ್ಷತೆಯನ್ನು ಮಾಡಿ ತೋರಿಸಿದರು.

ಈ ಸಂದರ್ಭದಲ್ಲಿ ಎಸ್ ಜೆ ಪಾಟೀಲ್ ಮತ್ತು ಯೋಗಿಶ್ ವಿಜ್ಞಾನಿಗಳು,ಅಂಥೋನಿ ಮರಿಯಾ ಇಮ್ಯಾಯಲ್ ಅಪರ ಕೃಷಿ ನಿರ್ದೇಶಕರು ಬೆಂಗಳೂರು, ಚಂದ್ರಶೇಖರ ನಾಯ್ಕ್ ಜಂಟಿ ಕೃಷಿ ನಿರ್ದೇಶಕರು ಉಡುಪಿ, ವಿ.ವಿ ವಿಠ್ಠಲ್ ರಾವ್ ಸಹಾಯಕ ಕೃಷಿ ನಿರ್ದೇಶಕರು ಕುಂದಾಪುರ, ಗಾಯತ್ರಿದೇವಿ ಕೃಷಿ ಅಧಿಕಾರಿ ಬೈಂದೂರು, ಜಿ ಗೋಪಾಲ ಮಾದರ್ ಸಹಾಯಕ ಕೃಷಿ ಅಧಿಕಾರಿ ಕಾಲ್ತೋಡು, ಸಿದ್ದು ಎಚ್ ಆತ್ಮ ಸಹಾಯಕ ತಾಂತ್ರಿಕ ವ್ಯವಸ್ಥಾಪಕರು, ಶಿವರಾಜ್ ಪಾಟೀಲ್ ಇಕ್ರಿಸ್ಯಾಟ್ ತಾಂತ್ರಿಕ ವ್ಯವಸ್ಥಾಪಕರು, ದಿನೇಶ ಗಾಣಿಗ ಮತ್ತು ವೆಂಕಟೇಶ ಹೊಸ್ಕೋಟೆ ಪ್ರಗತಿಪರ ರೈತರು ಹಾಗೂ ಮೊದಲಾದವರು ಉಪಸ್ಥಿತರಿದ್ದರು.

ಗಾಯತ್ರಿದೇವಿ ಕೃಷಿ ಅಧಿಕಾರಿ ಬೈಂದೂರು ಸ್ವಾಗತಿಸಿದರು, ವಿ.ವಿ ವಿಠ್ಠಲ್ ರಾವ್ ಸಹಾಯಕ ಕೃಷಿ ನಿರ್ದೇಶಕರು ಕುಂದಾಪುರ ನಿರೂಪಿಸಿ/ವಂದಿಸಿದರು.

ವರದಿ : ಆಶಾ ಉಪ್ಪುಂದ

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)