ನಿಮಗೆ ಜವಾಬ್ದಾರಿಯ ಪ್ರಜ್ಞೆ ಇಲ್ಲ: ಶ್ರೀ ಶ್ರೀ ರವಿಶಂಕರ್ ಗೆ ಕೋರ್ಟ್

0
262

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)
ನವದೆಹಲಿ: ಧಾರ್ಮಿಕ ನಾಯಕ ಶ್ರೀ ಶ್ರೀ ರವಿಶಂಕರ್ ಬಗ್ಗೆ ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದ್ದು, ನಿಮಗೆ ಜವಾಬ್ದಾರಿಯ ಪ್ರಜ್ಞೆ ಇಲ್ಲ ಎಂದು ಹೇಳಿದೆ.
sri-sri-ravishankar-2

 ಯಮುನಾ ನದಿಯ ತೀರದಲ್ಲಿ ಮೂರು ದಿನ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಿಂದ ಪರಿಸರಕ್ಕೆ ಹಾನಿ ಉಂಟಾಗಿದ್ದರೆ, ಅದು ಸರ್ಕಾರ ಹಾಗೂ ಕೋರ್ಟ್ ಹೊಣೆ, ಏಕೆಂದರೆ ಕಾರ್ಯಕ್ರಮ ನಡೆಯಲು ಅನುಮತಿ ಕೊಟ್ಟವರೇ ಅವರು ಎಂದು ಹೇಳಿದ್ದರು. ರವಿಶಂಕರ್ ಅವರ ಈ ಹೇಳಿಕೆಗೆ ಕೆಂಡಾಮಂಡಲವಾಗಿರುವ ಕೋರ್ಟ್, ಮನಸೋಇಚ್ಛೆ ಹೇಳಿಕೆ ನೀಡಲು ನಿಮಗೆ ಸ್ವಾತಂತ್ರ್ಯವಿದೆ ಎಂದು ಕೊಂಡಿದ್ದೀರಾ? ಎಂದು ತರಾಟೆಗೆ ತೆಗೆದುಕೊಂಡಿದೆ. 

ಯಮುನಾ ನದಿ ಪರಿಸರ ಏನಾದರೂ ಹಾಳಾಗುವುದಕ್ಕೆ ದಂಡ ಹಾಕುವುದಾದರೆ ಕಾರ್ಯಕ್ರಮ ನಡೆಸಲು ಅನುಮತಿ ನೀಡಿದ ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ, ಎನ್ ಜಿಟಿಗೇ ದಂಡ ವಿಧಿಸಬೇಕು ಎಂದು ರವಿಶಂಕರ್ ಹೇಳಿದ್ದರು. ಒಂದು ವೇಳೆ ಯಮುನಾ ನದಿಗೆ ಹಾನಿಯುಂಟಾಗಲಿದೆ ಎನ್ನುವುದಾದರೆ ವರ್ಲ್ಡ್ ಕಲ್ಚರ್ ಫೆಸ್ಟಿವಲ್ ಗೆ ತಡೆ ನೀಡಬಹುದಿತ್ತು ಎಂದು ರವಿಶಂಕರ್ ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಕಿಡಿ ಕಾರಿರುವ ಎನ್ ಜಿಟಿ ನಿಮಗೆ ಜವಾಬ್ದಾರಿಯ ಪ್ರಜ್ಞೆ  ಇಲ್ಲ. ಮನಸೋಇಚ್ಛೆ ಹೇಳಿಕೆ ನೀಡಲು ನಿಮಗೆ ಸ್ವಾತಂತ್ರ್ಯವಿದೆ ಎಂದು ಕೊಂಡಿದ್ದೀರಾ? ಎಂದು ಕೇಳಿದೆ.
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)