26/11 ಮುಂಬೈ ದಾಳಿ ಪಾಕ್ ವಿಚಾರಣೆ; 8 ವರ್ಷ 9 ನ್ಯಾಯಾಧೀಶರು!

0
111

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ಲಾಹೋರ್: 2008ರ ಮುಂಬೈ ದಾಳಿ ಪ್ರಕರಣದ ವಿಚಾರಣೆ ನಡೆಸಲು ಪಾಕಿಸ್ತಾನದ ವಿಶೇಷ ಕೋರ್ಟ್ ಮತ್ತೊಬ್ಬ ನ್ಯಾಯಾಧೀಶರನ್ನು ನೇಮಕ ಮಾಡಿದೆ. ಮುಂಬೈ ದಾಳಿ ಪ್ರಕರಣದ ವಿಚಾರಣೆಗಾಗಿ ಪಾಕ್ ಕಳೆದ 8 ವರ್ಷಗಳಲ್ಲಿ 9 ಬಾರಿ ನ್ಯಾಯಾಧೀಶರನ್ನು ಬದಲಾಯಿಸಿದೆ.

attack-1

ಮುಂಬೈ ದಾಳಿ ಸಂಬಂಧ ಶಾಮೀಲಾಗಿರುವ 7 ಮಂದಿ ಶಂಕಿತರ ವಿರುದ್ಧ ಭಯೋತ್ಪಾದನಾ ನಿಗ್ರಹ ಕೋರ್ಟ್ ವಿಚಾರಣೆ ನಡೆಸುತ್ತಿದ್ದು, ಇತ್ತೀಚೆಗೆ ಮತ್ತೆ ನ್ಯಾಯಾಧೀಶರನ್ನು ಬದಲಾಯಿಸಿರುವುದಾಗಿ ವರದಿ ವಿವರಿಸಿದೆ.

ಕಳೆದ 2 ವರ್ಷಗಳಿಂದ ಮುಂಬೈ ದಾಳಿ ಪ್ರಕರಣದ ವಿಚಾರಣೆಯನ್ನು ಭಯೋತ್ಪಾದನಾ ನಿಗ್ರಹ ಕೋರ್ಟ್ ನ ನ್ಯಾಯಾಧೀಶರಾದ ಸೋಹೈಲ್ ಅಕ್ರಮ್ ಅವರು ನಡೆಸುತ್ತಿದ್ದು, ಅವರನ್ನು ಈಗ ಪಂಜಾಬ್ ನ್ಯಾಯಾಂಗ ಸೇವೆಗೆ ವರ್ಗಾವಣೆಗೆ ಮಾಡಿರುವುದಾಗಿ ಕೋರ್ಟ್ ಅಧಿಕಾರಿಗಳು ತಿಳಿಸಿರುವುದಾಗಿ ಪಿಟಿಐ ವರದಿ ಮಾಡಿದೆ.

ಇದು ನ್ಯಾಯಾಧೀಶರ ಸಹಜ ವರ್ಗಾವಣೆ ಪ್ರಕ್ರಿಯೆಯಾಗಿದೆ ಎಂದು ಪ್ರಶ್ನೆಯೊಂದಕ್ಕೆ ಕೋರ್ಟ್ ಅಧಿಕಾರಿಗಳು ಸಮಜಾಯಿಷಿ ನೀಡಿದ್ದಾರೆ. ಇನ್ನು 26/11 ದಾಳಿ ಪ್ರಕರಣದ ವಿಚಾರಣೆ ನ್ಯಾಯಾಧೀಶರಾದ ಕೌಸರ್ ಅಬ್ಬಾಸ್ ಜೈದಿ ಅವರು ನಡೆಸಲಿದ್ದಾರೆ. 2009ರಿಂದ 26/11 ದಾಳಿ ವಿಚಾರಣೆಯನ್ನು ನ್ಯಾ.ಅತ್ತಿಖರ್ ರೆಹಮಾನ್, ಶಾಹಿದ್ ರಫೀಖ್, ಮಲಿಕ್ ಮುಹಮ್ಮದ್ ಅಕ್ರಮ್ ಅವಾನ್, ಪರ್ವೆಜ್ ಅಲಿ ಶಾ ನಡೆಸಿದ್ದರು.
2008ರ ಮುಂಬೈ ದಾಳಿ ಮಾಸ್ಟರ್ ಮೈಂಡ್ ಝಾಕೀ ಉರ್ ರೆಹಮಾನ್ ಲಖ್ವಿಗೆ 2014ರಲ್ಲಿ ನ್ಯಾಯಾಧೀಶ ಜೈದಿ ಜಾಮೀನು ಮಂಜೂರು ಮಾಡಿದ್ದರು.

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

dinetmedia