ಬಾಗ್ದಾದ್‌ ವಿಮಾನ ನಿಲ್ದಾಣದ ಮೇಲೆ ವೈಮಾನಿಕ ದಾಳಿ- ಇರಾನ್ ಕಮಾಂಡರ್ ಸಹಿತ 8 ಮಂದಿ ಸಾವು

0
1477

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ಬಾಗ್ದಾದ್ : ಬಾಗ್ದಾದ್‌ನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಶುಕ್ರವಾರ ನಡೆದ ವೈಮಾನಿಕ ರಾಕೆಟ್ ದಾಳಿಯಲ್ಲಿ ಇರಾನ್ ನ ಕಮಾಂಡರ್ ಮೇಜರಲ್ ಜನರಲ್ ಖಾಸಿಂ ಸೊಲೆಮನಿ ಸೇರಿದಂತೆ ಎಂಟು ಮಂದಿ ಮೃತರಾಗಿದ್ದಾರೆ.

ಇರಾಕ್ ರಾಜಧಾನಿ ಬಾಗ್ದಾದ್ ನಲ್ಲಿ ನಡೆದ ಈ ಏರ್ ಸ್ಟ್ರೈಕ್ ನಲ್ಲಿ ಸೊಲೆಮನಿ ಅಲ್ಲದೇ ಪಾಪ್ಯುಲರ್ ಮೊಬಿಲೈಸೇಶನ್ ಫೋರ್ಸಸ್ (ಪಿಎಂಎಫ್) ಎಂದು ಕರೆಯಲ್ಪಡುವ ಇರಾನ್ ಬೆಂಬಲಿತ ಸೇನಾಪಡೆಗಳ ಡೆಪ್ಯುಟಿ ಕಮಾಂಡರ್ ಅಬು ಮೆಹದಿ ಅಲ್-ಮುಹಂದಿಸ್ ಅವರನ್ನು ಹತ್ಯೆ ನಡೆಸಿದೆ ಎಂದು ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ.

ಇರಾನ್ ಬೆಂಬಲಿತ ಪಾಪ್ಯುಲರ್ ಮೊಬಿಲೈಸೇಶನ್ ಪೋರ್ಸಸ್ ಈ ದಾಳಿಗೆ ಅಮೇರಿಕವನ್ನು ಹೊಣೆ ಮಾಡಿದೆ. ಆದರೆ ಈ ಬಗ್ಗೆ ಅಮೆರಿಕಾ ಅಥವಾ ಇರಾನ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಕಳೆದ ವಾರವಷ್ಟೇ ಇರಾಕ್ ನ ಅಮೇರಿಕ ರಾಯಭಾರ ಕಚೇರಿಗೆ ನುಗ್ಗಿ ಇರಾನ್ ಬೆಂಬಲಿಗರು ಪ್ರತಿಭಟನೆ ನಡೆಸಿದ್ದರು. ಈ ಘಟನೆಯ ಬೆನ್ನಲ್ಲೇ ಈ ದಾಳಿ ನಡೆದಿದೆ. ಕ್ಷಿಪಣಿ ಅಥವಾ ರಾಕೆಟ್‌ ದಾಳಿ ಯಾರನ್ನು ಗುರಿಯಾಗಿಸಿಕೊಂಡು ಯಾರು ನಡೇಸಿದರು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಆದರೆ

ಇರಾನ್ ನ ಕಮಾಂಡರ್ ಮೇಜರಲ್ ಜನರಲ್ ಖಾಸಿಂ ಸೊಲೆಮನಿ ಧರಿಸಿದ್ದ ಉಂಗುರದಿಂದ ಅವರ ಮೃತದೇಹವನ್ನು ಗುರುತಿಸಲಾಗಿದೆ ಎಂದು ತಿಳಿದುಬಂದಿದೆ.

ಬಾಗ್ದಾದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮೂರು ರಾಕೆಟ್ ಬಾಂಬ್ ಗಳು ಮತ್ತು ಎರಡು ಕಾರುಗಳು ಸ್ಪೋಟಗೊಂಡಿದ್ದು ದಾಳಿಯಲ್ಲಿ ಕನಿಷ್ಠ 8 ಮಂದಿ ಸಾವನ್ನಪ್ಪಿದ್ದಾರೆ ಎಂದು ಇರಾಕ್ ರಕ್ಷಣಾ ಇಲಾಖೆ ಹೇಳಿದೆ.

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)