ಮಂಗಳೂರು : ಅನುತ್ತೀರ್ಣಗೊಂಡ ಎಂಜಿನಿಯರಿಂಗ್‌ ವಿದ್ಯಾರ್ಥಿನಿ ಆತ್ಮಹತ್ಯೆ

0
1271

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (1) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

‘ತರಗತಿಯಲ್ಲಿ ಎಲ್ಲರೂ ಪಾಸಗಿದ್ದು, ನಾನು ಮಾತ್ರ ಫೇಲ್‌ ಆಗಿರುವುದಕ್ಕೆ ಬೇಸರವಾಗಿದೆ. ತಂದೆ ತಾಯಿಯ ಆಸೆ ಪೂರೈಸಲು ಆಗಲಿಲ್ಲ ಎಂಬ ಬೇಸರವಿದೆ’ ಎಂದು ಡೆತ್‌ನೋಟ್‌ನಲ್ಲಿ ಬರೆದಿದ್ದಾರೆ…

ಮಂಗಳೂರು: ಎಂಜಿನಿಯರಿಂಗ್‌ ಪ್ರಥಮ ವರ್ಷದ ಪ್ರಥಮ ಸೆಮಿಸ್ಟರ್‌ನ ಫಲಿತಾಂಶದಲ್ಲಿ ಅನುತ್ತೀರ್ಣಗೊಂಡಿರುವುದಕ್ಕೆ ಮನನೊಂದು ವಿದ್ಯಾರ್ಥಿನಿಯೊಬ್ಬರು ಗುರುವಾರ ಇಲ್ಲಿಗೆ ಸಮೀಪದ ವಳಚ್ಚಿಲ್‌ನ ಶ್ರೀನಿವಾಸ ಎಂಜಿನಿಯರಿಂಗ್ ಕಾಲೇಜಿನ ಮಹಿಳಾ ವಸತಿ ನಿಲಯದಲ್ಲಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಕಾಲೇಜಿನಲ್ಲಿ ಕಂಪ್ಯೂಟರ್‌ ಸೈನ್ಸ್ ವಿಭಾಗದಲ್ಲಿ ಓದುತ್ತಿದ್ದ ಚಿಕ್ಕಮಗಳೂರು ಜಿಲ್ಲೆ ಅಂಗವಳ್ಳಿ ಅಗಲ ಗ್ರಾಮದ ಸುಚೇತನಾ (19) ಆತ್ಮಹತ್ಯೆ ಮಾಡಿ ಕೊಂಡವರು.

ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ(ವಿಟಿಯು)ದ ಎಂಜಿನಿಯರಿಂಗ್ ವಿಭಾಗದ ಪ್ರಥಮ ವರ್ಷದ ಫಲಿತಾಂಶ ಪ್ರಕಟವಾಗಿದ್ದು, ಗುರುವಾರ ಬೆಳಿಗ್ಗೆಯಷ್ಟೇ ಊರಿನಿಂದ ವಳಚ್ಚಿಲ್‌ಗೆ ಬಂದ ಅವರು, ಕಾಲೇಜಿಗೆ ತೆರಳಿ ಫಲಿತಾಂಶ ನೋಡಿದ್ದರು. ಆದರೆ ರಸಾಯನ ವಿಜ್ಞಾನದಲ್ಲಿ ಅನುತ್ತೀರ್ಣ ಗೊಂಡ ವಿಷಯ ಗೊತ್ತಾಗುತ್ತಿದ್ದಂತೆಯೇ, ವಸತಿ ನಿಲಯದ ತಮ್ಮ ಕೊಠಡಿಗೆ ತೆರಳಿ ಫ್ಯಾನ್‌ಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

‘ತರಗತಿಯಲ್ಲಿ ಎಲ್ಲರೂ ಪಾಸಗಿದ್ದು, ನಾನು ಮಾತ್ರ ಫೇಲ್‌ ಆಗಿರುವುದಕ್ಕೆ ಬೇಸರವಾಗಿದೆ. ತಂದೆ ತಾಯಿಯ ಆಸೆ ಪೂರೈಸಲು ಆಗಲಿಲ್ಲ ಎಂಬ ಬೇಸರವಿದೆ’ ಎಂದು ಡೆತ್‌ನೋಟ್‌ನಲ್ಲಿ ಬರೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.  ಮಂಗಳೂರು ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು.

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (1) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)