ಗಂಗೊಳ್ಳಿಯಲ್ಲಿ ಸೌಹಾರ್ದ ಹೊರೆಕಾಣಿಕೆ ಶೋಭಾಯಾತ್ರೆಗೆ ಚಾಲನೆ

0
132

ಹೆಚ್ಚಿನ ಓದುಗರು ಈ ಸುದ್ದಿಯನ್ನು ಸಮ್ಮತ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (1) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ಗಂಗೊಳ್ಳಿ ಮೇ.16 : ಗಂಗೊಳ್ಳಿ ಕೊಸೆಸಾಂವ್ ಅಮ್ಮನವರ ಇಗರ್ಜಿಯ ನವೀಕೃತ ಕಟ್ಟಡದ ಆಶೀರ್ವಚನ ಮತ್ತು ಉದ್ಘಾಟನೆಯ ಪೂರ್ವಭಾವಿಯಾಗಿ ಗಂಗೊಳ್ಳಿಯಲ್ಲಿ ಸೌಹಾರ್ದ ಹೊರೆಕಾಣಿಕೆ ಶೋಭಾಯಾತ್ರೆ ಮಂಗಳವಾರ ಜರುಗಿತು.

16gan1 (2) copy

ಗಂಗೊಳ್ಳಿಯ ಮೇಲ್‍ಗಂಗೊಳ್ಳಿ ಬಳಿ ಸೌಹಾರ್ದ ಹೊರೆಕಾಣಿಕೆ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿದ ಕುಂದಾಪುರದ ಉದ್ಯಮಿ ಅಭಿನಂದನ ಎ.ಶೆಟ್ಟಿ, ಎಲ್ಲರಿಗೂ ಧರ್ಮ ಮುಖ್ಯ. ನಾವು ಧರ್ಮವನ್ನು ಗೌರವಿಸಿದ ಧರ್ಮದ ಆಧಾರದ ಮೇಲೆ ಮುನ್ನಡೆಯಬೇಕು. ಜೊತೆಗೆ ಇನ್ನೊಂದು ಧರ್ಮವನ್ನು ಗೌರವಿಸುವುದು ಅತಿ ಮುಖ್ಯ. ಗಂಗೊಳ್ಳಿಯಂತಹ ಪವಿತ್ರ ಭೂಮಿಯಲ್ಲಿ ಕೊಸೆಸಾಂವ್ ಅಮ್ಮನವರ ನೂತನ ದೇವಾಲಯವನ್ನು ನಿರ್ಮಾನ ಮಾಡಿರುವುದು ಈ ಭೂಮಿಯ ಪಾವಿತ್ರ್ಯತೆಯನ್ನು ಮತ್ತಷ್ಟು ಹೆಚ್ಚಿಸಿದೆ. ಈ ದೇವಾಲಯದ ಮೂಲಕ ಶಾಂತಿ ಸೌಹಾರ್ದತೆಯ ಮೇಲೆ ಬೆಳಕು ಚೆಲ್ಲುವ ಕಾರ್ಯ ನಡೆಯುವಂತಾಗಲಿ. ಎಲ್ಲ ಧರ್ಮದವರು ಒಗ್ಗಟ್ಟಿನಿಂದ ಸಹಬಾಳ್ವೆ ನಡೆಸುವಂತಾಗಲಿ ಎಂದು ಶುಭ ಹಾರೈಸಿದರು.

16gan2 (2) copy 16gan3 (2) copy

ಗಂಗೊಳ್ಳಿಯ ಮೇಲ್‍ಗಂಗೊಳ್ಳಿ ಬಳಿಯಿಂದ ಗಂಗೊಳ್ಳಿ ಚರ್ಚಿನವರೆಗೆ ಹೊರೆಕಾಣಿಕೆಗಳನ್ನು ಹೊತ್ತ ವಾಹನಗಳ ಸೌಹಾರ್ದ ಹೊರೆಕಾಣಿಕೆ ಶೋಭಾಯಾತ್ರೆ ನಡೆಯಿತು. ಡೊಳ್ಳು ಕುಣಿತ, ಹುಲಿವೇಷ, ನಾಸಿಕ್ ಬ್ಯಾಂಡ್ ವಾದನ, ಚಂಡೆ ವಾದನ, ವಿವಿಧ ರೀತಿಯ ವೇಷಭೂಷಣಗಳು ಹೊರೆಕಾಣಿಕೆ ಮೆರವಣಿಗೆಯ ಶೋಭೆಯನ್ನು ಮತ್ತಷ್ಟು ಹೆಚ್ಚಿಸಿತು.

16gan4 copy 16gan5 copy

ಕುಂದಾಪುರ ವಲಯ ಪ್ರಧಾನ ಧರ್ಮಗುರು ರೆ.ಫಾ. ಅನಿಲ್ ಡಿಸೋಜಾ, ಚರ್ಚಿನ ಧರ್ಮಗುರು ರೆ.ಫಾ. ಆಲ್ಬರ್ಟ್ ಕ್ರಾಸ್ತಾ, ಕುಂದಾಪುರ ಸಂತ ಮೇರಿಸ್ ಪ್ರೌಢಶಾಲೆಯ ಪ್ರಾಂಶುಪಾಲ ರೆ.ಫಾ. ಪ್ರವೀಣ್ ಮಾರ್ಟಿಸ್, ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷ ಜೆರಾಲ್ಡ್ ಕ್ರಾಸ್ತಾ, ಕಾರ್ಯದರ್ಶಿ ಪ್ರೀತಿ ಫೆರ್ನಾಂಡಿಸ್, ಕುಂದಾಪುರ ರೋಜರಿ ಕ್ರೆಡಿಟ್ ಕೋ.ಆಪರೇಟಿವ್ ಸೊಸೈಟಿ ಅಧ್ಯಕ್ಷ ಜಾನ್ಸನ್ ಅಲ್ಮೇಡಾ, ಗಂಗೊಳ್ಳಿ ಸ್ಟೆಲ್ಲಾ ಮಾರೀಸ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಸಿಸ್ಟರ್ ಜ್ಯೂಲಿಯಾನ್, ತಾಪಂ ಸದಸ್ಯ ರಾಜು ದೇವಾಡಿಗ, ಕುಂದಾಪುರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷ ಶರತ್‍ಕುಮಾರ್ ಶೆಟ್ಟಿ, ಚರ್ಚಿನ ಪಾಲನಾ ಮಂಡಳಿಯ ಸದಸ್ಯರು, ಭಕ್ತವೃಂದದವರು, ಮತ್ತಿತರರು ಉಪಸ್ಥಿತರಿದ್ದರು.

ವರದಿ : ಬಿ.ನರಸಿಂಹ ನಾಯಕ್ ಉಪ್ಪುಂದ

ಹೆಚ್ಚಿನ ಓದುಗರು ಈ ಸುದ್ದಿಯನ್ನು ಸಮ್ಮತ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (1) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

dinetmedia