ಶ್ರೀ ನಂದಿಕೇಶ್ವರ ದೈವಸ್ಥಾನ ಬಿಜೂರು ಮೂರ್ಗೋಳಿಹಕ್ಲು : ಎ.14-16 ವಾರ್ಷಿಕೋತ್ಸವ, ಗೆಂಡ ಸೇವೆ

0
382

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (6) ಸಮ್ಮತ (1) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ಬೈಂದೂರು ಎ.11 : ಬಿಜೂರು ಮೂರ್ಗೋಳಿಹಕ್ಲು ಪುರಾತನ ಪ್ರಸಿದ್ಧ ವರ್ಷದ 365ದಿನಗಳಲ್ಲೂ ಭಕ್ತರಿಂದಲೇ ಮುಟ್ಟಿ ಪೂಜಿಸಲ್ಪಡುವ ಶ್ರೀ ನಂದಿಕೇಶ್ವರ ದೈವಸ್ಥಾನದ ವಾರ್ಷಿಕೋತ್ಸವ, ಏಕಾಹ ಅಖಂಡ ಭಜನಾ ಕಾರ್ಯಕ್ರಮ ಹಾಗೂ ಗೆಂಡ ಸೇವೆಯು ಎ.14ರಿಂದ 16ರ ವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.

1004uppe2 copy

ಎ.14ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಶ್ರೀ ನಂದಿಕೇಶ್ವರ ಪರಿವಾರ ದೈವಗಳ ಹಾಗೂ ಶ್ರೀ ನಾಗ ದೇವರ ವಾರ್ಷಿಕ ಮಹೋತ್ಸವ ನೆರವೇರಲಿವೆ.

ಎ.15ರಂದು ಬೆಳಗ್ಗೆ ಗಂಟೆ 8.50ಕ್ಕೆ ಏಕಾಹ ಅಖಂಡ ಭಜನಾ ಕಾರ್ಯಕ್ರಮದ ಪ್ರದೀಪ ಸ್ಥಾಪನೆ, ಸಂಜೆ 6ಗಂಟೆಗೆ ಆಕಾಶವಾಣಿ ಕಲಾವಿದೆ ಡಾ| ಶಾರದಾ ಭಟ್ ಧಾರವಾಡ ಇವರಿಂದ ಭಜನ್ ಸಂಧ್ಯಾ ಕಾರ್ಯಕ್ರಮ, ರಾತ್ರಿ 8.30ರಿಂದ ಬ್ರಹ್ಮಾವರ ಟಿ, ವಿಶ್ವನಾಥ ಪೈ ಬಳಗದವರಿಂದ ಭಜನಾ ಕಾರ್ಯಕ್ರಮ ನಡೆಯಲಿರುವುದು.

ಎ.16ರಂದು ಪ್ರದೀಪ ವಿರ್ಸಜನೆಯೊಂದಿಗೆ ಭಜನಾ ಮಂಗಲೋತ್ಸವ ನಡೆಯಲಿದೆ. ಮಧ್ಯಾಹ್ನ 1ಗಂಟೆಗೆ ಕಳವಾಡಿ ಸವಿ ಸವಿ ನೆನಪು ಕಲಾತಂಡದಿಂದ ಭಕ್ತಿ ಭಾವ ಸಂಗಮ ಕಾರ್ಯಕ್ರಮ, 3ಗಂಟೆಗೆ ಜಲವಳ್ಳಿ ಕಲಾಧರ ಯಕ್ಷಗಾನ ಬಳಗದಿಂದ ಕೀಚಕ ವಧೆ ಯಕ್ಷಗಾನ, ರಾತ್ರಿ 8ಗಂಟೆಗೆ ವಾರ್ಷಿಕ ಗೆಂಡ ಸೇವೆ ನಡೆಯಲಿದೆ.
ಎ14ರಿಂದ 16ರ ವರೆಗೆ ನಡೆಯುವ ಕಾರ್ಯಕ್ರಮದಲ್ಲಿ ನಿತ್ಯವೂ ಅನ್ನಸಂತರ್ಪಣೆ ನಡೆಯಲಿದೆ.

ವರದಿ : ಕೃಷ್ಣ ಬಿಜೂರು

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (6) ಸಮ್ಮತ (1) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)