ಕಲಘಟಗಿ: ಹಣ ದ್ವಿಗುಣಗೊಳಿಸುವುದಾಗಿ ಸಾವಿರಾರು ಜನರಿಗೆ 400 ಕೋಟಿ ರು.ಪಂಗನಾಮ

0
275

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ಧಾರವಾಡ: ಹಣ ದ್ವಿಗುಣಗೊಳಿಸುವುದಾಗಿ 8 ಸಾವಿರ ಮಂದಿಗೆ ಸುಮಾರು 400 ಕೋಟಿ ರು. ಹಣ ವಂಚಿಸಿರುವ ಘಟನೆ ಕಲಘಟಗಿಯಲ್ಲಿ ನಡೆದಿದೆ.

money-500-2000

ಹರ್ಷ ಎಂಟರ್ ಟೈನ್ ಮೆಂಟ್ ಪ್ರೈವೇಟ್ ಲಿಮಿಟೆಡ್ ಹೆಸರಿನಲ್ಲಿ ಹಣ ಪಡೆದು ಅದಕ್ಕೆ ಡಬಲ್ ಹಣ ನೀಡುವುದಾಗಿ ಸಹೋದರರಾದ ಹರ್ಷ ಕಾಸನೀಸ್, ಸಂಜೀವ ಕಾಸನೀಸ್ ಮತ್ತು ಶ್ರೀಕಾಂತ ಕಾಸನೀಸ್ ಎಂಬುವರು ವಂಚಿಸಿದ್ದಾರೆ.ಧಾರವಾಡ, ಗದಗ, ಹಾವೇರಿ, ಬೆಳಗಾವಿಯ ಅನೇತ ,ತಾಲೂಕುಗಳ ಜನ ಕಂಪನಿಯಲ್ಲಿ ಹಣ ಹೂಡಿದ್ದಾರೆ. 2000ನೇ ಇಸವಿಯಲ್ಲಿ ಕಂಪನಿ ಸ್ಥಾಪಿಸಿ ಜನರ ನಂಬಿಕೆ ಸಂಪಾದಿಸಿದ್ದ ಕಂಪನಿ ಕಳೆದ ನವೆಂಬರ್ ವರೆಗೂ ಹೂಡಿಕೆದಗಾರರಿಗೆ ಪ್ರತಿ ತಿಂಗಳು ಶೇ.ರಷ್ಟು ಹಣವನ್ನು ಬಡ್ಡಿ ರೂಪದಲ್ಲಿ ನೀಡುತ್ತಿದ್ದರು. ಆದರೆ 500 ಹಾಗೂ 1000 ರು ನೋಟುಗಳ ನಿಷೇಧದ ನಂತರ ಬಡ್ಡಿ ಹಣ ನೀಡಲಿಲ್ಲ.  ಏಪ್ರಿಲ್ 11 ರಂದು ಹೂಡಿಕೆದಾರರೆಲ್ಲಾ ಕಂಪನಿಯ ಬಳಿ ಹೋದಾಗ ಅವರಿಗೆ ಶಾಕ್ ಆಗಿತ್ತು ಕಂಪನಿಯನ್ನು ಲಾಕ್ ಮಾಡಲಾಗಿತ್ತು, ನಂತರ ಅವರೆಲ್ಲರೂ ಕಂಪನಿ ಮಾಲಿಕರ ಮನೆಗೆ ತೆರಳಿದಾಗ ಅಲ್ಲಿಯೂ ಮನೆಗೆ ಬೀಗ ಹಾಕಿ ಮೂವರು ಸಹೋದರರು ನಾಪತ್ತೆಯಾಗಿದ್ದರು.

ಕಾರ್ಮಿಕ ಸಚಿವ ಸಂತೋಷ್ ಲಾಡ್ ಕಲಘಟಕಿಗೆ ಭೇಟಿ ನೀಡಿದಾಗ ಹಣ ನೀಡಿದ್ದವರು ಪ್ರಕರಣದ ಬಗ್ಗೆ ದೂರು ಹೇಳಿದ್ದಾರೆ, ಕೂಡಲೇ ಎಸ್ ಪಿ ಧರ್ಮೇಂದ್ರ ಮೀನಾ ಅವರ ಜೊತೆ ಮಾತುಕತೆ ನಡೆಸಿದ ಸಂತೋಷ್ ಲಾಡ್ ಮೂವರು ಸಹೋದರರಿಗೆ ಸೇರಿದ ಬ್ಯಾಂಕ್ ಖಾತೆಗಳನ್ನು ಸೀಜ್ ಮಾಡುವಂತೆ ಹೇಳಿದ್ದಾರೆ.ನಂತರ ಹಣ ನೀಡಿದವರ ಜೊತೆ ಸಂತೋಷ್ ಲಾಡ್ ಸಭೆ ನಡೆಸಿದರು, ಕೆಲವರು ಸಾವಿರ ಗಟ್ಟಲೇ, ಇನ್ನೂ ಕೆಲವರು ಲಕ್ಷ ಲಕ್ಷ ಹಣ ಹೂಡಿದ್ದಾರೆ. ಸಣ್ಣ ವ್ಯಾಪಾರಿಗಳು, ರಿಯಲ್ ಎಸ್ಟೇಟ್ ವ್ಯವಹಾರಿಗಳು, ವಕೀಲರು, ರೈತರು, ಶಿಕ್ಷಕರು, ರೈತರು ಮತ್ತು ಟೈಲರ್ ಗಳು ಸೇರಿದಂತೆ ಕೆಲ ಪೊಲೀಸ್ ಸಿಬ್ಬಂದಿ ಕೂಡ ಹರ್ಷ ಎಂಟರ್ಟೈನ್ ಮೆಂಟ್ ಪ್ರೈವೆಟ್ ಲಿಮಿಟೆಡ್ ನಲ್ಲಿ ಹಣ ಹೂಡಿದ್ದಾರೆ.

ಹಣ ಹೂಡಿದವರ ಸ್ಥಿತಿ ಕಂಡು ಸಂತೋಷ್ ಲಾಡ್ ಮರುಗಿದ್ದಾರೆ, ಹೂಡಿಕೆದಾರರಿಗೆ ನ್ಯಾಯ ಒದಗಿಸಿಕೊಡುವ ಭರವಸೆ ನೀಡಿದ್ದಾರೆ. ನಾನು ಕಂಪನಿಯ ಮಾಲೀಕರಿಗೆ ವಾಪಸ್ ಬರುವಂತೆ ಹೇಳಿದ್ದೇನೆ, ಅವರು ಹಣ ದುಪ್ಪುಟ್ಟು ನೀಡುವುದು ಬೇಡ, ಪ್ರತಿಯೊಬ್ಬರು ನೀಡಿರುವ ಅಸಲು ಹಣವನ್ನು ನೀಡಬೇಕೆಂದು ಹೇಳಿದ್ದಾನೆ ಎಂದು ಸಂತೋಷ್ ಲಾಡ್ ತಿಳಿಸಿದ್ದಾರೆ,

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)