ಸಂಭ್ರಮದ ಮದುವೆ ಮನೆಯಲ್ಲಿ ಶೋಕದ ವಾತಾವರಣ

0
646

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (4) ಸಮ್ಮತ (0) ಅಸಮ್ಮತ (3) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ಬೈಂದೂರು ಎ.23: ರಾ.ಹೆದ್ದಾರಿ 66ರ ಶಾಲೆಬಾಗಿಲು ಸಮೀಪ ಕಾರೊಂದು ಬೈಕ್‍ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸಾವನ್ನೊಪ್ಪಿದ ಘಟನೆ ಸಂಭವಿಸಿದೆ.ಸಹ ಸವಾರರಾದ ದಿರ್ಗಿ ಅದೃಷ್ಟದಿಂದ ಪಾರಾಗಿದ್ದಾರೆ. ಕೆ.ಬಿ.ರೋಡ್ ನಾಗುಮನೆ ಗಣೇಶ (31) ಸಾವಿಗೀಡಾದವರು.

Ganesh copy

ಅವರು ಭಟ್ಕಳದಿಂದ ತಮ್ಮ ಮೂಲ ಮನೆ ಪಡುಕೋಣೆಗೆ ಮದುವೆಯ ಆಮಂತ್ರಣ ನೀಡಲು ತೆರಳುತ್ತಿರುವಾಗ ಶಾಲೆಬಾಗಿಲು ಸಮೀಪ ಕಾರೊಂದು ಬೈಕ್‍ಗೆ ಡಿಕ್ಕಿಯಾದ ಪರಿಣಾಮ ರಸ್ತೆಗೆ ಬಿದ್ದರು.ಈ ಸಂದರ್ಭದಲ್ಲಿ ತಲೆರಸ್ತೆಗೆ ಬಡಿದ ಪರಿಣಾಮ ಗಭೀರ ಗಾಯಗೊಂಡಿರುವ ಅವರನ್ನು ಸಾರ್ವಜನಿಕರು ಕುಂದಾಪುರ ಖಾಸಗಿ ಆಸ್ಪತ್ರೆಗೆ ಸಾಗಿಸಿದರು. ಹೆಚ್ಚಿನ ಚಿಕಿತ್ಸೆಗೆ ಉಡುಪಿ ಆಸ್ಪತ್ರಗೆ ಸಾಗಿಸುವ ಮಾರ್ಗ ಮಧ್ಯದಲ್ಲಿ ಮೃತಪಟ್ಟರು.ಹಿಂಬದಿ ಸವಾರರಾದ ತಾಯಿ ದಿರ್ಗಿ ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ.

ಎ.28ಕ್ಕೆ ಮದುವೆ
ವಿದೇಶದಲ್ಲಿ ಉದ್ಯೋಗಿ ಆಗಿರುವ ಗಣೇಶ ಅವರ ಮದುವೆ ಎ.28ಕ್ಕೆ ನಾಗೂರು ಶಾಂತೇರಿ ಕಾಮಾಕ್ಷಿ ಕಲ್ಯಾಣ ಮಂಟಪದಲ್ಲಿ ನಿಗದಿಯಾಗಿದ್ದು ತಮ್ಮ ಮದುವೆಯ ಆಮಂತ್ರಣ ನೀಡಲೇಂದು ತನ್ನ ತಾಯಿ ಜತೆ ಪಡುಕೋಣೆಗೆ ಹೋಗುತ್ತಿರುವಾಗ ಈ ದುಘಟನೆ ನಡೆದಿದೆ.

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (4) ಸಮ್ಮತ (0) ಅಸಮ್ಮತ (3) ಖಂಡಿಸುವೆ (0) ಅಭಿಪ್ರಾಯವಿಲ್ಲ (0)