ಮೂಡುಬಗೆ ವಾಜ್ಜ್ಯೋತಿ ಶ್ರವಣದೋಷವುಳ್ಳ ಮಕ್ಕಳ ವಸತಿ ಶಾಲೆಯ ಮಕ್ಕಳಿಗೆ ಉಚಿತ ಮಣಿಪಾಲ ಆರೋಗ್ಯ ಕಾರ್ಡು ವಿತರಣೆ 

0
487

ಹೆಚ್ಚಿನ ಓದುಗರು ಈ ಸುದ್ದಿಯನ್ನು ಅಸಮ್ಮತ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (1) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ಉಡುಪಿ ಸ್ವಚ್ಚ ಭಾರತ ಫ್ರೆಂಡ್ಸ್ ಸದಸ್ಯ , ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಮಾಜ ಕಾರ್ಯ ವಿಭಾಗದ ಹಳೆ ವಿದ್ಯಾರ್ಥಿ, ಮಣಿಪಾಲ ಆರೋಗ್ಯ ಕಾರ್ಡನ ಅಧಿಕೃತ ಪ್ರತಿನಿಧಿ ರಕ್ಷಿತ ಕುಮಾರ ವಂಡ್ಸೆಯವರು ಇಲ್ಲಿನ 50 ಮಕ್ಕಳಿಗೆ ಸೋಮವಾರದಂದು ಉಚಿತವಾಗಿ ಮಣಿಪಾಲ ಆರೋಗ್ಯ ಕಾರ್ಡುಗಳನ್ನು ವಿತರಿಸಿದರು.

ಮಣಿಪಾಲ ಆರೋಗ್ಯ ಕಾರ್ಡುಗಳನ್ನು ಈ ಹಿಂದೆ ಉಡುಪಿ ಸಂತೆಕಟ್ಟೆಯಲ್ಲಿರುವ ಕೃಷ್ಣಾನುಗ್ರಹ ಅರ್ಹ ಸಂಸ್ಥೆ ಮತ್ತು ದತ್ತು ಸ್ವೀಕಾರ ಕೇಂದ್ರದ ಮಕ್ಕಳಿಗೆ , ತಲ್ಲೂರು ಫ್ಯಾಮಿಲಿ ಟ್ರಸ್ಟ್ ಪ್ರವರ್ತಿತ ನಾರಾಯಣ ವಿಶೇಷ ಮಕ್ಕಳ ಶಾಲೆಯ ವಿದ್ಯಾರ್ಥಿಗಳಿಗೆ ನೀಡಲಾಗಿದೆ. ಈ ಕಾರ್ಡುಗಳನ್ನು ಮಾಡುವ ನಮ್ಮ ದುಡಿಮೆಯ ಸ್ವಲ್ಪ ಹಣವನ್ನು ಇಂತಹ ಉದ್ದೇಶಗಳಿಗೆ ಕೊಟ್ಟರೆ ಇಂತಹ ಸಂಘ ಸಂಸ್ಥೆಗೆ ಸಹಾಯವಾಗುತ್ತದೆ. ಉದ್ದೇಶ ಇಂತಹ ವಿಶೇಷ ಶಾಲೆ ಮಕ್ಕಳನ್ನು ಗುರುತಿಸಿ ಈ ರೀತಿ ಸಹಾಯ ಮಾಡಿದರೆ ಇಲ್ಲಿನ ಶಾಲೆಯ ಸಂಸ್ಥೆಗೂ ಮತ್ತು ಪೋಷಕರಿಗೂ ಸಹಕಾರಿಯಾಗುತ್ತದೆ ಎಂಬುದು ನಮ್ಮ ಅಭಿಪ್ರಾಯವಾಗಿರುತ್ತದೆ.

ಈ ಶಾಲೆ ಬಗ್ಗೆ ಹೇಳುವುದಾದರೆ ಪ್ರಾಥಮಿಕ ಶಿಕ್ಷಣದ ಜೊತೆಗೆ ಮಕ್ಕಳಿಗೆ ಶ್ರವಣ ತರಭೇತಿ, ಮಾತಿನ ತರಭೇತಿ , ತುಟಿ ಚಲನೆ ಮುಂತಾದ ವಿಶೇಷ ಚಟುವಟಿಕೆಗಳ ಮೂಲಕ ಸೂಕ್ತ ಸಲಕರಣೆಗಳೊಂದಿಗೆ ಕಲಿಸಿ ಕೊಡುತ್ತಾರೆ. ಎಲ್ಲ ವಿದ್ಯಾರ್ಥಿಗಳಿಗೆ ಶ್ರವಣಯಂತ್ರ ಧರಿಸಿ ವೈಯಕ್ತಿಕ ತರಭೇತಿ ನೀಡಲಾಗುವುದು.

ಪಠ್ಯದ ಜೊತೆಗೆ ಆಟೋಟ ,ಯಕ್ಷಗಾನ , ನೃತ್ಯ ,ಕ್ರಾಫ್ಟ್ , ಡೈಲರಿಂಗ್ , ಆಸಕ್ತಿ ಬೆಳೆಸುವಂತೆ ಶಿಕ್ಷಕ ವೃಂದದವರು ತರಬೇತಿ ಮಾಡುತ್ತಾರೆ.ಇದೊಂದು ಅನನ್ಯವಾದ ವಸತಿಶಾಲೆಯಾಗಿದ್ದು ಶ್ರವಣದೋಷವಿರುವ ವಿದ್ಯಾರ್ಥಿಗಳಿಗೆ ಮುಂದುವರಿದ ಶಿಕ್ಷಣ, ಕಲೆ ನೃತ್ಯಾಅಭ್ಯಾಸ ವೃತ್ತಿ ತರಭೇತಿಗಾಗಿ ಸಂಪರ್ಕವನ್ನು ಕಲ್ಪಿಸುತ್ತದೆ.

ಈ ಕಾರ್ಡುಗಳನ್ನು ಮಾಡಲು ಯಾವುದೇ ಸಂಘ ಸಂಸ್ಥೆಗಳಿಂದ ಹಣ ಸಂಗ್ರಹಿಸಿಲ್ಲ. ನಮ್ಮ ದುಡಿಮೆಯ ಹಣದಿಂದ ಇಂತಹ ಸಂಸ್ಥೆಯನ್ನು ಗುರುತಿಸಿದ್ದೇನೆ. ಈ ಸಂದರ್ಭದಲ್ಲಿ ಮುಖ್ಯ ಶಿಕ್ಷಕ ರವೀಂದ್ರ ಎಚ್, ಶಿಕ್ಷಕ ವೃಂದ , ಶಿಕ್ಷಕೇತರ ವೃಂದ , ಪೋಷಕ ವೃಂದ , ವಿದ್ಯಾರ್ಥಿ ವೃಂದದವರು ಉಪಸ್ಥಿತರಿದ್ದರು. ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕರಾದ ಶೈಲಾ ನಾಯಕ್ ಕಾರ್ಯಕ್ರಮ ನಿರೂಪಿಸಿ ಧನ್ಯವಾದ ಮಾಡಿದರು.

ಕಾರ್ಡುಗಳನ್ನು ಮಾಡಲಿಚ್ಚಿಸುವವರು ಸಂಪರ್ಕಿಸಿ ಮೊ. 9743366746

ಹೆಚ್ಚಿನ ಓದುಗರು ಈ ಸುದ್ದಿಯನ್ನು ಅಸಮ್ಮತ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (1) ಖಂಡಿಸುವೆ (0) ಅಭಿಪ್ರಾಯವಿಲ್ಲ (0)