ಗಲ್ಫ್ ನಲ್ಲಿ ನಮ್ಮ ಕುಂದ್ರಾಪ ಕನ್ನಡ ಬಳಗ ಉದ್ಘಾಟನಾ ಸಮಾರಂಭ ಕಾರ್ಯಕ್ರಮ

0
638

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (5) ಸಮ್ಮತ (0) ಅಸಮ್ಮತ (1) ಖಂಡಿಸುವೆ (0) ಅಭಿಪ್ರಾಯವಿಲ್ಲ (0)
ದುಬೈ ವರದಿ : ನಮ್ಮ ಕರಾವಳಿ ಭಾಗದ ನಮ್ಮ ಕುಂದಾಪ್ರ ಕನ್ನಡ ಬಳಗ ಗಲ್ಫ್ ನಲ್ಲಿ   ಶುಕ್ರವಾರ ಬೆಳಿಗ್ಗೆ ಉದ್ಘಾಟನಾ ಸಮಾರಂಭ ಮತ್ತು ವ್ಯಾಪಾರ ಮತ್ತು ಕಾರ್ಯನಿರ್ವಾಹಕರ ಸಮಾವೇಶವು ಯುಎಐ ಬರ್ ದುಬಾಯಿ ರೀಜೆಂಟ್ ಪ್ಯಾಲೇಸ್ ಹೊಟೇಲ್‍ನಲ್ಲಿ ನಡೆಯಿತು.

Dubai 01

ಬೈಂದೂರಿನ ಜನಪ್ರಿಯ ಶಾಸಕ ಹಾಗೂ ಕೆ.ಎಸ್.ಆರ್.ಟಿ.ಸಿ ನಿಗಮ ಅಧ್ಯಕ್ಷರಾದ ಕೆ.ಗೋಪಾಲ ಪೂಜಾರಿ, ಮಾಜಿ ಸಂಸದ ಜಯಪ್ರಕಾಶ ಹೆಗ್ಡೆ ನಮ್ಮ ಕುಂದಾಪ್ರ ಕನ್ನಡ ಬಳಗ ಸಂಘಟೆಯನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು, ಫಾರ್ಚೂನ್ ಗ್ರೂಫ್ ಆಫ್ ಹೊಟೇಲ್ ಅಧ್ಯಕ್ಷರಾದ ಪ್ರವೀಣ ಶೆಟ್ಟಿ ವಕ್ವಾಡಿ, ಚಿತ್ತೇರಿ ಗ್ರೂಫ್ ಆಫ್ ಕಂಪೆನಿಯ ಆಡಳಿತ ನಿರ್ದೇಶಕರಾದ ಪಿ.ಸುಖಾನಂದ ಶೆಟ್ಟಿ, ಕುಂದಾಪುರ ತಾಲೂಕು ಪಂಚಾಯತ್ ಸದಸ್ಯರಾದ ರಾಜು ದೇವಾಡಿಗ ತ್ರಾಸಿ, ಬಾಸುಮ ಕೊಡಗು, ರಾಮೀ ಗ್ರೂಫ್ ಆಫ್ ಹೊಟೇಲ್ ಅಧ್ಯಕ್ಷರು ಮತ್ತು ನಿರ್ದೇಶಕರು ವರದರಾಜ ಶೆಟ್ಟಿ, ಮುಂಬೈ ಉದ್ಯಮಿಗಳಾದ ಮಂಜುನಾಥ ಬಿಲ್ಲವ, ಇಬ್ರಾಹಿಂ ಗಂಗೊಳ್ಳಿ, ಮೊದಲಾದವರು ಉಪಸ್ಥಿತಿದ್ದರು.

Dubai 02

ಈ ಸಂದರ್ಭದಲ್ಲಿ ಮಾಜಿ ಸಂಸದರಾದ ಮಾನ್ಯ ಜಯಪ್ರಕಾಶ ಹೆಗ್ಡೆ ದಂಪತಿಯವರಿಗೆ ಸಮ್ಮಾನಿಸಲಾಯಿತು.

Dubai 03

Dubai 04

ಈ ಕಾರ್ಯಕ್ರಮವನ್ನು ನಮ್ಮ ಕುಂದ್ರಾಪ ಕನ್ನಡ ಬಳಗ ಗಲ್ಫ್ ಸಂಸ್ಥೆಯ ಅಧ್ಯಕ್ಷರಾದ ಸಾಧನಾ ದಾಸ್ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳ್ನಾಡಿದರು, ಬೈಂದೂರು ಉದಯವಾಣಿ ಪತ್ರಿಕಾ ವರದಿಗಾರರಾದ ಅರುಣ್ ಕುಮಾರ್ ಶಿರೂರು ಕಾರ್ಯಕ್ರಮ ನಿರೂಪಿಸಿದರು.

ವರದಿ : ಗಲ್ಫ್ ಮಿತ್ರರರು.

 

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (5) ಸಮ್ಮತ (0) ಅಸಮ್ಮತ (1) ಖಂಡಿಸುವೆ (0) ಅಭಿಪ್ರಾಯವಿಲ್ಲ (0)