ಬೈಂದೂರು : ಶ್ರೀ ಈಶ್ವರ ಮಾರಿಕಾಂಬಾ ದೇವಸ್ಥಾನ ಕಳವಾಡಿ ಇದರ ಅಮೂಲಾಗ್ರ ಜೀಣೋದ್ಧಾರ ಹಾಗೂ ನೂತನ ಗರ್ಭಗುಡಿ ಶಿಲಾನ್ಯಾಸ

0
166

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (1) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ಶ್ರೀ ಈಶ್ವರ ಗರ್ಭಗುಡಿಯನ್ನು ಧಾರ್ಮಿಕ ಮುಖಂಡರಾದ ಬಿ.ಅಪ್ಪಣ್ಣ ಹೆಗ್ಡೆಯವರು ನೆರವೇರಸಿದರು ಹಾಗೂ ಶ್ರೀ ಮಾರಿಕಾಂಬ ಗರ್ಭಗುಡಿಯನ್ನು ಬೈಂದೂರಿನ ಶಾಸಕರಾದ ಸನ್ಮಾನ್ಯ ಶ್ರೀ ಕೆ.ಗೋಪಾಲ ಪೂಜಾರಿಯವರು ನೆರವೇರಿಸಿದರು.

 ಬೈಂದೂರು ಮೇ.18 : ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಬೈಂದೂರು ಗ್ರಾಮದ ಇತಿಹಾಸ ಪ್ರಸಿದ್ಧ ಕಳವಾಡಿ ಶ್ರೀ ಈಶ್ವರ ಮಾರಿಕಾಂಬ ದೇವರ ದಿವ್ಯ ಸನ್ನಿಧಿಯಲ್ಲಿ ಗುರುವಾರ ಬೆಳಿಗ್ಗೆ ಶ್ರೀ ದೇವರ ಅಮೂಲಾಗ್ರ ಜೀಣೋದ್ಧಾರ ಹಾಗೂ ನೂತನ ಶಿಲಾಮಯ ಗರ್ಭಗುಡಿಯ ಶಿಲಾನ್ಯಾಸವನ್ನು  ವೇ|ಮೂ| ಕುತ್ಯಾರ ಕೇಂಜಿ ಶ್ರೀಧರ ತಂತ್ರಿಗಳ ನೇತೃತ್ವದಲ್ಲಿ ಧಾರ್ಮಿಕ ವಿಧಿ ವಿಧಾನದಿಂದ ನಡೆಯಿತು.

Kaluvadi 02 Kaluvadi 05

ಶ್ರೀ ಈಶ್ವರ ಗರ್ಭಗುಡಿಯನ್ನು ಧಾರ್ಮಿಕ ಮುಖಂಡರಾದ ಬಿ.ಅಪ್ಪಣ್ಣ ಹೆಗ್ಡೆಯವರು ನೆರವೇರಸಿ ಹಾಗೂ ಶ್ರೀ ಮಾರಿಕಾಂಬ ಗರ್ಭಗುಡಿಯನ್ನು ಬೈಂದೂರಿನ ಶಾಸಕರಾದ ಹಾಗೂ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷರಾದ ಸನ್ಮಾನ್ಯ ಶ್ರೀ ಕೆ.ಗೋಪಾಲ ಪೂಜಾರಿಯವರು ನೆರವೇರಿಸಿದರು.

Kaluvadi 03 Kaluvadi 04

ಈ ಸಂದರ್ಭದಲ್ಲಿ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ಆಡಳಿತ ಧರ್ಮದರ್ಶಿಯಾದ ಹರೀಶ ಕುಮಾರ್ ಶೆಟ್ಟಿ, ಬಿ.ಜಗನ್ನಾಥ ಶೆಟ್ಟಿ ನಿವೃತ್ತ ಐಎಫ್‍ಎಸ್ ಅಧಿಕಾರಿ,ಬಿ.ಎಂ.ಸುಕುಮಾರ್ ಶೆಟ್ಟಿ ಮಾಜಿ ಆಡಳಿತ ಧರ್ಮದರ್ಶಿ ಶ್ರೀಕ್ಷೇತ್ರ ಕೊಲ್ಲೂರು ಮುತ್ತಯ್ಯ ಪೂಜಾರಿ ಪ್ರಥಮ ದರ್ಜೆ ಗುತ್ತಿಗೆದಾರರು ಬೈಂದೂರು, ವಸಂತ ಹೆಗ್ಡೆ ಸೀನಿಯರ್ ಸಿಟಿಜನ್ ಅಧ್ಯಕ್ಷರು ಬೈಂದೂರು, ವೆಂಕ್ಟ ಪೂಜಾರಿ ಸದಸ್ಯರು ಗ್ರಾ.ಪಂ ಬೈಂದೂರು, ನಾಗಯ್ಯ ದೇವಾಡಿಗ ನಿವೃತ್ತ ಅಧ್ಯಾಪಕ ಕಳವಾಡಿ, ಮಂಜು ಮೊಗವೀರ ಭೂಸಕ್ರೆಮನೆ ಗರ್ಜಿನಿತ್ಲು ಯಡ್ತರೆ,  ಶ್ರೀಮತಿ ಮಾಲತಿ ಸದಸ್ಯೆ  ತಾ.ಪಂ ಬೈಂದೂರು, ಸಂಜೀವ ಆಚಾರ್ಯ ನಿವೃತ್ತ ಅಧ್ಯಾಪಕರು ಕಳವಾಡಿ,ಕಿಶೋರ್ ಕುಮಾರ್ ಕಳವಾಡಿ, ಲಕ್ಷ್ಮಣ ಮೊಗವೀರ ಕಳವಾಡಿ, ಆನಂದ ಶೆಟ್ಟಿ ನಾಕಟ್ಟೆ, ಕುಮಾರ್ ಶೆಟ್ಟಿ ಬೈಂದೂರು ಹಾಗೂ ಊರಿನ ಗ್ರಾಮಸ್ಥರು ಹಾಜರಿದ್ದರು.

Kaluvadi 03

ವರದಿ :  ಬೈಂದೂರು ಡಾಟ್.ಕಾಮ್ ಸಂಪಾದರು

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (1) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

dinetmedia