ಬೈಂದೂರು ರೈಲ್ವೆ ನಿಲ್ದಾಣವನ್ನು ’ ಹೆರಿಟೇಜ್ ನಿಲ್ದಾಣ ” ವಾಗಿ ಪರಿವರ್ತಿಸಿ : ಯಡಿಯೂರಪ್ಪ ಒತ್ತಾಯ

0
220

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (18) ಸಮ್ಮತ (0) ಅಸಮ್ಮತ (0) ಖಂಡಿಸುವೆ (4) ಅಭಿಪ್ರಾಯವಿಲ್ಲ (0)

byndoor_station1

ವಿವಿಧ ರಾಜ್ಯಗಳಿಂದ ಕೊಲ್ಲೂರು ಕ್ಷೇತ್ರಕ್ಕೆ ಬರುವ ಯಾತ್ರಾರ್ಥಿಗಳು ಈ ನಿಲ್ದಾಣವನ್ನು ಬಳಸುವುದರಿಂದ ಇದು ಕೊಂಕಣ ರೈಲ್ವೆಯ ಮಹತ್ವದ ನಿಲ್ದಾಣವಾಗಿದೆ. ಆದುದರಿಂದ ಇದನ್ನು ಗೋಕರ್ಣ ನಿಲ್ದಾಣದಂತೆ ಹೆರಿಟೇಜ್ ನಿಲ್ದಾಣವಾಗಿ ರೂಪಿಸಬೇಕು…

ಬೈಂದೂರು:  ಶಿವಮೊಗ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಬೈಂದೂರಿನ ರೈಲ್ವೆ ನಿಲ್ದಾಣವು ರಾಜ್ಯದ ಪೌರಾಣಿಕ ಮತ್ತು ಐತಿಹಾಸಿಕ ಮಹತ್ವದ ಕೊಲ್ಲೂರು ಮೂಕಾಂಬಿಕಾ ದೇವಿಯ ಹೆಸರಿನಿಂದ ಗುರುತಿಸಿಕೊಂಡಿದೆ.

ವಿವಿಧ ರಾಜ್ಯಗಳಿಂದ ಕೊಲ್ಲೂರು ಕ್ಷೇತ್ರಕ್ಕೆ ಬರುವ ಯಾತ್ರಾರ್ಥಿಗಳು ಈ ನಿಲ್ದಾಣವನ್ನು ಬಳಸುವುದರಿಂದ ಇದು ಕೊಂಕಣ ರೈಲ್ವೆಯ ಮಹತ್ವದ ನಿಲ್ದಾಣವಾಗಿದೆ. ಆದುದರಿಂದ ಇದನ್ನು ಗೋಕರ್ಣ ನಿಲ್ದಾಣದಂತೆ ಹೆರಿಟೇಜ್ ನಿಲ್ದಾಣವಾಗಿ ರೂಪಿಸಬೇಕು ಎಂದು ಸಂಸದ ಬಿ. ಎಸ್. ಯಡಿಯೂರಪ್ಪ ಕೇಂದ್ರ ರೈಲ್ವೆ ಸಚಿವ ಸುರೇಶ ಪ್ರಭು ಅವರಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.

‘ಈ ನಿಲ್ದಾಣವನ್ನು ಮುಖ್ಯವಾಗಿ ರಾಜ್ಯದಲ್ಲಿ ತಮ್ಮ ಸರ್ಕಾರವಿದ್ದಾಗ ಬಿಡುಗಡೆಗೊಳಿಸಿದ ಅನುದಾನದಿಂದ ಅಭಿವೃದ್ಧಿ ಪಡಿಸಲಾಗಿತ್ತು. ಇದು ನಿಲುಗಡೆ ನಿಲ್ದಾಣವಾದರೂ ಇಲ್ಲಿ ಪ್ರಯಾಣಿಕರ ಸೀಟು ಕಾದಿರಿಸುವಿಕೆ ಸೌಲಭ್ಯ ಕಲ್ಪಿಸಲಾಗಿದೆ. ಬೈಂದೂರು– ಕಾಸರಗೋಡು ರೈಲು ಇಲ್ಲಿಂದ ಹೊರಡುತ್ತದೆ.

ಇದಕ್ಕೆ ಹೆರಿಟೇಜ್ ನಿಲ್ದಾಣವಾಗುವ ಎಲ್ಲ ಅರ್ಹತೆ ಇದೆ. ಇಲ್ಲಿ ಲೂಪ್ ಲೈನ್‌ಗಳನ್ನು ಒದಗಿಸಿ ಕ್ರಾಸಿಂಗ್ ನಿಲ್ದಾಣವನ್ನಾಗಿ ಮಾಡಬೇಕು. ವಿಶ್ವದರ್ಜೆಯ ಸಕಲ ಸೌಲಭ್ಯಗಳನ್ನು ಸೃಷ್ಟಿಸಬೇಕು’ ಎಂದು ಅವರು ಆಗ್ರಹಿಸಿದ್ದಾರೆ.

ಬೈಂದೂರು ಮೂಕಾಂಬಿಕಾ ರೋಡ್ ಹೆರಿಟೇಜ್ ನಿಲ್ದಾಣದ ವಾಸ್ತು ಶಿಲ್ಪಿಯ ಕಲ್ಪನೆಯ ಮೂರು ಆಯಾಮಗಳ ಚಿತ್ರವನ್ನು ಮನವಿ ಜತೆಗೆ ನೀಡಲಾಗಿದೆ ಎಂದು ಇಲ್ಲಿನ ಮೂಕಾಂಬಿಕಾ ರೈಲ್ವೆ ಯಾತ್ರಿ ಸಂಘದ ಅಧ್ಯಕ್ಷ ಕೆ. ವೆಂಕಟೇಶ ಕಿಣಿ  ತಿಳಿಸಿದ್ದಾರೆ.

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (18) ಸಮ್ಮತ (0) ಅಸಮ್ಮತ (0) ಖಂಡಿಸುವೆ (4) ಅಭಿಪ್ರಾಯವಿಲ್ಲ (0)

dinetmedia