ಎ. 15 ರಂದು ಗಲ್ಫ್ ಕನ್ನಡಿಗ ಬಿ.ಜಿ. ಮೋಹನ್‍ದಾಸ್‍ರವರ ಕುರಿತಾದ ಕೃತಿ ಬಿಡುಗಡೆ

0
707

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (3) ಸಮ್ಮತ (0) ಅಸಮ್ಮತ (0) ಖಂಡಿಸುವೆ (1) ಅಭಿಪ್ರಾಯವಿಲ್ಲ (0)

ಬೈಂದೂರು ಎ.13 : 80ರ ದಶಕದ ಹಾದಿಯಲ್ಲಿ ಮಣಿಪಾಲದಿಂದ ಗಲ್ಫ್ ಸೇರಿದ ಬಿ.ಜೆ. ಮೋಹನ್ ದಾಸ್‍ರವರು ಯುಎಇಯ ದುಬಾೈಯಲಿ ಗಲ್ಫ್ ಕನ್ನಡಿಗರನ್ನು ಸಂಘಟಿಸಿ ಕರ್ನಾಟಕ ಸಂಘವನ್ನು ಕಟ್ಟಿದವರಲ್ಲೊಬ್ಬರು. ದುಬಾೈ ಕರ್ನಾಟಕ ಸಂಘದ ಅಧ್ಯಕ್ಷರಾಗಿ ಕನ್ನಡದ ತನ್ನ ಹಲವಾರು ಕಾರ್ಯಕ್ರಮಗಳ ಮೂಲಕ ಕನ್ನಡ ಭಾಷೆಗೆ ಸೇವೆ ಸಲ್ಲಿಸಿದವರು. ಸುಮಾರು 40 ವರ್ಷಗಳ ನಿರಂತರ ಸಾಹಿತ್ಯ ಸಂಸ್ಕøತಿ ಸಮಾಜ ಸೇವೆಯ ಮೂಲಕ ಜನಮನ ಗೆದ್ದವರು. ಅವರು ಹಟ್ಟುಹಾಕಿದ ಗಲ್ಫ್ ಕನ್ನಡಿಗ ಡಾಟ್ ಕಾಮ್ ಮಟ್ಟದಲ್ಲಿ ಖ್ಯಾತಿ ಪಡೆದಿದೆ.B.G Mohan. Das

‘ನಾಡಿನ ನಮಸ್ಕಾರ’ ಎನ್ನುವ ಕಾಂತವಾರ ಕನ್ನಡ ಸಂಘದ ಗ್ರಂಥಮಾಲೆ ವಿಶೇಷವಾಗಿ ಕನ್ನಡ ಭಾಷೆ ಮತ್ತು ಕಲೆಗೆ ನೀಡಿದ ವ್ಯಕ್ತಿಗಳ ಸೇವೆಯನ್ನು ಗುರುತಿಸಿ, ಅವರ ಬಗ್ಗೆ ಕೃತಿ ರಚಿಸಿ ಬಿಡುಗಡೆಗೊಳಿಸುವ ಕೆಲಸ ಸುಮಾರು ಮೂವತ್ತು ವರ್ಷಗಳಿಂದ ನಡೆಯುತ್ತಿದ್ದು ಈ ಬಾರಿಯ ವ್ಯಕ್ತಿ ಆಯ್ಕೆಗಳಲ್ಲಿ ಗಲ್ಫ್ ಕನ್ನಡಿಗ ಬಿ.ಜೆ. ಮೋಹನ್‍ರವರು ಕೂಡ ಒಬ್ಬರು. ಅವರ ಬಗ್ಗೆ ಕೃತಿಯನ್ನು ರಚಿಸಿದವರು ಸಾಹಿತಿ ಅಂಶುಮಾಲಿಯವರು.

ಕೃತಿ ಅನಾವರಣ ಮತ್ತು ಅಭಿನಂದನಾ ಕಾರ್ಯಕ್ರಮವನ್ನು ಉಡುಪಿಯ ಸುಹಾಸಂರವರು ಎ.15ರಂದು ಶನಿವಾರ ಬೆಳಿಗ್ಗೆ 11 ಗಂಟೆಗೆ ಕಿದಿಯೂರು ಹೊಟೇಲ್‍ನ ಮಹಾಜನ ಸಭಾ ಭವನದಲ್ಲಿ ಸಾದರಪಡಿಸುತ್ತಿದ್ದಾರೆ. ಮಾಜಿ ಕೇಂದ್ರ ಸಚಿವ ಮತ್ತು ರಾಜ್ಯಸಭಾ ಸದಸ್ಯರಾದ ಆಸ್ಕರ್ ಫೆರ್ನಾಂಡೀಸ್‍ರವರು ಕೃತಿ ಅನಾವರಣ ಮಾಡಿ ಅಭಿನಂದಿಸಲಿರುವರು.

ಕಾರ್ಯಕ್ರಮದ ಅತಿಥಿಗಳಾಗಿ ಕಾಂತವಾರ ಕರ್ನಾಟಕ ಸಂಘದ ಅಧ್ಯಕ್ಷರಾದ ಸಾಹಿತಿ ಡಾ.ನಾ, ಮೊಗಸಾಲೆ, ಹಿರಿಯ ಪತ್ರಕರ್ತರಾದ ಎನ್. ಗುರುರಾಜ್, ಸಾಹಿತಿ ಅಂಶುಮಾಲಿ ಸುಹಾಸಂನ ಅಧ್ಯಕ್ಷರಾದ ಎಚ್. ಶಾಂತರಾಜ್ ಐತಾಳ್ ಹಾಗೂ ಕಾರ್ಯದರ್ಶಿ ಎಚ್.ಗೋಪಾಲ ಭಟ್ಟ (ಕು.ಗೋ) ಉಪಸ್ಥಿತರಿರುವರು.

ಸಾಹಿತ್ಯಾ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮನಿಸಿ ಕಾರ್ಯಕ್ರಮನ್ನು ಚಂದಗಾಣಿಸಬೇಕಾಗಿ ಸಂಘಟಕರು ಪ್ರಕಟನೆ ಮೂಲಕ ವಿನಂತಿಸಿರುತ್ತಾರೆ.

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (3) ಸಮ್ಮತ (0) ಅಸಮ್ಮತ (0) ಖಂಡಿಸುವೆ (1) ಅಭಿಪ್ರಾಯವಿಲ್ಲ (0)