ನರೇಗಾ ಅಕ್ರಮ ಖಾತ್ರಿ ಕೋಟಿ ಕಾರ್ಡ್‌ ರದ್ದು

0
853

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ನವದೆಹಲಿ: ಪ್ರತಿಯೊಂದು ಮನೆಗೂ ಒಂದರಂತೆ ಜಾಬ್‌ಕಾರ್ಡ್‌ ನೀಡುವ ಮೂಲಕ ಗ್ರಾಮೀಣ ಪ್ರದೇಶಗಳ ಜನರಿಗೆ ಉದ್ಯೋಗ ಕಲ್ಪಿಸುವಂಥ ಮಹತ್ತರವಾದ ಉದ್ದೇಶದೊಂದಿಗೆ ಜಾರಿಗೆ ಬಂದ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ(ನರೇಗಾ)ಯೂ ಅಕ್ರಮದಿಂದ ಹೊರತಾಗಿಲ್ಲ ಎಂಬುದು ಸಾಬೀತಾಗಿದೆ.

narega

ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ದೇಶಾದ್ಯಂತ ಒಂದು ಕೋಟಿ ನಕಲಿ ಜಾಬ್‌ಕಾರ್ಡ್‌ಗಳನ್ನು ರದ್ದು ಮಾಡಿದೆ. ಮತ್ತೂಂದು ಅಚ್ಚರಿಯ ಸಂಗತಿಯೆಂದರೆ, ನಕಲಿ ಜಾಬ್‌ ಕಾರ್ಡ್‌ಗಳನ್ನು ಹೊಂದಿದ್ದ ರಾಜ್ಯಗಳ ಪೈಕಿ ಕರ್ನಾಟಕದ್ದು 4ನೇ ಸ್ಥಾನ. ಮಧ್ಯಪ್ರದೇಶ, ಉತ್ತರಪ್ರದೇಶ, ತಮಿಳುನಾಡು ನಂತರದ ಸ್ಥಾನದಲ್ಲಿ ಕರ್ನಾಟಕವಿದ್ದು, ಇಲ್ಲಿ ಬರೋಬ್ಬರಿ 6,80,122 ನಕಲಿ ಜಾಬ್‌ಕಾಡ್‌ìಗಳಿದ್ದವು. ಈಗ ಇದೆಲ್ಲವನ್ನೂ ಸರ್ಕಾರ ರದ್ದುಮಾಡಿದೆ.

6.59 ಕೋಟಿಯಷ್ಟೇ ಸಕ್ರಿಯ: ಜಗತ್ತಿನ ಅತಿದೊಡ್ಡ ಉದ್ಯೋಗ ಖಾತ್ರಿ ಕಾರ್ಯಕ್ರಮಗಳಲ್ಲಿ ಒಂದು ಎಂಬ ಖ್ಯಾತಿಗೆ ಪಾತ್ರವಾದ ನರೇಗಾದ ಹೆಸರಲ್ಲಿ ಸರ್ಕಾರದ ಹಣವು ಸೋರಿಕೆಯಾಗಿ, ಬೇರ್ಯಾರಧ್ದೋ ಕೈ ಸೇರುತ್ತಿದೆ ಎಂಬ ಸುದ್ದಿಯು ಈ ಹಿಂದೆಯೇ ಹರಿದಾಡಿತ್ತು. ಈ ಹಿನ್ನೆಲೆಯಲ್ಲಿ, ಕೇಂದ್ರದ ನರೇಂದ್ರ ಮೋದಿ ಸರ್ಕಾರವು ದೇಶಾದ್ಯಂತ ಸರ್ವೆ ನಡೆಸಿ, ಜಾಬ್‌ಕಾರ್ಡ್‌ಗಳ ಪೈಕಿ ಎಷ್ಟು ಅಸಲಿ, ಎಷ್ಟು ನಕಲಿ ಎಂಬುದನ್ನು ಪತ್ತೆಹಚ್ಚಿತು. ವಿತರಿಸಲಾದ ಒಟ್ಟು 12.49 ಕೋಟಿ ಜಾಬ್‌ಕಾರ್ಡ್‌ ಗಳಲ್ಲಿ 6.59 ಕೋಟಿಯಷ್ಟೇ ಸಕ್ರಿಯವಾಗಿದ್ದವು. ಸರ್ವೆಯ ವರದಿಯನ್ನು ಆಧರಿಸಿ ಒಂದು ಕೋಟಿ ಕಾರ್ಡ್‌ ಗಳನ್ನು ಸರ್ಕಾರ ರದ್ದು ಮಾಡಿತು.

ಮನೆ ಮನೆಗೆ ತೆರಳಿ ಸರ್ವೆ: “ಉದ್ಯೋಗ ಖಾತ್ರಿ ಕಾರ್ಮಿಕರ ವಿಶ್ವಾಸಾರ್ಹತೆಯನ್ನು ದೃಢಪಡಿಸಲೆಂದು ಸರ್ವೆ ನಡೆಸಿದೆವು. ವಲಸೆ ಹೋದವರು ಮತ್ತು ಮೃತಪಟ್ಟ ಕಾರ್ಮಿಕರ ಬಗ್ಗೆಯೂ ಮಾಹಿತಿ ಕಲೆಹಾಕಿದ್ದೇವೆ. ಆಧಾರ್‌ ಸಂಖ್ಯೆ, ಫ‌ಲಾನುಭವಿಗಳ ಫೋಟೋ ಹಾಗೂ ಕೂಲಿ ಪಾವತಿಯಾದ ವಿವರವನ್ನು ತಾಳೆ ಹಾಕಿ ನೋಡಿದೆವು’ ಎಂದು ಹೇಳುತ್ತಾರೆ ಗ್ರಾಮೀಣಾಭಿವೃದ್ಧಿ ಕಾರ್ಯದರ್ಶಿ ಅಮರಜೀತ್‌ ಸಿನ್ಹಾ.

ತೆಲಂಗಾಣ ಬೆಸ್ಟ್‌: ಅತ್ಯಧಿಕ ಅಂದರೆ 21.67 ಲಕ್ಷ ನಕಲಿ ಜಾಬ್‌ಕಾರ್ಡ್‌ಗಳು ಬಿಜೆಪಿ ಆಡಳಿತದಲ್ಲಿರುವ ಮಧ್ಯಪ್ರದೇಶದಲ್ಲಿ ಪತ್ತೆಯಾಗಿದ್ದರೆ, ಉತ್ತರಪ್ರದೇಶದಲ್ಲಿ 19 ಲಕ್ಷ, ತಮಿಳುನಾಡಿನಲ್ಲಿ 9 ಲಕ್ಷ ಮತ್ತು ಕರ್ನಾಟಕದಲ್ಲಿ
6.80 ಲಕ್ಷ ಜಾಬ್‌ಕಾರ್ಡ್‌ಗಳನ್ನು ರದ್ದುಮಾಡಲಾಗಿದೆ.

ನಕಲಿ ಹೇಗೆ?: ಯೋಜನೆ ಗೆಂದು ನೀಡುವ ಹಣವನ್ನು ದುರುಪಯೋಗಪಡಿಸಿಕೊಳ್ಳಲು ಜಾಬ್‌ಶೀಟ್‌ಗಳಲ್ಲಿ ನಕಲಿ ಎಂಟ್ರಿ ಮಾಡಲಾಗು ತ್ತಿತ್ತು. ಅಸ್ತಿತ್ವದಲ್ಲೇ ಇಲ್ಲದವರ ಹೆಸರಲ್ಲಿ ಜಾಬ್‌ಕಾರ್ಡ್‌ಗಳನ್ನು ನೀಡಲಾಗುತ್ತಿತ್ತು.

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)