ವಿದ್ಯಾರ್ಥಿಗಳೇ ಗಮನಿಸಿ : ‘ಪ್ರಥಮ ಪಿಯುಸಿ’ ದಾಖಲಾತಿ, ಕಾಲೇಜು ಬದಲಾವಣೆಗೆ ದಿನಾಂಕ ವಿಸ್ತರಣೆ

0
419

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ಬೆಂಗಳೂರು : ಎಸ್ ಎಸ್ ಎಲ್ ಸಿ ನಂತ್ರ, ಪ್ರಥಮ ಪಿಯುಸಿಯ ವಿವಿಧ ಕೋರ್ಸ್ ಗಳಿಗೆ ವಿದ್ಯಾರ್ಥಿಗಳು ದಾಖಲಾಗುವ ದಿನಾಂಕವನ್ನು ದಿನಾಂಕ 27-11-2020ಕ್ಕೆ ನಿಗದಿ ಪಡಿಸಲಾಗಿತ್ತು. ಇಂತಹ ಕೊನೆಯ ದಿನಾಂಕವನ್ನು ಇದೀಗ ಮತ್ತೆ 12-12-2020ಕ್ಕೆ ವಿಸ್ತರಣೆ ಮಾಡಲಾಗಿದೆ.

ಈ ಕುರಿತಂತೆ ಪದವಿ ಪೂರ್ವ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದ್ದು, ಪ್ರಥಮ ಪಿಯುಸಿ ದಾಖಲಾತಿಗೆ ಕೊನೆಯ ದಿನಾಂಕವನ್ನು ದಿನಾಂಕ 27-11-2020ರವರೆಗೆ ವಿಸ್ತರಿಸಲಾಗಿತ್ತು. ಇದೀಗ ಪೋಷಕರ ಮನವಿಯ ಮೇರೆಗೆ ಹಾಗೂ ವಿದ್ಯಾರ್ಥಿಗಳ ಹಿತದೃಷ್ಠಿಯಿಂದ ಪ್ರಥಮ ಪಿಯುಸಿ ದಾಖಲಾತಿ ಮತ್ತು ಪ್ರಥಮ ಪಿಯುಸಿಯ ಕಾಲೇಜು ಬದಲಾವಣೆಯನ್ನು ದಿನಾಂಕ 12-12-2020ರವರೆಗೆ ವಿಸ್ತರಿಸಲಾಗಿದೆ. ದಾಖಲಾತಿ ಶುಲ್ಕವನ್ನು ಖಜಾನೆಗೆ ಮಾರನೇ ಕಾರ್ಯನಿರತ ದಿನದಂದು ಕಡ್ಡಾಯವಾಗಿ ಪಾವತಿಸುವುದು ಎಂಬುದಾಗಿ ತಿಳಿಸಿದೆ.

ಇನ್ನೂ ವಿಶೇಷ ಸೂಚನೆಯಲ್ಲಿ 2020-21ನೇ ಸಾಲಿಗೆ ಸಂಬಂಧಿಸಿದಂತೆ ಯಾವುದೇ ಕಾರಣಕ್ಕೂ ಪ್ರಥಮ ಪಿಯುಸಿ ದಾಖಲಾತಿ ಮತ್ತು ಪ್ರಥಮ ಪಿಯುಸಿಯ ಕಾಲೇಜು ಬದಲಾವಣೆ ಪ್ರಕ್ರಿಯೆಯ ಅವಧಿಯನ್ನು ಮತ್ತೆ ವಿಸ್ತರಣೆ ಮಾಡುವುದಿಲ್ಲ ಎಂಬುದಾಗಿ ಎಚ್ಚರಿಕೆ ನೀಡಿದೆ.

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)