ಬೆಂಗಳೂರು: ರದ್ದಾದ 5 ಕೋಟಿ ರೂ ನೋಟು ಸಹಿತ ನಾಲ್ವರ ಸೆರೆ

0
469

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (2) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

Banned Notes-700

ಬೆಂಗಳೂರು: ಸಿಸಿಬಿ ಪೊಲೀಸರು ಎರಡು ಪ್ರತ್ಯೇಕ ಕಾರ್ಯಾಚರಣೆ ನಡೆಸಿ 4.98 ಕೋಟಿ ರೂಪಾಯಿ ಅಪಮೌಲ್ಯಗೊಂಡ ನೋಟುಗಳ ಸಹಿತ ನಾಲ್ವರನ್ನು ಮಂಗಳವಾರ ವಶಕ್ಕೆ ಪಡೆದಿದ್ದಾರೆ.

ಬುಲ್‌ ಟೆಂಪಲ್‌ ರಸ್ತೆಯ ಬಳಿ ಅಕ್ರಮವಾಗಿ ಹಳೆಯ ನೋಟುಗಳನ್ನು ಸಾಗಿಸುತ್ತಿದ್ದ ನಂಜುಂಡ (45)ಎಂಬಾತನನ್ನು ವಶಕ್ಕೆ ಪಡೆದಿದ್ದು, ಆತನ ಬಳಿಯಿದ್ದ 500 ರೂಪಾಯಿ ಮತ್ತು 1000 ರೂಪಾಯಿ ಮುಖಬೆಲೆಯ 3 ಕೋಟಿ ರೂಪಾಯಿ ಹಣವನ್ನು ಜಪ್ತಿ ಮಾಡಲಾಗಿದೆ. 1 ಕಾರು ಮತ್ತು ಮೊಬೈಲನ್ನೂ ಪೊಲೀಸರು ವಶಕ್ಕೆ ಪಡೆದಿರುವ ಬಗ್ಗೆ ವರದಿಯಾಗಿದೆ. ಶಂಕರಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಮುಂದುವರೆದಿದೆ.

ಇನ್ನೊಂದು ಪ್ರಕರಣದಲ್ಲಿ ರಾಜಾಜಿನಗರದ ವೆಸ್ಟ್‌ ಆಫ್ ಕಾರ್ಡ್‌ ರಸ್ತೆ ಯಲ್ಲಿ 1.98 ಕೋಟಿ ರೂಪಾಯಿ ಹಳೆ ನೋಟುಗಳ ಸಹಿತ ಮೂವರನ್ನು ವಶಕ್ಕೆ ಪಡೆಯಲಾಗಿದೆ. ಬಂಧಿತರಿಂದ 3 ಮೊಬೈಲ್‌, 1 ಆಡಿ ಕಾರನ್ನು ವಶ ಪಡಿಸಿಕೊಳ್ಳಲಾಗಿದೆ. ರಾಜಾಜಿನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಮುಂದುವರೆದಿದೆ.

ಮಾರ್ಚ್‌ 31 ರ ವರೆಗೆ ಆರ್‌ಬಿಐ ನಲ್ಲಿ ಹಣ ವಿನಿಮಯಕ್ಕೆ ಅವಕಾಶವಿರುವ ಹಿನ್ನಲೆಯಲ್ಲಿ ಬಂಧಿತರು ದಂಧೆಯಲ್ಲಿ ತೊಡಗಿಸಿಕೊಂಡಿದ್ದರು ಎಂದು ತಿಳಿದು ಬಂದಿದೆ.

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (2) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

B.G.Mohandas (ಬೀಜಿ)

B.G.Mohandas; M.Pharm FAGE DBM Founder ; GulfKannadiga.com & Kannadigaworld.com; kollur.com, devadiga.com & byndoor.com | Formerly Head of Pharmacy at Gulf Medical University, Dubai & Professor KMC Manipal