ಉಪ್ಪುಂದ ಜಿಲ್ಲಾ ಮಕ್ಕಳ ರಕ್ಷಣಾ ಘಟಕದಿಂದ ದಾಳಿ

0
323

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ಲಾರಿಗಾಗಿ ಬಾಲಕನ ಭಿಕ್ಷಾಟನೆ

ಉಪ್ಪುಂದ : ಉಪ್ಪುಂದ ಮಂಗಳವಾರದ ಸಂತೆಗೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕದಿಂದ ದಾಳಿ ನಡೆÀಸಿ ಭಿಕ್ಷಾಟನೆ ನಿರತ ಹಾಗೂ ಸಂತೆಯಲ್ಲಿ ವ್ಯಾಪಾರ ಮಾಡುತ್ತಿದ್ದ ಮಕ್ಕಳ ರಕ್ಷಣೆ ಮಾಡಲಾಯಿತು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮಕ್ಕಳ ರಕ್ಷಣಾ ಘಟಕ ಉಡುಪಿ, ಬೈಂದೂರು ಪೊಲೀಸ್ ಠಾಣೆ, ಉಪ್ಪುಂದ ಗ್ರಾ.ಪಂ.ಜಂಟಿ ಕಾರ್ಯಾಚರಣೆಯಲ್ಲಿ ಭಿಕ್ಷಾಟನೆ ನಿರತ ಹಾಗೂ ಸಂತೆಯಲ್ಲಿ ವ್ಯಾಪಾರ ಮಾಡುತ್ತಿದ್ದ 6 ಮಕ್ಕಳನ್ನು ರಕ್ಷಣೆ ಮಾಡಲಾಯಿತು.
ಉಪ್ಪುಂದ ಪೇಟೆ ಹಾಗೂ ಸಂತೆಯಲ್ಲಿ ಭಿಕ್ಷಾಟನೆ ಮಾಡುತ್ತಿದ್ದ 5 ಗಂಡು ಮತ್ತು 1 ಹೆಣ್ಣು ಒಟ್ಟು 6 ಮಕ್ಕಳನ್ನು ಈ ಸಂದರ್ಭ ಬಾಲ ಕಾರ್ಮಿಕ ಪದ್ಧತಿ ಮತ್ತು ಭಿಕ್ಷಾಟನೆ ಬಗ್ಗೆ ಅರಿವು ಮೂಡಿಸಿ ಮಕ್ಕಳನ್ನು ರಕ್ಷಿಸಲಾಯಿತು.

ಲಾರಿಗಾಗಿ ಬಾಲಕನ ಭಿಕ್ಷಾಟನೆ : ಪೇಟೆಯಲ್ಲಿ ಬಾಲಕನೊಬ್ಬ ತನ್ನಿಷ್ಟದ ಆಟಿಕೆಗಳನ್ನು ಪಡೆದು ಅವುಗಳೊಂದಿಗೆ ಆಟ ಆಡುವ ಆಸೆಗಾಗಿ ಭೀಕ್ಷೆ ಬೇಡಲು ತೊಡಗಿಸಿಕೊಂಡಿರುವುದು ಮನಕಲಕುವಂತಿತ್ತು. ಮಾರಿ ಅಮ್ಮನ ಮೂರ್ತೀ ಹೊತ್ತು ಭಿಕ್ಷೆ ಬೇಡುತ್ತಿದ್ದ ಹಾವೇರಿ ಮೂಲದ ಮಹಿಳೆಯೊಂದಿಗೆ 6 ವರ್ಷದ ಬಾಲಕ ತಾಯಿ ಆಟದ ಸಾಮಾಗ್ರಿ ತೆಗೆದು ಕೊಟ್ಟಿಲ್ಲ ಎಂದು ತಾನೆ ಬೇರೆಯಾಗಿ ಭೀಕ್ಷೆ ಬೇಡಿ ಬಣ್ಣ ಬಣ್ಣದ ಚಿಕ್ಕ ಚಿಕ್ಕ ಲಾರಿಗಳನ್ನು ತೆಗೆದುಕೊಂಡು ಖುಷಿ ಪಡುವುತ್ತಿರುವ ಬಗ್ಗೆ ಬಾಲಕನ ಮಾತು ಮನಕಲಕುವಂತಿತ್ತು.

ಕಾರ್ಯಾಚರಣೆಯಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಸದಾನಂದ ನಾಯಕ್, ಕಾನೂನು ಪರಿವೀಕ್ಷಾಧಿಕಾರಿ ಪ್ರಭಾಕರ ಅಚಾರ್, ಕುಂದಾಪುರ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶ್ವೇತ, ಅಂಗನವಾಡಿ ಮೇಲ್ವಿಚಾರಕಿ ಭಾಗೀರಥಿ, ಮಕ್ಕಳ ರಕ್ಷಣಾ ಘಟಕದ ರಕ್ಷಣಾಧಿಕಾರಿಗಳಾದ ಮಹೇಶ ದೇವಾಡಿಗ, ಕಪಿಲಾ, ಸಮಾಜ ಕಾರ್ಯಕರ್ತರಾದ ಯೋಗೀಶ, ಸುರಕ್ಷಾ, ಸಂದೇಶ, ಬೈಂದೂರು ಠಾಣಾ ಸಿಬಂದಿ ಯಶೋದ, ಉಪ್ಪುಂದ ಗ್ರಾ.ಪಂ.ಸದಸ್ಯ ಮೋಹನಚಂದ್ರ, ಕಾರ್ಯದರ್ಶಿ ಗಿರಿಜಾ, ಸಬಂದಿ ನರಸಿಂಹ ಭಾಗವಹಿಸಿದ್ದರು.

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)