ಕೇಂದ್ರ ಸರಕಾರದ ಹೊಸ ನೀತಿ-ನಿಯಮಾವಳಿ : ದೇಶಾದ್ಯಂತ ಮಾಂಸಕ್ಕಾಗಿ ಗೋವುಗಳ ಮಾರಾಟಕ್ಕೆ ನಿಷೇಧ –

0
661

ಹೆಚ್ಚಿನ ಓದುಗರು ಈ ಸುದ್ದಿಯನ್ನು ಅಸಮ್ಮತ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (1) ಸಮ್ಮತ (0) ಅಸಮ್ಮತ (1) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

cow_market

ಹೊಸದಿಲ್ಲಿ : ಕೇಂದ್ರ ಸರಕಾರ ದೇಶಾದ್ಯಂತ ಮಾಂಸಕ್ಕಾಗಿ ಗೋವುಗಳ ಮಾರಾಟವನ್ನು ನಿಷೇಧಿಸಿದೆ ಎಂದು ಹಿಂದುಸ್ಥಾನ್‌ ಟೈಮ್ಸ್‌ ವರದಿ ತಿಳಿಸಿದೆ.

ಹೊಲ, ಗದ್ದೆ ಹಾಗೂ ಭೂ ಮಾಲಕರು ಮಾತ್ರವೇ ಗೋವುಗಳ ಖರೀದಿ – ಮಾರಾಟದಲ್ಲಿ ತೊಡಗಬಹುದಾಗಿದೆ ಎಂದು  ಕೇಂದ್ರ ಸರಕಾರದ ಹೊಸ ನೀತಿ-ನಿಯಮಾವಳಿ ತಿಳಿಸಿದೆ.

ಪಶು ಕಲ್ಯಾಣದ ಹೆಸರಲ್ಲಿ ಕೇಂದ್ರ ಸರಕಾರವು ತನ್ನ ಮೊತ್ತ ಮೊದಲ ಗೋ ರಕ್ಷಣಾ ನೀತಿ-ನಿಯಮಗಳನ್ನು  ನಿನ್ನೆ ಗುರುವಾರ ಮೇ. 25ರಂದು ಪ್ರಕಟಿಸಿರುವುದಾಗಿ ವರದಿಗಳು ತಿಳಿಸಿವೆ.

ಗೋವುಗಳನ್ನು ಕೃಷಿ ಉದ್ದೇಶಗಳಿಗಾಗಿ ಖರೀದಿಸಲಾಗಿದೆಯೇ ವಿನಾ ಹತ್ಯೆಗೈಯಲು ಅಲ್ಲ ಎಂಬ ಮುಚ್ಚಳಿಕೆಯನ್ನು ಬರೆಯಿಸಿಕೊಳ್ಳ ತಕ್ಕದ್ದು ಎಂದು 1960ರ ಪಶು ಹಿಂಸೆ ತಡೆ ಕಾಯಿದೆಯ ನಿಯಮಗಳಡಿ ಪ್ರಕಟಿಸಲಾಗಿರುವ ವಿಶೇಷ ಸೆಕ್ಷನ್‌ ಹೇಳುತ್ತದೆ.

ಗೋ ರಕ್ಷಣೆಯ ಹೆಸರಿನಲ್ಲಿ ಹೆಚ್ಚುತ್ತಿರುವ ಹಲ್ಲೆ, ಹಿಂಸೆ, ಗಲಭೆಯೇ ಮೊದಲಾದ ಅನಪೇಕ್ಷಿತ ಘಟನೆಗಳಿಗೆ ಸಂಬಂಧಿಸಿ ಕಳೆದ ತಿಂಗಳಲ್ಲಷ್ಟೇ ಸುಪ್ರೀಂ ಕೋರ್ಟ್‌, ಕೇಂದ್ರ ಹಾಗೂ ಆರು ರಾಜ್ಯ ಸರಕಾರಗಳಿಗೆ ನೊಟೀಸ್‌ ಜಾರಿ ಮಾಡಿತ್ತು. – ಉದಯವಾಣಿ

ಹೆಚ್ಚಿನ ಓದುಗರು ಈ ಸುದ್ದಿಯನ್ನು ಅಸಮ್ಮತ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (1) ಸಮ್ಮತ (0) ಅಸಮ್ಮತ (1) ಖಂಡಿಸುವೆ (0) ಅಭಿಪ್ರಾಯವಿಲ್ಲ (0)