ಶ್ರೀಲಂಕಾದಲ್ಲಿ ಸರಕು ಸಾಗಾಣಿಕ ಹಡಗಿಗೆ ಬೆಂಕಿ, ನೆರವಿಗೆ ಧಾವಿಸಿದ ಭಾರತೀಯ ನೌಕಾಪಡೆ!

0
674

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)
ಕೊಲಂಬೋ: ಶ್ರೀಲಂಕಾದದಲ್ಲಿ ಸರಕು ಸಾಗಾಣಿಕ ಹಡಗಿನಲ್ಲಿ ಭೀಕರ ಅಗ್ನಿ ಅವಘಡ ಸಂಭವಿಸಿದ್ದು, ಅಧಿಕಾರಿಗಳ ಮನವಿ ಮೇರೆಗೆ ಭಾರತೀಯ ನೌಕಾಪಡೆಯ ಎರಡು ನೌಕೆಗಳು ಕೊಲಂಬೋಗೆ ದೌಡಾಯಿಸಿವೆ.

MV-daniela-cargoship

 ಶ್ರೀಲಂಕಾ ರಾಜಧಾನಿ ಕೊಲಂಬೋ ಬಂದರಿನಿಂದ ಸುಮಾರು 11 ನಾಟಿಕಲ್ ಮೈಲಿ ದೂರದಲ್ಲಿ ಕಾರ್ಗೋಶಿಪ್ ಎಂವಿ ಡೇನಿಯಲಾದಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಸುದ್ದಿ ತಿಳಿದ ಕೂಡಲೇ ಸ್ಥಳಕ್ಕೆ ದೌಡಾಯಿಸಿದ ಲಂಕಾ ಸೇನೆ  ಬೆಂಕಿ ನಂದಿಸುವ ಕಾರ್ಯಾಚರಣೆಯಲ್ಲಿ ತೊಡಗಿದೆ. ಆದರೆ ಸತತ ಕಾರ್ಯಾಚರಣೆ ಬಳಿಕವೂ ಬೆಂಕಿ ಸಂಪೂರ್ಣವಾಗಿ ನಂದದೇ ಇರುವುದರಿಂದ ಲಂಕಾ ಅಧಿಕಾರಿಗಳು ಭಾರತೀಯ ನೌಕಾಪಡೆಯ ನೆರವು ಕೋರಿದ್ದಾರೆ. ಈ  ಹಿನ್ನಲೆಯಲ್ಲಿ ಭಾರತೀಯ ನೌತಾಪಡೆಯ ಎರಡು ನೌಕೆಗಳನ್ನು ಕಾರ್ಯಾಚರಣೆಗಾಗಿ ಕಳುಹಿಸಲಾಗಿದ್ದು, ಐಎನ್ಎಸ್ ಘರಿಯಲ್ ಹಾಗೂ ಐಎನ್ಎಸ್ ದರ್ಶಕ್ ನೌಕೆಗಳು ಘಟನಾ ಸ್ಥಳಕ್ಕೆ ದೌಡಾಯಿಸಿವೆ.

ಅಗ್ನಿ ಅವಘಡಕ್ಕೆ ಕಾರಣ ಇನ್ನೂ ತಿಳಿದುಬಂದಿಲ್ಲವಾದರೂ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿರುವ ಭಾರತೀಯ ನೌಕಾಪಡೆಯ ವಕ್ತಾರ ಕ್ಯಾಪ್ಟನ್ ಡಿಕೆ ಶರ್ಮಾ ಅವರು, ಲಂಕಾ ನೌಕಾಪಡೆಯ ಅಧಿಕಾರಿಗಳ ಮನವಿ ಮೇರೆಗೆ ಐಎನ್ಎಸ್ ಘರಿಯಲ್, ಐಎನ್ಎಸ್ ದರ್ಶಕ್ ನೌಕೆಗಳನ್ನು  ಕಾರ್ಯಾಚರಣೆಗೆ ರವಾನಿಸಲಾಗಿದೆ. ಅಗ್ನಿ ಅವಘಡಕ್ಕೀಡಾಗಿರುವ ನೌಕೆ ರಾಜಧಾನಿ ಕೊಲಂಬೋದಿಂದ 11 ನಾಟಿಕಲ್ ಮೈಲು ದೂರದಲ್ಲಿದೆ ಎಂದು ಹೇಳಿದ್ದಾರೆ.

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)