ಉಡುಪಿ ಜಿಲ್ಲಾ ಯುವ ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ವಿಶ್ವಾಸ್‌ ಅಮೀನ್‌

0
109

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (1) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

Vishwas-Amin-Youth-Congress

ಉಡುಪಿ: ಜಿಲ್ಲಾ ಯುವ ಕಾಂಗ್ರೆಸ್‌ನಸಮಿತಿಗೆ ಗುರುವಾರ ನಡೆದ ಆಂತರಿಕ ಚುನಾವಣೆಯಲ್ಲಿ 1,073 ಮತಗಳನ್ನು ಪಡೆದು ಜಿಲ್ಲಾ ಅಧ್ಯಕ್ಷರಾಗಿ ಕಾಪು ಕ್ಷೇತ್ರದ ವಿಶ್ವಾಸ್‌ ವಿ. ಅಮೀನ್‌ ಆಯ್ಕೆಯಾದರು. 11 ಮಂದಿ ಸ್ಪರ್ಧಾಳುಗಳಿದ್ದು 7 ಮಂದಿ ಪ್ರಧಾನ ಕಾರ್ಯದರ್ಶಿಗಳಾಗಿ ಆಯ್ಕೆಯಾಗಿದ್ದಾರೆ ಎಂದು ಜಿಲ್ಲಾ ಯುವ ಕಾಂಗ್ರೆಸ್‌ ತಿಳಿಸಿದೆ.

ಭಾರತೀಯ ಯುವ ಕಾಂಗ್ರೆಸ್‌ನಿಂದ ಜಿಲ್ಲಾ ಚುನಾವಣಾಧಿಕಾರಿಯಾಗಿ ಸೂರಜ್‌, ವಿಧಾನಸಭಾ ಚುನಾವಣಾಧಿಕಾರಿಯಾಗಿ ಮನೀಶ್‌ ಕಾರ್ಯನಿರ್ವಹಿಸಿದರು. ಜಿಲ್ಲೆಯ 5 ವಿಧಾನಸಭಾ ಕ್ಷೇತ್ರಗಳ ಯುವ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಹಾಗೂ ಪದಾಧಿಕಾರಿಗಳ ಸ್ಥಾನಕ್ಕೆ ಚುನಾವಣೆ ನಡೆದಿದ್ದು ಅಧ್ಯಕ್ಷರ ವಿವರ ಇಂತಿದೆ: ಉಡುಪಿ ಕ್ಷೇತ್ರ- ಪ್ರಶಾಂತ್‌ ಪೂಜಾರಿ, ಕಾಪು -ಮೆಲ್ವಿನ್‌ ಡಿ’ಸೋಜಾ, ಉಪಾಧ್ಯಕ್ಷ ಸಂತೋಷ್‌ ಬಂಗೇರಾ, ಕಾರ್ಕಳ – ದೀಪಕ್‌ ಕೋಟ್ಯಾನ್‌, ಕುಂದಾಪುರ – ಇಚ್ಚಿತಾರ್ಥ ಶೆಟ್ಟಿ, ಉಪಾಧ್ಯಕ್ಷ ರವಿ, ಬೈಂದೂರು -ಶೇಖರ್‌ ಪೂಜಾರಿ.

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (1) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

dinetmedia