`ಒನ್ ನೇಷನ್ ಒನ್ ರೇಷನ್ ಕಾರ್ಡ್’ : ಜ.1ರಿಂದಲೇ ಕರ್ನಾಟಕ ಸೇರಿ 12 ರಾಜ್ಯಗಳಲ್ಲಿ ಜಾರಿ

0
841

ಹೆಚ್ಚಿನ ಓದುಗರು ಈ ಸುದ್ದಿಯನ್ನು ಸಮ್ಮತ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (1) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ಬೆಂಗಳೂರು : ಕಳೆದ ಇತ್ತೀಚೆಗೆ ಕೇಂದ್ರ ಸರ್ಕಾರ ದೇಶಾದ್ಯಂತ ಏಕರೂಪದಲ್ಲಿಯೇ ಪಡಿತರ ಕಾರ್ಡ್ ಜಾರಿಗೆ ಮಾಡುವುದಾಗಿ ಘೋಷಣೆ ಮಾಡಿತ್ತು. ಇಂತಹ ಕಾರ್ಡ್ ಅನ್ನು ಒಂದು ದೇಶ.. ಒಂದೇ ಮಾದರಿಯ ಕಾರ್ಡ್ ( ಓನ್ ನೇಷನ್ ಓನ್ ಕಾರ್ಡ್) ಎಂಬುದಾಗಿಯೂ ಹೆಸರಿಟ್ಟು ತಿಳಿಸಿತ್ತು. ಇಂತಹ ಕಾರ್ಡ್ ಅನ್ನು ಮೊದಲಿಗೆ ಕರ್ನಾಟಕ ಸೇರಿದಂತೆ 12 ರಾಜ್ಯಗಳಲ್ಲಿ ಕೇಂದ್ರ ಸರ್ಕಾರ ಜನವರಿ 01, 2020ರಿಂದ ಜಾರಿಗೆ ತರಲಾಗಿದೆ.

ಕೇಂದ್ರ ಸರ್ಕಾರ ಒನ್ ನೇಷನ್ ಒನ್ ರೇಷನ್ ಕಾರ್ಡ್ ಜಾರಿಗೆ ತರುವುದಾಗಿ ಘೋಷಣೆ ಮಾಡಿತ್ತು. ಆದ್ರೇ ಯಾವಾಗಲಿಂದ ಜಾರಿಗೆ ಬರುವುದಾಗಿ ತಿಳಿಸಿರಲಿಲ್ಲ. ಇಂತಹ ಏಕ ದೇಶ, ಏಕ ಪಡಿತರ ಚೀಟಿ ವ್ಯವಸ್ಥೆಯನ್ನು ಜನವರಿ 01, 2020ರ ಹೊರ ವರ್ಷದಿಂದಲೇ ಜಾರಿಗೆ ತಂದಿದೆ. ಮೊದಲಿಗೆ ಕರ್ನಾಟಕ ಸೇರಿ 12 ರಾಜ್ಯಗಳಲ್ಲಿ ಈ ವ್ಯವಸ್ಥೆ ಜಾರಿಗೆ ತಂದಿದ್ದು, ಆನಂತ್ರದ ಮುಂದಿನ ದಿನಗಳಲ್ಲಿ ಇತರೆ ರಾಜ್ಯಗಳಲ್ಲಿ ಜಾರಿಗೆ ತರಲಿದೆ.

ಸದ್ಯ ಕರ್ನಾಟಕ, ಕೇರಳ, ಗೋವಾ, ತ್ರಿಪುರಾ, ಗುಜರಾತ್, ತೆಲಂಗಾಣ, ಮಧ್ಯಪ್ರದೇಶ, ಮಹಾರಾಷ್ಟ್ರ, ಹರಿಯಾಣ, ಆಂಧ್ರಪ್ರದೇಶ ಮತ್ತು ಜಾರ್ಖಂಡ್ ನಲ್ಲಿ ಈ ಯೋಜನೆಗೆ ಜಾಲನೆ ನೀಡಲಾಗಿದೆ. ಇನ್ನೂ ಕೇಂದ್ರಾಡಳಿತ ಪ್ರದೇಶಗಳು ಸೇರಿದಂತೆ ಎಲ್ಲಾ ರಾಜ್ಯಗಳಲ್ಲಿ ಒನ್ ನೇಷನ್, ಒನ್ ಕಾರ್ಡ್ ಯೋಜನೆ ಜೂನ್ 01, 2020ರಿಂದ ಜಾರಿಗೆ ಬರಲಿದೆ.

ಹೆಚ್ಚಿನ ಓದುಗರು ಈ ಸುದ್ದಿಯನ್ನು ಸಮ್ಮತ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (1) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)