ದ.ಕ. ಜಿಲ್ಲಾ ಯೂತ್ ಕಾಂಗ್ರೇಸ್ ಚುನಾವಣೆ : ಅಧ್ಯಕ್ಷರಾಗಿ ಮಿಥುನ್ ರೈ ಪುನಾರಾಯ್ಕೆ

0
119

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

mithun rai

ಮಂಗಳೂರು : ದ.ಕ. ಜಿಲ್ಲಾ ಯೂತ್ ಕಾಂಗ್ರೇಸ್ ಅಧ್ಯಕ್ಷರಾಗಿ ಮಿಥುನ್ ರೈ ಪುನಾರಾಯ್ಕೆಯಾಗಿದ್ದಾರೆ. ಚುನಾವಣೆಯಲ್ಲಿ ಪರಾಜಯಗೊಂಡಿರುವ ಅವರು ಎದುರಾಳಿ ಲುಕ್ಮನ್ ಬಂಟ್ವಾಳ್ ಅವರು ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ದ.ಕ.ಜಿಲ್ಲಾ ಯುವ ಕಾಂಗ್ರೆಸ್ ಪದಾಧಿಕಾರಿಗಳ ಚುನಾವಣೆ ಮತ ಎಣಿಕೆಯು ಗುರುವಾರ ನಗರದ ಮಲ್ಲಿಕಟ್ಟೆಯ ಕಾಂಗ್ರೆಸ್ ಕಚೇರಿಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ನೊಂದಿಗೆ ನಡೆಯಿತು.

ದ.ಕ. ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಪಟ್ಟಕ್ಕೆ ನಡೆದ ಚುನಾವಣೆಯಲ್ಲಿ ನಿಕಟಪೂರ್ವ ಅಧ್ಯಕ್ಷ ಮಿಥನ್ ರೈ ಅವರು ತಮ್ಮ ಎದುರಾಳಿ ಲುಕ್ಮನ್ ಬಂಟ್ವಾಳ ಅವರಿಗಿಂತ 583 ಮತಗಳ ಅಒತರದಿಂದ ವಿಜಯಿಯಾಗಿದ್ದಾರೆ. ಮಿಥುನ್ ರೈ ಅವರು 4059 ಮತಗಳನ್ನು ಪಡೆದು ವಿಜಯಿಯಾದರು, ಲುಕ್ಮನ್ ಅವರು 3476 ಮತಗಳನ್ನು ಪಡೆದು ಪರಾಜಯಗೊಂಡರು.

ದ.ಕ.ಜಿಲ್ಲಾ ಯುವ ಕಾಂಗ್ರೇಸ್‍ನ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಒಟ್ಟು ಹುದ್ದೆಗೆ ಒಟ್ಟು 15 ಮಂದಿ ಸ್ಪರ್ಧಿಸಿದ್ದು ಅವರಲ್ಲಿ 7 ಮಂದಿ ಆಯ್ಕೆಯಾಗಿದ್ದಾರೆ.

ಪ್ರಧಾನ್ ಕಾರ್ಯದರ್ಶಿಗಳಾಗಿ ಕಿರಣ್ ರಾಜ್ ಗುಂಡ್ಲೆಗುತ್ತು ಸುಳ್ಯ, ಪ್ರಸಾದ ಮಲ್ಲಿ ಮೂಡುಶೆಡ್ಡೆ, ಅಬ್ದುಲ್ ಸಮಾದ್, ಮೊಹಮ್ಮದ್ ಶೋಯೆಬ್ ಸುರತ್ಕಲ್, ನಮೀದ್, ಶಿಶಿಪಾಲ್ ರಾಜ್, ವರುಣ್ ರಾಜ್ ಅಂಬಟ್ ಆಯ್ಕಯಾಗಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

dinetmedia