ಎಪ್ರಿಲ್ 1 ರಿಂದ ಸ್ಟೇಟ್ ಬ್ಯಾಂಕ್ ಆಫ್ ಮೈಸೂರ್ ಸಹವರ್ತಿ ಬ್ಯಾಂಕುಗಳು ಎಸ್ ಬಿ ಐ ಜತೆ ವಿಲೀನ, ಗ್ರಾಹಕರ ಮನದಲ್ಲಿ ಮೈಸೂರ್ ಬ್ಯಾಂಕ್ ಇನ್ನು ನೆನಪು ಮಾತ್ರ….

0
1365

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (12) ಸಮ್ಮತ (0) ಅಸಮ್ಮತ (2) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ಬೈಂದೂರು: ಎಪ್ರಿಲ್ 01 2017 ರಂದು ಭಾರತೀಯ ಸ್ಟೇಟ್ ಬ್ಯಾಂಕಿಗೆ ಸಹವರ್ತಿ ಬ್ಯಾಂಕುಗಳು ವಿಲೀನಗೊಳ್ಳಲಿದೆ. ಸಹವರ್ತಿ ಬ್ಯಾಂಕುಗಳ ಜತೆ ಗ್ರಾಹಕರ ಬಾಂದವ್ಯ ಸೌಹಾರ್ದವಾಗಿತ್ತು. ವಿಲೀನ ಪ್ರಕ್ರಿಯೆಯ ನಂತರ ಈಗ ಎಸ್ ಬಿ ಐ ಜತೆಗಿನ ಗ್ರಾಹಕರ ಬಾಂದವ್ಯ ಮತ್ತಷ್ಟು ಸುಭದ್ರವಾಗಿ ಮತ್ತು ಪ್ರಗತಿಪರವಾಗಿರುತ್ತದೆಂದು ಭಾರತೀಯ ಸ್ಟೇಟ್ ಬ್ಯಾಂಕ್ ಎಲ್ಲಾ ಗ್ರಾಹಕರಿಗೆ ಸ್ವಾಗತಿಸಿದೆ.

sbm

ಭಾರತೀಯ ಸ್ಟೇಟ್ ಬ್ಯಾಂಕಿಗೆ ತಮ್ಮನ್ನು ಸ್ವಾಗತಿಸುತ್ತಾ ದೇಶದ ಉದ್ದಗಲದೆಲ್ಲಡೆ 23500 ಕ್ಕಿಂತಲೂ ಹೆಚ್ಚಿನ ಶಾಖೆಗಳು. 55000 ಕ್ಕಿಂತಲೂ ಹೆಚ್ಚಿನ ಎ ಟಿ ಎಂ ಗಳ ಮಹಾಜಾಲವನ್ನು ಹೊಂದಿರುವ ನಾವು, ಎಲ್ಲಿ ಬೇಕಾದಲ್ಲಿ, ಯಾವುದೇ ಸಮಯದಲ್ಲಿ ಅಡೆತಡೆ ಇಲ್ಲದ ಬ್ಯಾಂಕಿಂಗ್ ವ್ಯವಹಾರವನ್ನು ನೀಡುವ ಭರವಸೆಯನ್ನು ನೀಡುತ್ತೇವೆ.

ಬ್ಯಾಂಕುಗಳ ವಿಲೀನದ ಜಾರಿ ಎಪ್ರಿಲ್ 01 2017 ಎಂದು ಘೋಷಿಸಲ್ಪಟ್ಟರೂ ಬ್ಯಾಂಕಿಂಗ್ ವ್ಯವಸ್ಥೆಯನ್ನು ಸಮಗ್ರವಾಗಿ ಒಗ್ಗೂಡಿಸಲು ಸುಮಾರು ಎರಡು ತಿಂಗಳು ಸಮಯ ಹಿಡಿಯಬಹುದು ಆದ್ದರಿಂದ ಎಪ್ರಿಲ್ 01 2017 ರಿಂದ ಮೇ 31 2017ರ ಎರಡು ತಿಂಗಳ ಅವಧಿಯಲ್ಲಿ, ಬ್ಯಾಂಕಿನ ಸುಗಮ ವ್ಯವಹಾರಕ್ಕಾಗಿ ಮತ್ತು ಯಾವುದೇ ಅನಾನುಕೂಲಗಳಾಗದಂತೆ ನಿಯಮಗಳನ್ನು ಪಾಲಿಸಲು ಈ ಹಿಂದಿನ ಸಹವರ್ತಿ ಬ್ಯಾಂಕಿನ ಗ್ರಾಹಕರನ್ನು ಕೋರಿರುತ್ತಾರೆ.

sbm1

sbm2

sbm3

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (12) ಸಮ್ಮತ (0) ಅಸಮ್ಮತ (2) ಖಂಡಿಸುವೆ (0) ಅಭಿಪ್ರಾಯವಿಲ್ಲ (0)