ಬೈಂದೂರಿನ ಯುವ ಪ್ರತಿಭೆ ಗೊಂಬೆ ನ್ಯತೃದ ಸುಹಾಸ್ ದೇವಾಡಿಗ

0
703

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (10) ಸಮ್ಮತ (1) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ಬೈಂದೂರು ಎ.26 : ಒಬ್ಬ ವ್ಯಕ್ತಿಯಲ್ಲಿ ಸುಪ್ತವಾಗಿ ಅಡಗಿರುವ ಯುವ ಪ್ರತಿಭೆ ಯಾವ ಕ್ಷಣದಲ್ಲಿ ಮತ್ತು ಯಾವ ಸಂದರ್ಭದಲ್ಲಿ ಅರಳಿ ವಿಕಾಸ ಹೊಂದಿ ಬೆಳಕಿಗೆ ಬರುತ್ತದೆ ಎಂಬುದು ಯಾರಿಗೂ ತಿಳಿದಿರುವುದಿಲ್ಲ. ಆರಂಭದಲ್ಲಿ ಫಿಲ್ಮಿ ನೃತ್ಯಗಳಿಗೆ ಸೀಮಿತವಾಗಿದ್ದ ಕುಂದಾಪುರ ಭಂಡಾರ್‍ಕಾರ್ಸ್ ವಿದ್ಯಾರ್ಥಿ ಸುಹಾಸ್ ದೇವಾಡಿಗ ಈತ ಕಾಲೇಜು ವಾರ್ಷಿಕೋತ್ಸವ ದಿನದಂದು ಗೊಂಬೆ ನೃತ್ಯದಂತಹ ಅಪೂರ್ವ ಹಾಗೂ ಅತ್ಯಂತ ವಿಶಿಷ್ಟ ಶೈಲಿಯ ನೈಪುಣ್ಯ ಸಾಧಿಸಿದ್ದು, ಹೀಗೆ ಇವನು ಯೂಟ್ಯೂಬ್‍ನಲ್ಲಿ ಗೊಂಬೆಗಳನ್ನು ತಯಾರಿಸಿ ಬಗ್ಗೆ ಅದನ್ನು ಹಿಡಿದುಕೊಂಡಯ ನರ್ತಿಸುವುದನ್ನು ನೋಡಿದ ಹುಡುಗನಿಗೆ ತಾನೂ ಇದನ್ನು ಮಾಡಿ ಸಾಧಿಸಬೇಕು ಎಂಬ ಛಲ ಬಂದಿತ್ತು. ಈತನ ಒಳಗಿದ್ದ ಅದ್ಬುತ ಕಲಾವಿದ ಎಚ್ಚೆತ್ತುಕೊಂಡು, ಈ ಗೊಂಬೆಯ ಕೆಲಸ ಸವಾಲಾಗಿ ತೆಗೆದುಕೊಂಡು ಕಾರ್ಯತತ್ವನಾಗಿದ್ದ.

Sushas byndoor

ಗೊಂಬೆ ತಯಾರಿಸುವುದು ಏನೂ ಏನೂ ಬೇಕು
ಬಳಸಿ ಬಿಸಾಕಿದ ವಿದ್ಯುತ್ ವಯರ್ಸ್‍ಗಳು, ಕಡ್ಡಿ, ಪ್ಲೇಟುಗಳು ಸುಹಾಸ್‍ನ ಸುತ್ತ ಮುತ್ತ ಕುಳಿತವು, ವೈವಿಧ್ಯಮಯ ಶೈಲಿ-ಆಕಾರಗಳ ಗೊಂಬೆಗಳು ಅವನ ಕೈಚಳಕದಲ್ಲಿ ಸಿದ್ದವಾದವು. ಈತನ ತಮ್ಮ, ಅಪ್ಪ ಮತ್ತು ಅಮ್ಮ ಕೂಡಾ ಮಗನ ಕೆಲಸಕ್ಕೆ ಕೈ ಜೋಡಿಸಿದರು ಅನ್ನುತ್ತಾನೆ. ಸುಹಾಸ್ ಎಲ್ಲ ಗೊಂಬೆಗಳನ್ನೂ ಒಂದು ದಪ್ಪ ತೊಲೆಗೆ ನೀಟಾಗಿ ಸಿಕ್ಕಿಸಿ ತಲೆಯ ಹಿಂದಿನಿಂದ ಭುಜಗಳ ಮೇಲೆ ಹಾದು ಹೋಗುವಂತೆ ಹೊತ್ತಕೊಂಡು ನೃತ್ಯಭ್ಯಾಸ ಮಾಡಿತೊಡಿಗಿದ ನೈಪುಣ್ಯ ಸಾಧಿಸಿದ ನಂತರ ಕಾಲೇಜಿನಲ್ಲಿ ಪ್ರದರ್ಶನ ನೀಡಿದ.

ಕಾಲೇಜಿನ ವಾಷಿಕೋತ್ಸವದ ಸಂದರ್ಭದಲ್ಲಿ ನಡೆದ ಅಂತರ ತಗರತಿ ಸ್ಪರ್ಧೆಯಲ್ಲಿ ಸುಹಾಸ್‍ನ ಗೊಂಬೆನೃತ್ಯ ಪ್ರದರ್ಶನವು ಪ್ರೇಕ್ಷಕರ ಭರ್ಜರಿ ಮೆಚ್ಚುಗೆ ಗಳಿಸಿತು. ಧ್ವನಿ ಸುರುಳಿಯ ಹಾಡಿಗೆ ಸರಿಯಾಗಿ ಗೊಂಬೆಗಳ ಕೈಕಾಲು ಚಲನೆ, ಮುಖಭಾವಗಳು ಬದಲಾಗುವುದೇ ಇದರ ಪ್ರದಾನ ಆಕರ್ಷಣೆ. ಈ ಕಲೆಯನ್ನು ಇನ್ನಷ್ಟು ಉತ್ತಮಗೊಳಿಸಿ ಸಾರ್ವಜನಿಕ ಪ್ರದರ್ಶನಗಳನ್ನೂ ನೀಡಿದರೆ ಸುಹಾಸ್ ಯಶಸ್ಸು ಗಳಿಸುವುದರಲ್ಲಿ ಯಾವ ಸಂದೇಹವೂ ಇಲ್ಲ.

SUSHAS

ಗೊಂಬೆ ನೃತ್ಯ ಮಾತ್ರವಲ್ಲದೆ ನಟನೆ ಮತ್ತು ಕಿರುಚಿತ್ರ ನಿರ್ಮಾಣಗಳಲ್ಲೂ ಆತೀವ ಆಸಕ್ತಿ ಹೊಂದಿದ ಸುಹಾಸ್ ಇತ್ತೀಚೆಗಷ್ಟೆ “ಬಿಸಿಕೆ ಕಿರಿಕ್ ಪಾರ್ಟಿ” ಎಂಬ ಕಿರುಚಿತ್ರದ ಷೂಟಿಂಗ್ ಮುಗಿಸಿ ಬಿಡುಗಡೆಗೆ ಸಿದ್ದಪಡಿಸಿದ್ದಾನೆ. ಇಟ್ಟಿನಲ್ಲಿ ಸುಹಾಸ್ ಒಬ್ಬ ಸೃಜನಶೀಲ ಕಲಾವಿದನಾಗಿ ರೂಪುಗೊಳ್ಳುತ್ತಿರುವುದು ಬೈಂದೂರು – ಕುಂದಾಪುರದವರಾದ ನಮೆಗೆಲ್ಲರಿಗೂ ಬಹಳ ಸಂತೋಷದ ವಿಷಯವಾಗಿದೆ.

ಸುಹಾಸ್ ಹುಟ್ಟೂರು ಬೈಂದೂರು, ಪ್ರಸ್ತುತ ಭಂಡಾರ್‍ಕಾರ್ಸ್ ಕಾಲೇಜಿನಲ್ಲಿ ಅಂತಿಮ ಬಿ.ಎ ಓದುತ್ತಿದ್ದಾನೆ.ಹೋಟೆಲ್ ನೌಕರರಾಗಿ ದುಡಿಯುತ್ತಿರುವ ಸುಧಾಕರ ಮತ್ತು ಸರಸ್ವತಿ ದೇವಾಡಿಗ ಇವರ ತೃತೀಯಾ ಪುತ್ರನಾಗಿರುವ ಸುಹಾಸ್‍ನ ಭವಿಷ್ಯ ಕಲಾಕ್ಷೇತ್ರದಲ್ಲಿ ಉಜ್ಜಲವಾಗಲಿ ಎಂದು ಹಾರೈಸುತ್ತೇವೆ.

ವರದಿ : ಎಚ್.ಸುಶಾಂತ್ ಬೈಂದೂರು

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (10) ಸಮ್ಮತ (1) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)