ಶ್ರೀ ಮಾರಿಕಾಂಬಾ ಯೂತ್ ಕ್ಲಬ್ (ರಿ.) ಕಳವಾಡಿ ಇವರ 12ನೇ ವರ್ಷದ ವಾರ್ಷಿಕೋತ್ಸವ ಸಮಾರಂಭ

0
595

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ಬೈಂದೂರು ಎ.16 : ಶ್ರೀ ಮಾರಿಕಾಂಬಾ ಯೂತ್ ಕ್ಲಬ್ (ರಿ.) ಕಳವಾಡಿ-ಬೈಂದೂರು ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಉಡುಪಿ ಇವರ ಸಹಯೋಗದೊಂದಿಗೆ 12ನೇ ವರ್ಷದ ವಾರ್ಷಿಕೋತ್ಸವ ಸಮಾರಂಭ ಶನಿವಾರ ಸಂಜೆ ಕಳವಾಡಿಯಲ್ಲಿ ನಡೆಯಿತು.

Byndoor A-1601 copy Byndoor A-1602 copy

ಬಿ.ಜಗನ್ನಾಥ ಶೆಟ್ಟಿ ನಿವೃತ್ತ ಐಎಫ್‍ಐ ಅಧಿಕಾರಿ ಸಮಾರಂಭ ಉದ್ಘಾಟಿಸಿದರು, ಪ್ರದೀಪ್ ಕುಮಾರ್ ಶೆಟ್ಟಿ ಕಾರಿಕಟ್ಟೆ ಅಧ್ಯಕ್ಷತೆ ವಹಿಸಿದರು, ದಾರ್ಮಿಕ ಮುಖಂಡರಾದ ಬಿ.ಅಪ್ಪಣ್ಣ ಹೆಗ್ಡೆ ಶುಭಶಂಸನೆ ಮಾಡಿದರು, ಮುಖ್ಯ ಅತಿಥಿಗಳಾಗಿ ವಸಂತ ಹೆಗ್ಡೆ ಅಧ್ಯಕ್ಷರು ಸೀನಿಯರ್ ಸಿಟಿಜನ್ ಅಸೋಸಿಯೇಷನ್ ಬೈಂದೂರು, ರಾಮಕೃಷ್ಣ ಕಾಟುಕುಕ್ಕೆ ಕಾಸರಗೋಡು ದಾಸ ಸಂಕೀರ್ತನಕಾರರು, ರವಿ ಶೆಟ್ಟಿ, ಅಧ್ಯಕ್ಷರು ಕರ್ನಾಟಕ ಕಾರ್ಮಿಕ ವೇದಿಕೆ (ರಿ.) ಉಡುಪಿ, ಕೃಷ್ಣಯ್ಯ ಶೇಗುರಾರ್ ನಿವೃತ್ತ ಪ್ರೌಡಶಾಲಾ ಶಿಕ್ಷಕರು ಮಯ್ಯಾಡಿ, ಕಿರುಕಿ ಬಾಬು ಪೂಜಾರಿ ಉದ್ಯಮಿಗಳು ಮುಂಬೈ ಮೊದಲಾದವರು ಉಪಸ್ಥಿತಿದ್ದರು.

Byndoor A-1603 copy Byndoor A-1604 copy

ಈ ಸಂದರ್ಭದಲ್ಲಿ ಸಾಮೂಹಿಕ ಸತ್ಯನಾರಾಯಣ ಪೂಜೆಯ ಮಹಾಅನ್ನಸಂತರ್ಪಣೆ ಸೇವಾಕರ್ತರರಾದ ಶ್ರೀಮತಿ ಮತ್ತು ಶ್ರೀ ಬಾಬು ಪೂಜಾರಿ ಕಿರುಕಿ ಹೊಂಡದಾಳಿಮನೆ ವಸ್ರೆ ಇವರಿಗೆ ಸಮ್ಮಾನಿಸಿದರು. ಹಾಗೇ ಯುವ ಪತ್ರಕರ್ತರು ಹಾಗೂ ಕುಂದಾಪ್ರ ಡಾಟ್ ಕಾಮ್ ಸಂಪಾದಕರು ಸುನಿಲ್ ಜಿ.ಹೆಚ್. ಮತ್ತು ಸುದರ್ಶನ್ ಆಚಾರ್ಯ ಕಳುವಾಡಿ ಇವರಿಗೆ ಗೌರವಿಸಿ ಸಮ್ಮಾನಿಸಿದರು.

ಗುರುರಾಜ್ ಸ್ವಾಗತಿಸಿ/ಪ್ರಾಸ್ತಾಮಿಕ ಮಾತುಗಳನ್ನಾಡಿದರು, ಸುಬ್ರಹ್ಮಣ್ಯ ಜಿ.ಉಪ್ಪುಂದ ಕಾರ್ಯಕ್ರಮ ನಿರ್ವವಹಿಸಿ/ವಂದಿಸಿದರು.

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)