ಸಚಿನ್ ಗಿಲ್ಲ ಗೆಲುವಿನ ಉಡುಗೊರೆ: ಮುಂಬೈಗೆ ಬೆನ್ ಸ್ಟೋಕ್ಸ್ ಶಾಕ್!

0
513

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)
ಮುಂಬೈ: ಟೀಮ್ ಮೆಂಟರ್ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್​ ಅವರ ಹುಟ್ಟುಹಬ್ಬದ ಸಂಭ್ರಮಕ್ಕೆ ಗೆಲುವಿನ ಉಡುಗೊರೆ ನೀಡುವಲ್ಲಿ ಮುಂಬೈ ಇಂಡಿಯನ್ಸ್ ವಿಫಲವಾಗಿದ್ದು, ಸೋಮವಾರ ನಡೆದ ಐಪಿಎಲ್ ಪಂದ್ಯದಲ್ಲಿ  ರೈಸಿಂಗ್ ಪುಣೆ ಸೂಪರ್​ಜೈಂಟ್ ವಿರುದ್ಧ 3 ರನ್ ಗಳ ವಿರೋಚಿತ ಸೋಲು ಕಂಡಿದೆ.

Rising-Pune-Supergiant-won-

ಐಪಿಎಲ್ 10 ಟೂರ್ನಿಯಲ್ಲಿ ಸತತ 6 ಗೆಲುವು ಸಾಧಿಸಿ ಬೀಗುತ್ತಿದ್ದ ರೋಹಿತ್ ಶರ್ಮ ಪಡೆಗೆ ಇದೀಗ ಮತ್ತೆ ಪುಣೆ ತಂಡವೇ ಬ್ರೇಕ್ ಹಾಕಿದ್ದು, ವಾಂಖೆಡೆ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಮುಂಬೈ ತಂಡ  ನಾಯಕ ರೋಹಿತ್ ಶರ್ಮ (58ರನ್, 39 ಎಸೆತ, 6 ಬೌಂಡರಿ, 3 ಸಿಕ್ಸರ್) ಹೋರಾಟದ ನಡುವೆಯೂ ಕೇವಲ 3 ರನ್​ ಗಳಿಂದ ಪುಣೆ ತಂಡಕ್ಕೆ ಶರಣಾಯಿತು.

ಟಾಸ್ ಸೋತು ಬ್ಯಾಟಿಂಗ್ ಇಳಿದ ಪುಣೆ, ವೇಗಿ ಜಸ್​ಪ್ರೀತ್ ಬುಮ್ರಾ(29ಕ್ಕೆ 2) ಮತ್ತು ಸ್ಪಿನ್ನರ್ ಕರ್ಣ್ ಶರ್ಮ(39ಕ್ಕೆ 2) ಶಿಸ್ತಿನ ದಾಳಿಯ ನಡುವೆ 6 ವಿಕೆಟ್​ ಗೆ 160 ರನ್ ದಾಖಲಿಸಿತು. ಪ್ರತಿಯಾಗಿ ಮುಂಬೈ ತಂಡ, ಟೂರ್ನಿಯ  ದುಬಾರಿ ವಿದೇಶಿ ಆಟಗಾರ ಬೆನ್ ಸ್ಟೋಕ್ಸ್ (21ಕ್ಕೆ2) ಶಿಸ್ತಿನ ದಾಳಿಗೆ ಎಡವಿ 8 ವಿಕೆಟ್​ ಗೆ 157 ರನ್ ಗಳಿಸಲಷ್ಟೇ ಶಕ್ತವಾಯಿತು. ಆ ಮೂಲಕ ಪುಣೆ ಎದುರು 3 ರನ್ ಗಳ ವಿರೋಚಿತ ಸೋಲು ಕಂಡಿತು.

ರೋಹಿತ್ ಶರ್ಮ ಜವಾಬ್ದಾರಿಯುತ ಇನಿಂಗ್ಸ್ ಕಟ್ಟಿದರೂ ಗೆಲುವಿನ ಫಿನಿಶ್ ನೀಡಲು ವಿಫಲರಾದರು. ವೇಗಿ ಸ್ಟೋಕ್ಸ್ ಮತ್ತು ಜಯದೇವ್ ಉನಾದ್ಕತ್(40ಕ್ಕೆ2) ಪರಿಣಾಮಕಾರಿ ದಾಳಿ ನಡೆಸಿ ಮುಂಬೈ ಗೆಲುವಿಗೆ ಅಡ್ಡಿಯಾದರು.

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)