ವಿಶ್ವಕಪ್ 2019: ಏ.15ಕ್ಕೆ ಟೀಂ ಇಂಡಿಯಾ ಪ್ರಕಟ!

0
784

ಹೆಚ್ಚಿನ ಓದುಗರು ಈ ಸುದ್ದಿಯನ್ನು ಅಸಮ್ಮತ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (1) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ಮುಂಬೈ(ಏ.08): 2019ರ ವಿಶ್ವಕಪ್ ಟೂರ್ನಿಗೆ ನ್ಯೂಜಿಲೆಂಡ್, ಆಫ್ಘಾನಿಸ್ತಾನ ತಂಡ ಪ್ರಕಟಿಸಿದೆ. ಇನ್ನುಳಿದ ರಾಷ್ಟ್ರಗಳು ಶೀಘ್ರದಲ್ಲೇ ತಂಡ ಪ್ರಕಟಿಸಲಿದೆ. ಇದೀಗ ಬಿಸಿಸಿಐ ಏ.15ಕ್ಕೆ ಟೀಂ ಇಂಡಿಯಾ ಆಯ್ಕೆ ಮಾಡಲಿದೆ. ಏ.23ರ ಒಳಗೆ ಐಸಿಸಿಗೆ 15 ಸದಸ್ಯರ ತಂಡದ ಪಟ್ಟಿ ನೀಡಬೇಕು. ಸದ್ಯ ಐಪಿಎಲ್‌ ಟೂರ್ನಿ ನಡುವೆಯೇ ತಂಡ ಪ್ರಕಟಿಸಲು ಐಸಿಸಿಐ ಮುಂದಾಗಿದೆ.

ವಿಶ್ವಕಪ್ 2019: ಇಲ್ಲಿದೆ ಟೀಂ ಇಂಡಿಯಾ 15 ಸದಸ್ಯರ ಸಂಭಾವ್ಯ ತಂಡ!

ಟೀಂ ಇಂಡಿಯಾದ ವಿಶ್ವಕಪ್ ತಂಡ ಬಹುತೇಕ ಅಂತಿಮಗೊಂಡಿದೆ. ಆದರೆ ನಾಲ್ಕನೇ ಕ್ರಮಾಂಕಕ್ಕೆ ಯಾರನ್ನು ಆಯ್ಕೆ ಮಾಡಬೇಕು ಅನ್ನೋ ಗೊಂದಲ ಆಯ್ಕೆ ಸಮಿತಿಯಲ್ಲಿತ್ತು. ಹೀಗಾಗಿ ತಂಡದ ಆಯ್ಕೆ ವಿಳಂಭವಾಗಿತ್ತು. ಇದೀಗ ಏ.15ರಂದು ಎಂ.ಎಸ್.ಕೆ ಪ್ರಸಾದ್ ನೇತೃತ್ವದ ಆಯ್ಕೆ ಸಮಿತಿ ಅಂತಿಮ ಆಯ್ಕೆ ನಡೆಸಲಿದೆ.

RCB ಸತತ ಸೋಲು- ಟೀಂ ಇಂಡಿಯಾಕ್ಕೆ ಸೈಡ್ ಎಫೆಕ್ಟ್?

ಅಂಬಾಟಿ ರಾಯುಡು, ರಿಷಬ್ ಪಂತ್ ಹಾಗೂ ವಿಜಯ್ ಶಂಕರ್ ನಡುವೆ ನಾಲ್ಕನೇ ಕ್ರಮಾಂಕಕ್ಕೆ ಪೈಪೋಟಿ ಎರ್ಪಟ್ಟಿದೆ. ಈ ಬಾರಿಯ ವಿಶ್ವಕಪ್ ತಂಡದಲ್ಲಿ ಕನ್ನಡಿಗರಿಗೆ ಅವಕಾಶ ಸಿಗುತ್ತಾ ಅನ್ನೋ ಕುತೂಹಲ ಕರ್ನಾಟಕದಲ್ಲಿ ಮನೆ ಮಾಡಿದೆ. ಮೇ.30 ರಿಂದ 2019ರ ವಿಶ್ವಕಪ್ ಟೂರ್ನಿ ಆರಂಭಗೊಳ್ಳಲಿದೆ.

ಹೆಚ್ಚಿನ ಓದುಗರು ಈ ಸುದ್ದಿಯನ್ನು ಅಸಮ್ಮತ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (1) ಖಂಡಿಸುವೆ (0) ಅಭಿಪ್ರಾಯವಿಲ್ಲ (0)