ಸೈಂಟ್ ಥಾಮಸ್ ಸ್ಕೂಲ್ ನಲ್ಲಿ ಸಹಪ್ರಾಂಶುಪಾಲ ಫಾದರ್ ಅಬ್ರಹಾಂ ಕಲ್ಲಪಟ್ ರವರ ಅಂತಿಮ ದರ್ಶನ

1
2293

ಬೈಂದೂರು : ಬೈಂದೂರು ಹೊಸ ಬಸ್ ನಿಲ್ದಾಣದ ಬಳಿ ಸೋಮವಾರ ರಾತ್ರಿ ಸುಮಾರು 11 ಗಂಟೆಯ ವೇಳೆಗೆ ಬೈಕ್ ಅಪಘಾತದಲ್ಲಿ ನಿಧನರಾದ ಸೈಂಟ್ ಥಾಮಸ್ ಸ್ಕೂಲ್ ನ ಸಹ ಪ್ರಾಂಶುಪಾಲರಾದ ಫಾದರ್ ಅಬ್ರಾಹಂ ಕಲ್ಲಪಟ್ ರವರ ಪಾರ್ಥೀವ ಶರೀರವನ್ನು ಅವರು ಮೊದಲು ಗುರುಗಳಾಗಿದ್ದ ಮುದೂರು ಚರ್ಚಿಗೆ ಹೋಗಿ ಅಲ್ಲಿ ಶೃದ್ದಾಂಜಲಿ ಸಲ್ಲಿಸಿದ ನಂತರ ಬೈಂದೂರಿನ ಸೈಂಟ್ ಥಾಮಸ್ ಸ್ಕೂಲ್ ನಲ್ಲಿ  ಸಾರ್ವಜನಿಕ ಹಾಗೂ ವಿದ್ಯಾರ್ಥಿಗಳಿಗೆ ಪಾರ್ಥೀವ ಶರೀರದ ಅಂತಿಮ ದರ್ಶನ ಮತ್ತು ಪಾರ್ಥನೆ ಸಲ್ಲಿಸಲಾಯಿತು.

ವಿವಿಧ ಚರ್ಚಿನ ಧರ್ಮಗುರುಗಳು, ಶಾಲೆಯ ವಿದ್ಯಾರ್ಥಿ ಪೊಷಕರು, ವಿದ್ಯಾರ್ಥಿಗಳು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಬಾವಪೂರ್ಣ ಶೃದ್ದಾಂಜಲಿ ಅರ್ಪಿಸಿದರು.

     

ಅಲ್ಲದೆ ಸೈಂಟ್ ಥಾಮಸ್ ಸ್ಕೂಲ್ ನ ಸ್ಥಾಪಕ ಅಧ್ಯಕ್ಷರಾಗಿದ್ದ ಬಿಷಪ್ ಮಾರ್ ಡೈವನ್ನ ಸಿಯೋಸ್ ರವರು  ಇಂದು ಅನಾರೋಗ್ಯದಿಂದ ನಿಧನ ಹೊಂದಿದ ಕಾರಣ ನಾಳೆಯೂ ಕೂಡ ಶಾಲೆಗೆ ರಜೆ ಸಾರಲಾಯಿತು.