ಭಾವಪೂರ್ಣ ಶ್ರದ್ಧಾಂಜಲಿ- ಬಿಟ್ಟು ಹೋದರೆಂದು ಕೊರಗದಿರಿ, ಸತ್ತು ಹೋದರೆಂದು ಮರೆತುಬಿಡಿ

0
1617

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (5) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ಯೌವನದ ಜಾತ್ರೆಯಲ್ಲಿ, ಎಡವಟ್ಟಾಗಿದೆ, ಮಳೆ ಬಂದು ಭೂಮಿ ತಂಪಾಗಿದ್ದು ದೇಹ ಉಸಿರು ಬಿಸಿಯಾಗಿದೆ, ಪ್ರಕೃತಿಯಲ್ಲಿ ನೋಡಿದೆಲ್ಲಾ ಕಣ್ಣಿಗೆ ಸುಂದರವಾಗಿ ಕಾಣುತ್ತದೆ.

ಅದ್ಯಾವುದೊ ಸಮಯದಲ್ಲಿ ಪ್ರೇಮದ, ಕಾಮದ ವಾಸನೆ ಅದೇನೋ ಆಕರ್ಷಣೆ ಗಂಡಿಗೇ ಹೆಣ್ಣಗೇ ಲವ್ ಆಗಿದೆ.

ಕೈ ಕೈ ಹಿಡಿದ್ದು ಪಾರ್ಕ ಸುತ್ತಿದ್ದು, ಪ್ರಪಂಚ ಸುತ್ತಿದಾ ಹಾಗೇ ಅನಿಸುತ್ತಿತ್ತು ಹುಡುಗಿ ಎನು ಮಾತಾಡಿದರು ನಗುತ್ತಿದ್ದಳು, ಅವಳಿಗೆ ಹುಡುಗ ಯಾವ ಡ್ರೆಸ್ ಹಾಕ್ಕೊಂಡ್ರು ಚೆನ್ನಾಗಿ ಕಾಣಿಸುತ್ತಿದ್ದ.

ಹಗಲು ಮುಗಿದಿದೆ ಕತ್ತಲಾಗಿದೆ, ಅವರವರ ಮನೆಗೆ ಹೋಗಿದ್ದಾರೆ, ಚಾಟಿಂಗ್, ಬಟ್ಟೆ ಇರದಾ ಎಲ್ಲಾ ಚಿತ್ರ ವಿಚಿತ್ರ ಪೋಟೋಗಳು ಶೇರ್ ಆಗಿದೆ. ನೆಟ್‍ಪ್ಯಾಕ್ ಖಾಲಿಯಾಗಿದೆ.

ಚಾರ್ಜ್ ಇಲ್ಲದ ಮೊಬೈಲ್ ಸ್ವೀಚ್ ಆಪ್ ಆಗಿದೆ, ಭಯ ಆರಂಭವಾಗಿದೆ, ಯಾವಾಗ ಹಗಲು ಬರುತ್ತದೆ ಎಂದು. . . .

ಚಾಟಿಂಗ್ ಮುಗಿದು ಡೇಟಿಂಗ್ ಶುರುವಾಗಿ ಸ್ನೇಹ ಪ್ರೇಮವಾಗಿ, ಪ್ರೇಮ ಕಾಮವಾಗಿ, ಕಾಮದ ಕಡಲಲ್ಲಿ ಸ್ವರ್ಗದ ಹೊಸ್ತಲಲ್ಲಿ ಮನ್ನಥ ರತಿಯರನ್ನೇ ಮೀರಿಸಿದ್ದಾರೆ.

ಯವುದೋ ಕ್ಲುಲಕ ಕಾರಣವಿಲ್ಲ, ಒಬ್ಬರನ್ನೊಬ್ಬರು ಪ್ರೇಮದ ಬಂಧನದಲ್ಲಿ ಅತಿಯಾದ ನಂಬಿದ್ದರೆ ಯಾರಿಂದಲೂ ಒಡೆಯಲು ಸಾಧ್ಯವಿಲ್ಲ ಸಂಬಂಧ. ಇಬ್ಬರ ಜಾತಿ ಬೇರೆ, ಪ್ರೇಮಕ್ಕೆ ಕಾಮಕ್ಕೆ ಜಾತಿ ಇಲ್ಲಾ, ಹುಡುಗ ಹುಡುಗಿಯನ್ನು ದೇವತೆ ಎಂದಿಕೊಂಡಿದ್ದಾನೆ. ಆಕೆಯನ್ನು ಮಾದುವೆಯಾಗಲು ಬಯಸಿದ್ದಾನೆ, ಹುಡುಗಿ ಇನ್ನೊಬ್ಬನನ್ನು ಬಯಸಿದ್ದಾಳೆ.

ನನ್ನ ನಿನ್ನ ಜಾತಿ ಬೇರೆ, ಪ್ರೀತಿಸುವಾಗ ಆಕೆಗೆ ಜಾತಿ ಗೊತ್ತಿರಲಿಲ್ಲಾ ಅನಿಸುತ್ತೇ, ಈ ಸಮಾಜ ಬೇರೆ ಬೇರೆ ಜಾತಿಯವರು ಮದುವೆಯಾಗಲು ಒಪ್ಪುದಿಲ್ಲಾ ಪಾರ್ಕ್‍ನಲ್ಲಿ ಕೈ ಕೈ ಹಿಡಿದು ಈ ಸಮಾಜ ಒಪ್ಪಿತ್ತು ಅನಿಸುತ್ತೆ, ನನ್ನ ಕುಟುಂಬದವರು ಬೇರೆ ಬೇರೆ ಜಾತಿಯವನ ಮದುವೆಗೆ ಒಪ್ಪಲ ಎಂದಿದ್ದಾಳೆ. ಕಾಮದ ಹೊನಲಲ್ಲಿ ತೆಲಾಡುವಾಗ ಇವರ ತಂದೆ ತಾಯಿ ಯಾವ ಜತಿಯವರಾದರು ಅಡ್ಡಿಲ್ಲಾ ಎಂದಿದ್ದರು ಅನ್ನಿಸುತ್ತೇ.

ಹುಡುಗಿ ಬಿಟ್ಟು ಹೋಗಿ ಕೆಲವು ತಿಂಗಳುಗಳೆ ಕಳೆದಿದೆ, ಹುಡುಗ ಮಾನಸಿಕ ಅಸ್ವಸ್ಥನಾಗಿದ್ದಾನೆ, ಕೊನೆಗೂ ಅವನ ತಂದೆ ತಾಯಿ ನನ್ನಲ್ಲಿ ಬಂದಿದ್ದಾರೆ.

ಈ ಕಥೇ ಕೇಳಿ ನಾನೇ ಒಂದು ಸೇರಿ ತಟಸ್ಥನಾದೆ.!, ಉತ್ತರಿಸಲು ಅಸಾಧ್ಯ ಈ ಪ್ರೀತಿ ಎಂಬ ನಂಬಿಕೆ ದ್ರೋಹದ ಕಥೆಯಿದು ಹುಡುಗ ಆ ಹುಡುಗ ಆ ಹುಡುಗಿಯನ್ನು ಅತಿಯಾಗ ನಂಬಿದ್ದಾನೆ ಎನೂ ಹೇಳಿದರೂ ಕೇಳಯೇ ಬಟ್ಟೆ ಹುಡುಗ ನನ್ನ ಪ್ರಶ್ನೆಗೆ ಉತ್ತರಿಸಿ ಬದಲಾಗಿ ಬಿಟ್ಟ

ಆ ಪ್ರಶ್ನೆ ಹೀಗೆದೆ . . .!!!!

“ಅವಳು ನಿನ್ನನ್ನು ಬಿಟ್ಟು ಹೋದಳೆಂದು ಇನ್ನೊಬ್ಬನ ಜೊತೆಯಿದ್ದಳೆಂದು ಕೊರಗುತ್ತೀಯಾ, ಇಲ್ಲಿಯಾದರೂ ಅವಳು ನಿನ್ನ ಜೊತೆ ಇರುವಾಗ ರಸ್ತೆ ದಾಟುವಾಗ ಆಕ್ಸಿಂಡೆಟ್ನಲ್ಲಿ ಸತ್ತಿದ್ದರೆ ನೀ ಎನು ಮಡುತ್ತದ್ದೆ.”

ಹುಡುಗನ ಮನಸ್ಥಿತಿ ಸರಿಯಾಗಲಾರಂಭಿಸಿತು ಏಕಾಏಕಿ 5 ನಿಮಿಷ ಮೌನವಾಗಿ ಎದ್ದು ನಿಂತ,ನಾ ಕೇಳಿದೆ ಎನಾಯ್ತು ಎಂದು ಅವನು ಹೇಳಿದ ಸತ್ತು ಹೋಗಿದ್ದಕ್ಕೆ ಮೌನಾಚರಣೆ “ಭಾವಪೂರ್ಣ ಶ್ರದ್ಧಾಂಜಲಿ” ಸಮರ್ಪಿಸುತ್ತಿದ್ದೇನೆಂದು.

ಅವನ ತಂದೆ-ತಾಯಿ ಮುಖದಲ್ಲಿ ನಗು ಬರಲಾಂಭಿಸಿತು ಹುಡುಗ ಸಹಜ ಸ್ಥಿತಿಯತ್ತ ಬರಲಾರಮಭಿಸಿದ.

ನಿಮ್ಮ ಜೀವನದಲ್ಲಿ ಯಾವುದೇ ನಂಬಿಕೆ ದ್ರೋಹದ ಘಟನೆ ನಡೆದರೆ ನೀವು ಹೆಣ್ಣಾಗಿರಬಹುದು ಗಂಡಾಗಿರಬಹುದು “ಬಿಟ್ಟು ಹೋದರೆಂದು ಕೊರಗಬೇಡಿ ಸತ್ತು ಹೋದರೆಂದು ಮರತೆಬಿಡು”

ವರದಿ : ಸಂತೋಷ ಕಾಡಿನತಾರ್  

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (5) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)