ಬೆಂಗಳೂರು : ಪೈಶಾಚಿಕ ಕೃತ್ಯ; ಅಪ್ರಾಪ್ತ ಬಾಲಕಿ ಮೇಲೆ ಪಕ್ಕದ ಮನೆ ಬಾಲಕ ಮತ್ತು ಸ್ನೇಹಿತರಿಂದಲೇ ಸಾಮೂಹಿಕ ಅತ್ಯಾಚಾರ

0
544

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)
Minor-Girl-Gang-Raped
ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಮತ್ತೊಂದು ಪೈಶಾಚಿಕ ಕೃತ್ಯ ಬೆಳಕಿಗೆ ಬಂದಿದ್ದು, ಚಾಟ್ಸ್ ಕೊಡಿಸುವ ನೆಪದಲ್ಲಿ ಅಪ್ರಾಪ್ತ ಬಾಲಕಿಯನ್ನು ಕರೆದೊಯ್ದ ಮೂವರು ದುಷ್ಕರ್ಮಿಗಳು ಸತತ 5 ದಿನಗಳ ಕಾಲ ಸಾಮೂಹಿಕ  ಅತ್ಯಾಚಾರವೆಸಗಿರುವ ಘಟನೆ ಬೆಳಕಿಗೆ ಬಂದಿದೆ.
ಆಂಗ್ಲ ದೈನಿಕವೊಂದು ವರದಿ ಮಾಡಿರುವಂತೆ ಬೆಂಗಳೂರಿನ ಪೀಣ್ಯಾ 2ನೇ ಹಂತದಲ್ಲಿ ಪ್ರಕರಣ ಬೆಳಕಿಗೆ ಬಂದಿದ್ದು, ಸಂತ್ರಸ್ತ ಬಾಲಕಿಯ ಪಕ್ಕದ ಮನೆಯಲ್ಲಿದ ಬಾಲಕನೇ ಕುಕೃತ್ಯವೆಸಗಿದ್ದಾನೆ ಎಂದು ತಿಳಿದುಬಂದಿದೆ. ಮನೆಯಲ್ಲಿ  ಯಾರೂ ಇಲ್ಲದ ಸಂದರ್ಭ ನೋಡಿಕೊಂಡ ಆರೋಪಿ ಬಾಲಕಿಯನ್ನು ಮೇ 8ರಂದು ಸಿನಿಮಾಗೆ ಕರೆದೊಯ್ದು ಅಲ್ಲಿಂದ ಪೀಣ್ಯಾ ಕೈಗಾರಿಕಾ ಪ್ರದೇಶದ ನಿರ್ಜನ ಪ್ರದೇಶದಲ್ಲಿದ್ದ ಕಟ್ಟಡವೊಂದರೊಳೆಗೆ ಕರೆದೊಯ್ದಿದ್ದಾನೆ, ಬಳಿಕ  ಬಾಲಕಿಗೆ ಮಾತ್ರೆ ನೀಡಿ ಅತ್ಯಾಚಾರವೆಸಗಿದ್ದಾನೆ. ಇದು ಸಾಲದು ಎಂಬಂತೆ ಸ್ಥಳಕ್ಕೆ ತನ್ನ ಇತರೆ ಇಬ್ಬರು ಸ್ನೇಹಿತರನ್ನು ಕರೆಸಿಕೊಂಡು ಮೂವರೂ ಸೇರಿ ಬಾಲಕಿ ಮೇಲೆ ನಿರಂತರ ಐದು ದಿನಗಳ ಕಾಲ ಅತ್ಯಾಚಾರ ವೆಸಗಿದ್ದಾರೆ.  ಬಳಿಕ ಬಾಲಕಿ ಮನೆಗೆ ಬಂದಾಗ ಆಕೆಯ ತಾಯಿ ವಿಚಾರಿಸಿದ್ದು, ಈ ವೇಳೆ ಘಟನೆ ಬಯಲಿಗೆ ಬಂದಿದೆ. ಪ್ರಸ್ತುತ ಮೂವರು ಆರೋಪಿಗಳನ್ನು ಪೀಣ್ಯಾ ಪೊಲೀಸರು ಬಂಧಿಸಿದ್ದು, ಬಂಧಿತರ ಪೈಕಿ ಓರ್ವ ಅಪ್ರಾಪ್ತ್ ಎಂದು  ತಿಳಿದುಬಂದಿದೆ.
ಪೊಲೀಸ್ ಮೂಲಗಳು ತಿಳಿಸಿರುವಂತೆ ಬಾಲಕಿಗೆ ಆರೋಪಿ ಬಾಲಕ ಕಳೆದ ಮೂರು ತಿಂಗಳಿನಿಂದ ಪರಿಚಿತನಾಗಿದ್ದು, ಮನೆಯಲ್ಲಿ ಬಾಲಕಿ ಮತ್ತು ಆಕೆಯ ತಾಯಿ ಮಾತ್ರ ಇದ್ದರು. ಇದನ್ನೇ ತನ್ನ ಕುಕೃತ್ಯಕ್ಕೆ ಬಳಕೆ ಮಾಡಿಕೊಂಡ  ಆರೋಪಿ ಬಾಲಕಿಯೊಂದಿಗೆ ಸಲುಗೆ ಬೆಳೆಸಿದ್ದಾನೆ. ಬೇಸಿಗೆ ರಜೆ ಇದ್ದರಿಂದ ಬಾಲಕಿ ಮನೆಯಲ್ಲೇ ಇದ್ದಳು. ಈ ವೇಳೆ ಆರೋಪಿ ಬಾಲಕಿಯ ಸ್ನೇಹ ಬೆಳೆಸಿದ್ದು, ಆಗಾಗ ಚಾಟ್ಸ್ ಕೊಡಿಸುವ ನೆಪವೊಡ್ಡಿ ಆಕೆಯನ್ನು ಕರೆದುಕೊಂಡು  ಹೋಗುತ್ತಿದ್ದ. ಕಳೆದ ಮೇ 8ರಂದು ಬಾಲಕಿಯನ್ನು ಸಿನಿಮಾಗೆ ಕರೆದೊಯ್ದಿದ್ದ ಆರೋಪಿ, ಬಳಿಕ ಆಕೆಯನ್ನು ಪೀಣ್ಯಾದಲ್ಲಿದ್ದ ಖಾಲಿ ಕಟ್ಟಡದೊಳಗೆ ಕರೆದೊಯ್ದಿದ್ದಾನೆ.
ನಂತರ ತನ್ನ ಸ್ನೇಹಿತರಿಗೆ ಆರೋಪಿ ಕರೆ ಮಾಡಿ ಸ್ಥಳಕ್ಕೆ ಕರೆಸಿಕೊಂಡಿದ್ದು, ಮೂವರು ಸೇರಿ ಬಾಲಕಿ ಮೇಲೆ ನಿರಂತರ ಐದು ದಿನಗಳ ಕಾಲ ಅತ್ಯಾಚಾರವೆಸಗಿದ್ದಾರೆ. ಏತನ್ಮಧ್ಯೆ ಬಾಲಕಿ ಮನೆಗೆ ಬಾರದ ಕಾರಣ ಬಾಲಕಿ ತಾಯಿ  ಪೀಣ್ಯಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಬಳಿಕ ಮೇ 13ರಂದು ಬಾಲಕಿ ಮನೆಗೆ ಆಗಮಿಸಿದ್ದು, ಬಾಲಕಿ ಎಲ್ಲಿಗೆ ಹೋಗಿದ್ದಳು ಎಂದು ತಾಯಿ ಕೇಳಿದಾಗ ತಾನು ತನ್ನ ಸ್ನೇಹಿತೆಯ ಮನೆಗೆ ಹೋಗಿದ್ದೆ ಎಂದು ಸುಳ್ಳು  ಹೇಳಿದ್ದಾಳೆ. ಮಗಳ ಮಾತಿನ ಮೇಲೆ ನಂಬಿಕೆ ಬಾರದ ತಾಯಿ ಮತ್ತೊಮ್ಮೆ ಗಟ್ಟಿಯಾಗಿ ಗದರಿಸಿ ಕೇಳಿದಾಗ ಬಾಲಕಿ ನಿಜಾಂಶ ಹೇಳಿದ್ದಾಳೆ. ಅತ್ಯಾಚಾರಕ್ಕೂ ಮುನ್ನ ಆರೋಪಿ ಆಕೆಗೆ ಕೆಲ ಮಾತ್ರೆಗಳನ್ನು ನೀಡುತ್ತಿದ್ದ ಎಂದೂ ಬಾಲಕಿ  ಹೇಳಿಕೊಂಡಿದ್ದಾಳೆ.
ಕೂಡಲೇ ಬಾಲಕಿ ತಾಯಿ ಪೊಲೀಸರಿಗೆ ವಿಚಾರ ತಿಳಿಸಿದ್ದು, ಪ್ರಕರಣ ದಾಖಲಿಸಿಕೊಂಡ ಪೀಣ್ಯಾ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತ ಮೂವರು ಆರೋಪಿಗಳ ಪೈಕಿ ಓರ್ಪ ಅಪ್ರಾಪ್ತ ಎಂದು ತಿಳಿದುಬಂದಿದೆ.
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)