ಮೇ 11ಕ್ಕೆ ಪಿಯು ; 12 ಕ್ಕೆ ಎಸೆಸೆಲ್ಸಿ ರಿಸಲ್ಟ್

0
1035

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (1) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

exam

ಬೆಂಗಳೂರು: ಮೇ 11 ಗುರುವಾರ ಬೆಳಗ್ಗೆ 11 ಗಂಟೆಗೆ  ಪಿಯು ಫ‌ಲಿತಾಂಶ ಪ್ರಕಟವಾಗಲಿದೆ ಎಂದು, ಪದವಿಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕಿ ಸಿ ಶಿಖಾ ಅವರು ಮಂಗಳವಾರ ತಿಳಿಸಿದ್ದಾರೆ.

ಶಿಕ್ಷಣ ಸಚಿವ ತನ್ವೀರ್ ಸೇಠ್ ಅವರ ಭೇಟಿಯ ಬಳಿಕ ಫ‌ಲಿತಾಂಶ ಪ್ರಕಟಣೆಗೆ ಅನುಮತಿ ಪಡೆದು ಸುದ್ದಿಗಾರರಿಗೆ ವಿಷಯ ತಿಳಿಸಿದರು.

www.puc.kar.nic.in ವೆಬ್‌ಸೈಟಿನಲ್ಲಿ ಮಾತ್ರ ಪಿಯುಸಿ ಫ‌ಲಿತಾಂಶ ಪ್ರಕಟವಾಗಲಿದ್ದು, ಮೇ 12 ರಂದು ಆಯಾಯ  ಕಾಲೇಜುಗಳಲ್ಲಿ ಲಭ್ಯವಾಗಲಿದೆ.

ಮೇ 12ಕ್ಕೆ ಎಸೆಸೆಲ್ಸಿ ಫ‌ಲಿತಾಂಶ
ರಾಜ್ಯ ಪ್ರೌಢ ಶಿಕ್ಷಣ ಮಂಡಳಿ ನಡೆಸಿದ ಎಸೆಸೆಲ್ಸಿ ಪರೀಕ್ಷಾ ಫ‌ಲಿತಾಂಶ ಮೇ 12ಕ್ಕೆ  ವೆಬ್‌ಸೈಟ್‌ಗಳಲ್ಲಿ  ಪ್ರಕಟವಾಗಲಿದ್ದು,13ಕ್ಕೆ ಎಲ್ಲಾ ಹೈಸ್ಕೂಲ್‌ಗ‌ಳ ನೊಟೀಸ್‌ ಬೋರ್ಡ್‌ಗಳಲ್ಲಿ ಲಭ್ಯವಾಗಲಿದೆ.

ರಾಜ್ಯಾದ್ಯಂತ 2,770 ಕೇಂದ್ರಗಳಲ್ಲಿ ಒಟ್ಟು 8,77,174 ವಿದ್ಯಾರ್ಥಿಗಳು ಈ ಬಾರಿ ಪರೀಕ್ಷೆಗೆ ಹಾಜರಾಗಿದ್ದರು. ಬಾಲಕರು 4,69,835 ಮತ್ತು ಬಾಲಕಿಯರು 4,07,339 ಸೇರಿದಂತೆ ಒಟ್ಟು 8,77,174 ಮಂದಿ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ.

ಉತ್ತರ ಪತ್ರಿಕೆಗಳ ಮೌಲ್ಯ ಮಾಪನ ಭರದಿಂದ ಸಾಗುತ್ತಿದೆ.

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (1) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

B.G.Mohandas (ಬೀಜಿ)

B.G.Mohandas; M.Pharm FAGE DBM Founder ; GulfKannadiga.com & Kannadigaworld.com; kollur.com, devadiga.com & byndoor.com | Formerly Head of Pharmacy at Gulf Medical University, Dubai & Professor KMC Manipal