ರಾಣಿಬಲೆ ಮೀನುಗಾರರ ಒಕ್ಕೂಟ (ರಿ.) ಉಪ್ಪುಂದ ಇದರ ವಾರ್ಷಿಕ ಮಹಾಸಭೆ

0
534

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ಉಪ್ಪುಂದ : ರಾಣಿಬಲೆ ಮೀನುಗಾರರ ಒಕ್ಕೂಟ (ರಿ.) ಉಪ್ಪುಂದ ಇದರ ವಾರ್ಷಿಕ ಮಹಾಸಭೆಯು ಉಪ್ಪುಂದ ಶಾಲೆಬಾಗಿಲು ಮಾತೃಶ್ರೀ ಸಭಾಭವನದಲ್ಲಿ ನಡೆಯಿತು. ಸಂಘದ ಅಧ್ಯಕ್ಷರಾದ ವೆಂಕಟರಮಣ ಖಾರ್ವಿ, ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ ಸಂಘದ ಅಭಿವೃದ್ಧಿಯಲ್ಲಿ ಸಂಘದ ಸದಸ್ಯರು ಸಕ್ರಿಯವಾಗಿ ಪಾಲ್ಗೊಳ್ಳವುದರ ಮುಖೇನ ಸಹಕಾರ ನೀಡಬೇಕೆಂದು ವಿನಂತಿಸಿದರು.

ಪ್ರಧಾನ ಕಾರ್ಯದರ್ಶಿ ಡಿ. ಮೋಹನದಾಸ್ ಖಾರ್ವಿ ವರದಿ ವಾಚಿಸಿದರು. ಜೊತೆ ಕಾರ್ಯದರ್ಶಿ ಮಂಜುನಾಥ ಜೆ. ಖಾರ್ವಿ ಆಯವ್ಯಯವನ್ನು ಮಂಡಿಸಿದರು. ಇದೇ ಸಂದರ್ಭದಲ್ಲಿ ಸಂಘದ ಕೋಶಾಧಿಕಾರಿಯಾದ ವಯಸ್ಸಿನಲ್ಲೂ ಹಿರಿಯರಾದ, ವಿವಿಧ ಮೀನುಗಾರಿಕಾ ಸಂಘ ಸಂಸ್ಥೆಯಲ್ಲಿ ನಿರ್ದೇಶಕರಾಗಿ ಮೀನುಗಾರರ ಸರ್ವತೋಮುಖ ಅಭಿವೃದ್ಧಿಗಾಗಿ ಸೇವೆ ಸಲ್ಲಿಸಿರುವ ಜಿ. ಮಾಧವ ಖಾರ್ವಿರವರನ್ನು ಸಂಸ್ಥೆಯ ವತಿಯಿಂದ ಗೌರವ ಪೂರಕ ಸನ್ಮಾನಿಸಲಾಯಿತು. ಮತ್ತು ಸಂಘದ ಸದಸ್ಯರು ಜೂನ್ ಮತ್ತು ಜುಲೈ ತಿಂಗಳಲ್ಲಿ ಮೀನುಗಾರಿಕೆಯಲ್ಲಿ ಕಾರ್ಯನಿರತರಾಗಿರುವಾಗ ಮರಣ ಹೊಂದಿದರೆ ರೂ.2,00,000/- ಪರಿಹಾರಧನ ನೀಡುವುದೆಂದು ಘೋಷಿಸಲಾಯಿತು.

ಅಕಾಲಿಕ ಮರಣ ಹೊಂದಿದ ಸಂಘದ ಸದಸ್ಯರಾದ ಕೊರ್ಗ ಖಾರ್ವಿ ಉಪ್ಪುಂದ ಅವರ ಕುಟುಂಬದವರಿಗೆ ಸಂಘದ ವತಿಯಿಂದ ರೂ.45000/- ಪರಿಹಾರ ಧನ ಚೆಕ್‍ನ್ನು ಹಸ್ತಾಂತರಿಸಲಾಯಿತು. ಉಪಾಧ್ಯಕ್ಷ ತಿಮ್ಮಪ್ಪ ಖಾರ್ವಿ, ಕಾರ್ಯಕಾರಿ ಸದಸ್ಯರಾದ ಎ. ಶ್ರೀನಿವಾಸ ಖಾರ್ವಿ, ಡಿ.ಶುಕ್ರ ಖಾರ್ವಿ, ರಮೇಶ್ ಖಾರ್ವಿ, ಪದ್ಮನಾಭ ಖಾರ್ವಿ, ರಾಜಾರಾಮ್ ಖಾರ್ವಿ, ನಾಗೇಶ್ ಖಾರ್ವಿ ಉಪಸ್ಥಿತರಿದ್ದರು.

ರವೀಂದ್ರ ಖಾರ್ವಿ ಪ್ರಾರ್ಥಿಸಿ, ಸುಬ್ರಮಣ್ಯ ಎಂ ನಿರೂಪಿಸಿದರು.

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)