ಉಪ್ಪುಂದ: ಮೀನುಗಾರರ ಮತ್ತು ಮೀನು ಕಾಮಿ೯ಕರ ಸಂಘದ ಪದಾಧಿಕಾರಿಗಳ ಆಯ್ಕೆ

0
742

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ಉಪ್ಪುಂದ: ಅಖಿಲ ಭಾರತ ಮೀನುಗಾರರ ಮತ್ತು ಮೀನು ಕಾಮಿ೯ಕರ ಒಕ್ಕೂಟಕ್ಕೆ ಸಂಯೋಜಿಸಲ್ಪಟ್ಟ ಉಡುಪಿ ಜಿಲ್ಲಾ ಮೀನುಗಾರರ ಮತ್ತು ಮೀನು ಕಾಮಿ೯ಕರ ಸಂಘ ಕುಂದಾಪುರ (ಸಿಐಟಿಯು) ಆಶ್ರಯದಲ್ಲಿ ಬೈಂದೂರು ತಾಲೂಕು ಉಪ್ಪುಂದ ಗ್ರಾಮ ಪಂಚಾಯತ್ ವ್ಯಾಪ್ತಿಯ ಮೀನುಗಾರರ ಸಮಾವೇಶವು ಉಪ್ಪುಂದ ಗ್ರಾಮದ ಕಾಸನಾಡಿ ಜಟ್ಟಿಗೇಶ್ವರ ದೈವಸ್ಥಾನ ವಠಾರದಲ್ಲಿ ಸ್ಥಳೀಯ ಮೀನುಗಾರರು ಮುಖಂಡ ಬಾಬು ಖಾವಿ೯ಯವರ ಅಧ್ಯಕ್ಷತೆ ಯಲ್ಲಿ ಜರುಗಿತು.

ಸಮಾವೇಶದಲ್ಲಿ ಉಪ್ಪುಂದ ಗ್ರಾಮ ಮೀನುಗಾರರ ಮತ್ತು ಮೀನು ಕಾಮಿ೯ಕರ ಸಂಘ ಸ್ಥಾಪನೆ ಮಾಡಲಾಯಿತು.ಪದಾಧಿಕಾರಿಗಳಾಗಿ ರಾಮ ಖಾವಿ೯ ಉಪ್ಪುಂದ(ಅಧ್ಯಕ್ಷ), ಬಾಬುಖಾವಿ೯ (ಉಪಾಧ್ಯಕ್ಷ), ವಿಠ್ಠಲ್ ಖಾವಿ೯ (ಕಾಯ೯ದಶಿ೯), ಜ್ಯೋತಿ ಮೊಗವೀರ (ಜೊತೆಕಾಯ೯ದಶಿ೯),ಶೇಷಗಿರಿ ಜನತಾ ಕಾಲೋನಿ, ರಮೇಶ್ ಅಮ್ಮನರ್ ತೊಪ್ಲು,ವಾಸುದೇವ ಅಮ್ಮನರ್ ತೊಪ್ಲು, ಅಣ್ಣಪ್ಪ ಜನತಾ ಕಾಲೋನಿ, ಜಯರಾಮ್ ಮಡಿಕಲ್,ರಾಜಾರಾಮ್ ಪಾಳ್ಯತೊಪ್ಲು(ಸದಸ್ಯರು)ಇವರನ್ನೊಳಗೊಂಡ ಒಟ್ಟು 10 ಮಂದಿ ಕಾಯ೯ಕಾರಿ ಸಮಿತಿಯನ್ನು ಸವಾ೯ನುಮತದಿಂದ ಆಯ್ಕೆ ಮಾಡಲಾಯಿತು.

ವರದಿ: ವೆಂಕಟೇಶ್ ಕೋಣಿ

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)