ಗೋವಾದಲ್ಲಿ ಭೀಕರ ದುರಂತ ; ಹಳೆ ಸೇತುವೆ ಕುಸಿತ; 10 ಕ್ಕೂ ಹೆಚ್ಚು ಬಲಿ

0
97

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

goa

ಪಣಜಿ: ದಕ್ಷಿಣ ಗೋವಾದಲ್ಲಿ ಪೋರ್ಚುಗೀಸ್‌ ಕಾಲದ ಶಿಥಿಲಗೊಂಡ ಸೇತುವೆಯೊಂದು ಗುರುವಾರ ಸಂಜೆ ಕುಸಿದು ಬಿದ್ದು 10 ಮಂದಿ ಸಾವಿಗೀಡಾಗಿರುವ ಶಂಕೆ ವ್ಯಕ್ತವಾಗಿದೆ. ಸ್ಥಳದಲ್ಲಿ ನೌಕಾಪಡೆ ರಕ್ಷಣಾ ಕಾರ್ಯ ನಡೆಸುತ್ತಿದೆ.

ಕರ್ಚೋರೆಮ್‌ ಗ್ರಾಮದಲ್ಲಿ ಸನ್ವೋರ್‌ದೆಮ್‌ ನದಿಯಲ್ಲಿ ಸಂಜೆ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಳ್ಳ ಲೆಂದು ಸೇತುವೆಯಿಂದ ಕೆಳಕ್ಕೆ ಹಾರಿದ್ದ. ಕೂಡಲೇ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಸಿಬ್ಬಂದಿ, ಯುವ ಕನ ರಕ್ಷಣಾ ಕಾರ್ಯಾಚರಣೆಯಲ್ಲಿ ನಿರತರಾಗಿದ್ದರು. ಇದನ್ನು ವೀಕ್ಷಿಸಲು 50ಕ್ಕೂ ಹೆಚ್ಚು ಮಂದಿ ಸೇತುವೆಯಲ್ಲಿ ನೆರೆದಿದ್ದರು. ಮೊದಲೇ ಸೇತುವೆಶಿಥಿಲ ಗೊಂಡಿದ್ದ ಕಾರಣ, ಏಕಾಏಕಿ ಅದು ಕುಸಿದು ಬಿತ್ತು. ಪರಿಣಾಮ, ಸೇತುವೆಯಲ್ಲಿದ್ದ ಎಲ್ಲರೂ ನದಿಗೆ ಬಿದ್ದರು.

ಸೇತುವೆ ಕುಸಿದ ಪರಿಣಾಮ, ಅದರ ಮೇಲಿದ್ದ ಸುಮಾರು 50 ಮಂದಿ  ನದಿಗೆ ಬಿದ್ದಿದ್ದಾರೆ. 20 ಮಂದಿ ಈಜಿ ದಡ ಸೇರುವಲ್ಲಿ ಯಶಸ್ವಿಯಾದರೆ, ರಕ್ಷಣಾ ಕಾರ್ಯಾಚರಣೆ ನಡೆಸಿ 14 ಮಂದಿಯನ್ನು ರಕ್ಷಿಸಲಾಗಿದ್ದು, ಈಗಾಗಲೇ  ಇಬ್ಬರ ಮೃತದೇಹಗಳನ್ನು ಹೊರತೆಗೆಯಲಾಗಿದೆ. ಆ ಪೈಕಿ ಒಬ್ಬನನ್ನು ಬಸವರಾಜ್‌ ಮಾಲನವರ ಎಂದು ಗುರುತಿಸಲಾಗಿದ್ದು, ಇವರು ಕರ್ನಾಟಕದವರಿರಬ ಹುದು ಎಂದು ಶಂಕಿಸಲಾಗಿದೆ.

ಮುಖ್ಯಮಂತ್ರಿ ಮನೋಹರ್‌ ಪರ್ರಿಕರ್‌ ಅವರು ಘಟನೆಯ ಕುರಿತು ದಿಗ್ಭ್ರಮೆ ವ್ಯಕ್ತ ಪಡಿಸಿದ್ದು,ರಕ್ಷಣಾ ಕಾರ್ಯ ನಡೆಯುತ್ತಿದ್ದು ಎಷ್ಟು ಮಂದಿ ನೀರು ಪಾಲಾಗಿದ್ದಾರೆ ಎನ್ನುವ ಲೆಕ್ಕಾಚಾರ ಸ್ಪಷ್ಟವಾಗಿ ತಿಳಿಯುತ್ತಿಲ್ಲ, ಭಾರೀ ಸಂಖ್ಯೆಯಲ್ಲಿ ನೌಕಾಪಡೆಯ ಸಿಬಂದಿಗಳು ಹುಡುಕಾಟ ನಡೆಸುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಸಚಿವ ಸುಧೀನ್‌ ಧವಳಿಕರ್‌ ಅವರು ಸ್ಥಳದಲ್ಲಿದ್ದಾರೆ. ಸೇತುವೆ ಸಂಪರ್ಕವನ್ನು ಈಗಾಗಲೇ ಬಂದ್‌ ಮಾಡಲಾಗಿತ್ತು. ಆದರೆ ಆತ್ಮಹತ್ಯೆ ಮಾಡಿಕೊಂಡ ಯುವಕನನ್ನು ನೋಡಲು ಬಂದ ಜನರು ಬ್ಯಾರಿಕೇಡ್‌ಗಳನ್ನು ತೆರವುಗೊಳಿಸಿ ಶಿಥಿಲಗೊಂಡ ಸೇತುವೆಯ ಮೇಲೆ ನಿಂತಿದ್ದರಿಂದ ದುರಂತ ಸಂಭವಿಸಿದೆ ಎಂದು ತಿಳಿಸಿದ್ದಾರೆ.

ನೌಕಾಪಡೆಯ 9 ಮಂದಿ ನುರಿತ ಈಜುಗಾರರು,ಜೆಮಿನಿ ಬೋಟ್‌ಗಳು ಮತ್ತು ಅಗತ್ಯ ಸಲಕರಣೆಗಳ ಮೂಲಕ ಸ್ಥಳದಲ್ಲಿ ನಾಪತ್ತೆಯಾದವರಿಗಾಗಿ ಹುಡುಕಾಟ ನಡೆಸಲಾಗುತ್ತಿದೆ. ಕಾರ್ಯಾಚರಣೆ ಮುಂದುವರಿದಿದ್ದು,ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಗಳಿವೆ.

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

dinetmedia