4 ವರ್ಷದಿಂದ ಸ್ವಚ್ಚ ಭಾರತ ಅಭಿಯಾನಕ್ಕೆ ಸದ್ದಿಲ್ಲದೆ ಅಳಿಲು ಸೇವೆ ಮಾಡಿದ ಸ್ವಚ್ಚ ಭಾರತ ಪ್ರೇಂಡ್ಸ

0
1786

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (2) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ಉಡುಪಿ : ಇತ್ತೀಚಿನ ದಿನದಲ್ಲಿ ಸ್ವಚ್ಚ ಭಾರತ ಅಭಿಯಾನ ಸ್ವಚ್ಚ ಭಾರತ ಅಭಿಯಾನ ಎಂದು ಹೇಳಿಕೊಂಡು ಕೇವಲ ಪ್ರಚಾರಕ್ಕಾಗಿ ಸ್ವಚ್ಚತಾ ಕಾರ್ಯಕ್ರಮ ನಡೆಸುವುದು ಕೆಲವೆಡೆ ಕಂಡು ಬರುತ್ತದೆ. ಈ ಮದ್ಯೆ ಉಡುಪಿಯಲ್ಲಿ 20 ಜನರ ತಂಡ ಯಾವುದೇ ಸದ್ದಿಲ್ಲದೆ ಸ್ವಚ್ಚ ಭಾರತ ನಿರ್ಮಾಣಕ್ಕಾಗಿ ಅಳಿಲು ಸೇವೆ ಮಾಡುತ್ತಾ ಬಂದಿದೆ.

ಸುಮಾರು 4 ವರ್ಷದ ಹಿಂದೆ ಉಡುಪಿಯಲ್ಲಿ ಆರಂಭಗೊಂಡ ‘ಸ್ವಚ್ಚ ಭಾರತ ಪ್ರೇಂಡ್ಸ’ ಈ ಸೇವಾ ಮನೋಭಾವದ ಸಂಘಟನೆ .ಪ್ರಧಾನಿ ನರೇಂದ್ರ ಮೋದಿಯವರ ಸ್ವಚ್ಚ ಭಾರತ ಅಬಿಯಾನದಿಂದ ಪ್ರೇರಣೆ ಪಡೆದು ಈ ಸಂಘಟನೆ ಆರಂಭಗೊಂಡಿದೆ. ಅದೇ ಹೆಸರು ನಮ್ಮ ಸಂಸ್ಥೆ ಇಟ್ಟುಕೊಂಡಿದೆ.

ಎಲ್ಲರೂ ಸದಸ್ಯರೇ, ಸ್ವಚ್ಚ ಭಾರತ ಪ್ರೇಂಡ್ಸನಲ್ಲಿ ಇತರ ಸಂಘಟನೆಗಳಂತೆ ಅದ್ಯಕ್ಷ , ಕಾರ್ಯದರ್ಶೀ ಎಂದು ಇರುದಿಲ್ಲ. ಸಂಘಟನೆಯಲ್ಲಿ ಇರುವವರು ಎಲ್ಲರು ಸದಸ್ಯರೆ . ಸ್ವಚ್ಚತೆ ಅಭಿಯಾನ ನಡೆಸುವಾಗ ಟೀ ಶರ್ಟ , ಕೈಗ್ಲೌಸ್‍ನ್ನು ನಮ್ಮ ತಂಡದವರೆ ಭರಿಸುತ್ತಾರೆ.ಬಿಡುವಿನ ವೇಳೆ ಕಾರ್ಯಕ್ರಮ ಸಂಘಟನೆಯಲ್ಲಿ ಕನಿಷ್ಟ 20 ಮಂದಿ ಸದಸ್ಯರು , ಮಹಿಳೆಯರು ಇರುತ್ತಾರೆ. ಬಿಡುವಿನ ವೇಳೆಯಲ್ಲಿ ಸ್ವಚ್ಚÀತಾ ಅಭಿಯಾನ ನಡೆಸುತ್ತಾರೆ. ಅಭೀಯಾನ ಜೊತೆಗೆ ಜನರಲ್ಲಿ ಸ್ವಚ್ಚತೆಯ ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡುತ್ತೇವೆ. ಮಲ್ಪೆ ಬೀಚ್, ಇಂದ್ರಾಳಿ ರೈಲು ನಿಲ್ಲಾಣ , ಉಡುಪಿ ರೈಲು ನಿಲ್ದಾಣದಿಂದ ಮುರ್ಡೆಶ್ವರದ ತನಕ ರೈಲಿನಲ್ಲಿ ಹೋಗಿ ರೈಲಿನ ಪ್ರತಿಯೊಂದು ಜನರು ಬಿಸಾಡಿದ ಕಸವನ್ನು ತೆಗೆದು ಸ್ವಚ್ಚ ಮಾಡಲಾಯಿತು. ಅಜ್ಜರಕಾಡು ಟೀಮ ಪಾರ್ಕ ,ಉಡುಪಿ ಬಸ್ಸು ನಿಲ್ದಾಣ , ಉಡುಪಿ ಕೆ.ಎಸ.ಆರ್.ಟಿ.ಸಿ ಬಸ್ಸು ನಿಲ್ದಾಣ ,ಚೆನ್ನೈ ನೆರೆಬಂದಾಗ ನಮ್ಮ ತಂಡದಿಂದ ಬಿಸ್ಕತ್ತುಪ್ಯಾಕ ಬಾಕ್ಸ ಮತ್ತು ನೀರಿನ ಬಾಟಲಿ ಮಂಗಳೂರಿನ ಹೋಗಿ ಚೆನೈ ಹೋಗುವ ರೈಲಿನಲ್ಲಿ ಕಳುಹಿಸಿಕೊಟ್ಟಿದ್ದೇವೆ.

ಪ್ರಪಂಚದಲ್ಲಿ ಹಲವಾರು ದೇಶಗಳು ತನ್ನ ಶುಚಿತ್ವದ ಮೂಲಕ ಗಮನ ಸೆಳೆಯುತ್ತದೆ.ಭಾರತ ಕೂಡ ವಿವಿಧ ರಾಷ್ಟ್ರಗಳಿಗೆ ಸರಿಸಮವಾಗಬೇಕು. ಎಂಬ ನಿಟ್ಟಿನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಸ್ವಚ್ಚ ಬಾರತ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದಾರೆ. ದೇಶಾದ್ಯಂತ ಹಲವು ಕಡೆಗಳಲ್ಲಿ ಸ್ವಚ್ಚತಾ ಕಾರ್ಯಕ್ರಮ ನಡೆಯುತ್ತದೆ. ಈಗ ಉಡುಪಿ ಜಿಲ್ಲೆಯಲ್ಲಿ ಎಸ.ಎಲ್.ಆರ್.ಎಮ್. ಪೈಲೆಟ್ ಪ್ರೋಜೆಕ್ಟಗಳಿಂದ ರಸ್ತೆ ಬದಿಯಲ್ಲಿ ಸಂಪೂರ್ಣ ಶುಚಿತ್ವಗೊಂಡಿದೆ. ಈ ಪೈಲೆಟ್ ಪ್ರೋಜೆಕ್ಟಗಳಿಂದ ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ಪ್ರತಿ ಅಂಗಡಿ ಮನೆಗಳಿಂದ ಹಸಿ ಕಸ ಮತ್ತು ಒಣ ಕಸಗಳನ್ನು ಬೇರ್ಪಡಿಸುತ್ತಾರೆ. ಸದ್ಯ ಉಡುಪಿ ಕೇಂದ್ರ ಸ್ತಾನ ಹೊಂದಿರುವ ಮುಂದಿನ ದಿನದಲ್ಲಿ ಪ್ರತಿ ಗ್ರಾಮ ಮಟ್ಟದಲ್ಲಿ ವಿಸ್ತರಣಗೊಳ್ಳುವ ಇರಾದೆಯನ್ನು ಸಂಘಟನೆ ಹೊಂದಿದೆ. ಪ್ರತಿ ಗ್ರಾಮದಲ್ಲಿ ಸಮಾನ ಮನಸ್ಕ ಯುವಕ ಮತ್ತು ಯುತಿಯರನ್ನು ಸೇರಿಸಿ ಸ್ವಚ್ಚ ಭಾರತ ಪ್ರೇಂಡ್ಸ ಕ್ಲಭ ನಿರ್ಮಿಸಿ ಗ್ರಾಮದಲ್ಲಿ ಅಭಿಯಾನ ನಡೆಸಲು ಚಿಂತಿಸಲಾಗಿದೆ. ಸ್ಚಚ್ಚ ಭಾರತ ಪ್ರೇಂಡ್ಸ್ನ ಸೇವಾ ಮನೋಭಾವದ ಸಂಘಟನೆ ಪ್ರಧಾನಿ ಮೋದಿಯವರ ಸ್ವಯಂ ಪ್ರೇರಣೆಯಿಂದ ಕೆಲಸ ಮಾಡುತ್ತ ಬಂದಿದೆ.
ಕುಂದಾಪುರ ತಾಲೂಕಿನ ಚಿತ್ತೂರು ಗ್ರಾಮ ಪಂಚಾಯತ ಸದಸ್ಯರಿಗೆ ನಮ್ಮ ತಂಡದಿಂದ ಸಾಮಾಜಿಕ ಜಾಲ ತಾಣಗಳ ಬಗ್ಗೆ ಮಾಹಿತಿ ಕಾರ್ಯಕ್ರಮ ಮಾಡಿದ್ದೇವೆ.

ಸ್ವಚ್ಚತೆಯೇ ದ್ಯೇಯ: ಶೀಘ್ರದಲ್ಲಿ ನೋಂದಣಿ ಮಾಡುವ ಉದ್ದೇಶವನ್ನು ಸಂಘಟನೆ ಹೊಂದಿದೆ. ಇದು ಒಂದು ರಾಜಕೀಯ ಪ್ರೇರಿತ ಸಂಘಟನೆಆಗಿರುದಿಲ್ಲ. ಎಲ್ಲ ಪಕ್ಷದವರು ಸಂಘಟನೆಯ ಸದಸ್ಯರು ಆಗುತ್ತಾರೆ. ಆದರೆ ಕೆಲವೊಂದು ಕಡೆ ಸ್ವಚ್ಚತಾ ಕಾರ್ಯಕ್ರಮ ನಡೆಸುವಾಗ ಮೋದಿಯವರ ಪರವಾಗಿ ಕೆಲಸ ಮಾಡುತ್ತೇವೆ.

ಸಾರ್ವಜನಿಕರು ತಮ್ಮ ಉರನ್ನು ಪ್ರತಿ ಒಂದು ಕಡೆ ಕಸವನ್ನು ಎಸೆಯಕೂಡದು ಬೇರೆಯವರು ನಮ್ಮ ಊರಿಗೆ ಬಂದು ಕಸ ಹಾಕುವುದಿಲ್ಲ. ನಮ್ಮ ಊರಿನ ಸ್ವಚ್ಚತೆ ನಾವೆ ಕಾಪಾಡಿಕೊಳ್ಳಬೇಕು. ಸದ್ಯ ಉಡುಪಿಯನ್ನು ಕೇಂದ್ರ ವಾಗಿಟ್ಟು ಆರಂಭವಾದ ಸ್ವಚ್ಚ ಭಾರತ ಪ್ರೇಂಡ್ಸ ಕ್ಲಭನ್ನು ಮುಂದಿನ ದಿನದಲ್ಲಿ ಗ್ರಾಮ ಮಟ್ಟಕ್ಕೂ ವಿಸ್ತರಣೆ ಮಾಡಬೇಕೆಂಬ ಆಸೆ ಇರುತ್ತದೆ. ಈ ನಿಟ್ಟಿನಲ್ಲಿ ಈರೀತಿ ಸಂಸ್ಥೇಗಳು ಸಮಾಜದಲ್ಲಿ ಆರಂಭವಾಗಿ ಆ ಮೂಲಕ ತಮ್ಮಿಂದಾದ ಕೊಡುಗೆ ಕೊಡಲಿ ಎಂದು ಹಾರೈಸುತ್ತೇವೆ.

ರಕ್ಷಿತ ಕುಮಾರ ವಂಡ್ಸೆ

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (2) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)