ಪಾಕ್ ಜೆರ್ಸಿ ತೊಟ್ಟು ಪಾಕ್ ರಾಷ್ಟ್ರ ಗೀತೆ ಹಾಡಿದ ಕಾಶ್ಮೀರಿ ಕ್ರಿಕೆಟ್ ತಂಡ, ವಿಡಿಯೋ ವೈರಲ್

0
645

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)
ನವದೆಹಲಿ: ಕಾಶ್ಮೀರಿ ಕ್ರಿಕೆಟ್ ಕ್ಲಬ್ ತಂಡದ ಆಟಗಾರರು ಪಾಕಿಸ್ತಾನ ಕ್ರಿಕೆಟ್ ತಂಡದ ಜೆರ್ಸಿ ತೊಟ್ಟು ಪಂದ್ಯಕ್ಕೆ ಮೊದಲು ಪಾಕ್ ರಾಷ್ಟ್ರ ಗೀತೆ ಹಾಡಿರುವ ವಿಡಿಯೋ ಒಂದು ವೈರಲ್ ಆಗಿದ್ದು ಭಾರೀ ವಿವಾದ ಸೃಷ್ಟಿಸಿದೆ.
KCC

ಏಪ್ರಿಲ್ 2ರಂದು ಗಂದರ್ ಬಾಲ್ ನಲ್ಲಿನ ವಾಯೀ ಮೈದಾನದಲ್ಲಿ ನಡೆದಿದೆ. ಅದೇ ದಿನ ಚೆನಾನಿ-ನಶ್ರೀ ಸುರಂಗವನ್ನು ಉದ್ಘಾಟಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಜಮ್ಮು ಮತ್ತು ಕಾಶ್ಮೀರಕ್ಕೆ ಬರುವವರಿದ್ದರು.

 ಪಾಕಿಸ್ತಾನ ಕ್ರಿಕೆಟ್ ತಂಡದ ಹಸಿರು ಸಮವಸ್ತ್ರ ಧರಿಸಿಕೊಂಡು ಪಾಕ್ ರಾಷ್ಟ್ರ ಗೀತೆ ಹಾಡಿದ ಈ ತಂಡಕ್ಕೆ ಬಾಬಾ ದರ್ಯಾ ಉದ್ದೀನ್ ಹೆಸರನ್ನು ಇರಿಸಲಾಗಿದೆ. ಗಂದರ್ ಬಾಲ್ ನ ವಾಯೀ ಮೈದಾನದಲ್ಲಿ ಪಂದ್ಯದ ಆರಂಭಕ್ಕೂ ಮುನ್ನ ವೀಕ್ಷಕ ವಿವರಣೆಗಾರನು ಮೈಕ್ ನಲ್ಲಿ ಈಗ ಗೌರವದ ಸಂಕೇತವಾಗಿ ಪಾಕಿಸ್ತಾನಿ ರಾಷ್ಟ್ರಗೀತೆಯನ್ನು ಹಾಡಲಾಗುವುದು ಎಂದು ಘೋಷಿಸಿದ್ದ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಭಾರೀ ಟೀಕೆಗೆ ಗುರಿಯಾಗಿದೆ.

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)