ಮರವಂತೆ-ತ್ರಾಸಿ ಕಡಲತೀರ ನಿರ್ವಹಣೆ

0
842

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ಮರವಂತೆ : ಮರವಂತೆಯಲ್ಲಿ ನಡೆಯುತ್ತಿರುವ ಸುಸ್ಥಿರ ಕಡಲತೀರ ನಿರ್ವಹಣಾ ಕಾಮಗಾರಿ ಕುರಿತು ಇತ್ತೀಚಿಗೆ ಮಾಹಿತಿ ಕಾರ್ಯಾಗಾರ ನಡೆಯಿತು.

ಕಡಲ್ಕೊರೆತ ತಡೆಗೆ ದಶಕಗಳಿಂದ ಚಾಲ್ತಿಯಲ್ಲಿರುವ ಕಲ್ಲುಗಳ ಜೋಡಣೆ ನಿರೀಕ್ಷಿತ ಯಶಸ್ಸು ನೀಡುತ್ತಿಲ್ಲ. ಅದಕ್ಕಾಗಿ ಈಗ ಸುಸ್ಥಿರ ಕಡಲತೀರ ನಿರ್ವಹಣಾ ಯೋಜನೆ ಕೈಗೆತ್ತಿಕೊಳ್ಳಲಾಗುತ್ತಿದೆ. ಮರವಂತೆ?ತ್ರಾಸಿಯಲ್ಲಿ ಕಡಲತೀರದಲ್ಲಿರುವ ಹೆದ್ದಾರಿಯ ರಕ್ಷಣೆಗಾಗಿ ಎಡಿಬಿ ನೆರವಿನ ? 88 ಕೋಟಿ ವೆಚ್ಚದಲ್ಲಿ ಅಂತಹ ಯೋಜನೆಯನ್ನು ಈಗ ಅನುಷ್ಠಾನಿಸಲಾಗುತ್ತಿದೆ ಎಂದು ಯೋಜನೆಯ ತರಬೇತಿ ಪರಿಣತ ನಾರಾಯಣ ಭಟ್ ಹೇಳಿದರು.

ಯೋಜನೆ ಕುರಿತು ಮರವಂತೆ ಗ್ರಾಮ ಪಂಚಾಯಿತಿಯಲ್ಲಿ ಶುಕ್ರವಾರ ನಡೆದ ಮಾಹಿತಿ ಕಾರ್ಯಾಗಾರದಲ್ಲಿ ಅವರು ವಿಷಯ ತಿಳಿಸಿದರು. ಗಂಭೀರ ಸಮಸ್ಯೆಯ ನಿವಾರಣೆಗೆ ಅಸಾಮಾನ್ಯ ಪರಿಹಾರ ಬೇಕಾಗುತ್ತದೆ. ಇದು ಅಂತಹ ಯೋಜನೆ. ಇದರಲ್ಲಿ ಸಮುದ್ರ ದಂಡೆಯುದ್ದಕ್ಕೆ ಕಲ್ಲುಗಳನ್ನು ಜೋಡಿಸುವ ಬದಲಿಗೆ ಸಮುದ್ರದಲ್ಲಿ ದಂಡೆಗೆ ಲಂಬವಾಗಿ ಗ್ರಾಯನ್ ಅಥವಾ ಕರೆಗೋಡೆ ಎಂದು ಕರೆಯಲಾಗುವ ನಿರ್ಮಾಣಗಳನ್ನು ರಚಿಸಲಾಗುವುದು. ಇವು ತೀರ ಪ್ರದೇಶದ ಸವಕಳಿಯನ್ನು ತಡೆಯುತ್ತದೆ. ಅದರ ಜತೆಗೆ ಒಂದು ಬದಿ ಶೇಖರಣೆಯಾಗುವ ಮರಳಿನ ಕಾರಣ ಸಮುದ್ರ ಹಿಂದಕ್ಕೆ ಸರಿದು ಮರಳಿನ ದಂಡೆ ವಿಸ್ತಾರಗೊಳ್ಳುತ್ತದೆ. ಅದರಿಂದ ಬೀಚ್‍ನ ಸೌಂದರ್ಯ ಹೆಚ್ಚುತ್ತದೆ. ಮರವಂತೆ?ತ್ರಾಸಿಯಲ್ಲಿ ಈಗಾಗಲೇ ಶೇ 30 ಕಾಮಗಾರಿ ಮುಗಿದಿದೆ. ಈ ವರ್ಷ ಡಿಸೆಂಬರ್ ಅಂತ್ಯಕ್ಕೆ ಇಡೀ ಯೋಜನೆ ಪೂರ್ಣಗೊಳ್ಳುತ್ತದೆ ಎಂದು ಅವರು ಹೇಳಿದರು.

ಕಾಮಗಾರಿ ನಿರ್ವಹಿಸುತ್ತಿರುವ ಕೋಸ್ಟಲ್ ಮರೀನ್ ಕನ್ಸ್ಟ್ರಕ್ಷನ್ ಸಂಸ್ಥೆಯ ಪ್ರತಿನಿಧಿ ಕಿಶೋರ್ ಕಾಮಗಾರಿಯ ಗುಣಮಟ್ಟಕ್ಕೆ ಆದ್ಯತೆ ನೀಡಲಾಗುತ್ತಿದೆ ಎಂದರು.

ಸಮುದಾಯಪರ ಮಾರ್ಗದರ್ಶಕಿ ಮಾಯಾ, ಬಂದರು ಮತ್ತು ಮೀನುಗಾರಿಕಾ ಇಲಾಖೆಯ ಇಂಜಿನಿಯರ್‍ಗಳಾದ ಅಶೋಕ್‍ಕುಮಾರ್, ಮಹಾಬಲ ನಾಯ್ಕ್, ಗುತ್ತಿಗೆದಾರ ಸಂಸ್ಥೆಯ ಇಂಜಿನಿಯರ್ ಮೋಹನ್‍ಕುಮಾರ್ ಪೂರಕ ಮಾಹಿತಿ ನೀಡಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ಅನಿತಾ ಕೆ. ಎ, ಉಪಾಧ್ಯಕ್ಷ ಗಣೇಶ ಪೂಜಾರಿ, ಮಾಜಿ ಅಧ್ಯಕ್ಷರಾದ ಎಂ. ವಿನಾಯಕ ರಾವ್, ಎಂ. ನರಸಿಂಹ ಶೆಟ್ಟಿ, ಎಸ್. ಜನಾರ್ದನ, ಸದಸ್ಯರು, ಮೀನುಗಾರ ಮುಖಂಡರಾದ ಎಂ. ರಾಮಕೃಷ್ಣ ಖಾರ್ವಿ, ಸಂಜೀವ ಖಾರ್ವಿ, ಚಂದ್ರಶೇಖರ ಖಾರ್ವಿ, ಅಭಿವೃದ್ಧಿ ಅಧಿಕಾರಿ ಹರಿಶ್ಚಂದ್ರÀ ಆಚಾರ್, ಇತರರು ಇದ್ದರು.

ವರದಿ : ಕೃಷ್ಣ ಬಿಜೂರು

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)