ಅಕ್ರಮ ಕಸಾಯಿಖಾನೆ; ಯುಪಿ ಆಯ್ತು, ಈಗ BJP ಆಡಳಿತದ 4 ರಾಜ್ಯಗಳ ಸರದಿ!

0
378

ಹೆಚ್ಚಿನ ಓದುಗರು ಈ ಸುದ್ದಿಯನ್ನು ಖಂಡಿಸುವೆ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (1) ಅಭಿಪ್ರಾಯವಿಲ್ಲ (0)

ನವದೆಹಲಿ: ಉತ್ತರಪ್ರದೇಶ ಸರ್ಕಾರ ಅಕ್ರಮ ಕಸಾಯಿಖಾನೆ ಮುಚ್ಚಲು ನಿರ್ಧಾರಿಸಿದ ಬೆನ್ನಲ್ಲೇ ಇದೀಗ ಭಾರತೀಯ ಜನತಾ ಪಕ್ಷ ಆಡಳಿತ ನಡೆಸುತ್ತಿರುವ ರಾಜಸ್ತಾನ್, ಉತ್ತರಾಖಂಡ್, ಚತ್ತೀಸ್ ಗಢ್ ಹಾಗೂ ಮಧ್ಯಪ್ರದೇಶದಲ್ಲಿಯೂ ಅಕ್ರಮ ಕಸಾಯಿಖಾನೆಗೆ ಬೀಗ ಹಾಕಲು ಸಿದ್ಧತೆ ನಡೆಯುತ್ತಿರುವುದಾಗಿ ಮಾಧ್ಯಮದ ವರದಿಯೊಂದು ತಿಳಿಸಿದೆ.

vasu-shivrajleadpic

ಉತ್ತರಪ್ರದೇಶದ ನಂತರ ಜಾರ್ಖಂಡ್ ರಾಜ್ಯ ಕೂಡ ಅಕ್ರಮ ಕಸಾಯಿಖಾನೆ ವಿರುದ್ಧ ಕ್ರಮಕ್ಕೆ ಮುಂದಾಗಿದೆ. ಹರಿದ್ವಾರದಲ್ಲಿನ ಮೂರು ಮಾಂಸದಂಗಡಿಗೆ ಬೀಗ ಜಡಿಯಲಾಗಿದ್ದು, ರಾಯ್ ಪುರದಲ್ಲಿ 11  ಹಾಗೂ ಇಂದೋರ್ ನ 1 ಅಕ್ರಮ ಕಸಾಯಿಖಾನೆ ಬಂದ್ ಮಾಡುವಂತೆ ಸೂಚಿಸಲಾಗಿದೆ.

ಟೈಮ್ಸ್ ಆಫ್ ಇಂಡಿಯಾ ವರದಿ ಪ್ರಕಾರ, ಜೈಪುರದಲ್ಲಿ ಅಂದಾಜು 4 ಸಾವಿರ ಅಕ್ರಮ ಕಸಾಯಿಖಾನೆ ಬಂದ್ ನ ಭೀತಿಗೆ ಸಿಲುಕಿರುವುದಾಗಿ ತಿಳಿಸಿದೆ. ಏಪ್ರಿಲ್ ನಿಂದ ಅಕ್ರಮ ಕಸಾಯಿ ಖಾನೆಗಳನ್ನು ಬಂದ್ ಮಾಡುವುದಾಗಿ ಜೈಪುರ್ ಮುನ್ಸಿಪಲ್ ಕಾರ್ಪೋರೇಷನ್ ಘೋಷಿಸಿದೆ. ಆದರೆ 2016ರ ಮಾರ್ಚ್ 31ರ ನಂತರ ಜೈಪುರ್ ಮುನ್ಸಿಪಲ್ ಕಾರ್ಪೋರೇಷನ್ ಯಾವುದೇ ಹೊಸ ಲೈಸೆನ್ಸ್ ಅನ್ನು ಕೊಡಲೂ ಇಲ್ಲ, ನವೀಕರಿಸಲೂ ಇಲ್ಲ ಎಂದು ಮಾಂಸದ ಅಂಗಡಿ ವ್ಯಾಪಾರಿಗಳು ಆರೋಪಿಸಿದ್ದಾರೆ.

ಹೆಚ್ಚಿನ ಓದುಗರು ಈ ಸುದ್ದಿಯನ್ನು ಖಂಡಿಸುವೆ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (1) ಅಭಿಪ್ರಾಯವಿಲ್ಲ (0)