ನಾಗೂರು ಬಸ್ಸ್ ಟ್ಯಾಂಕರ್ ಮುಖಾಮುಖಿ ಡಿಕ್ಕಿ : ಟ್ಯಾಂಕರ್ ಚಾಲಕ ಸಾವು, ಬಸ್ಸ್ ಪ್ರಯಾಣಿಕರಿಗೆ ಗಾಯ

0
503

ಹೆಚ್ಚಿನ ಓದುಗರು ಈ ಸುದ್ದಿಯನ್ನು ಸಮ್ಮತ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (1) ಅಸಮ್ಮತ (0) ಖಂಡಿಸುವೆ (1) ಅಭಿಪ್ರಾಯವಿಲ್ಲ (0)

ಬೈಂದೂರು, ಮಾ, 27 : ರಾ.ಹೆದ್ದಾರಿ 66ರ ನಾಗೂರು ಆಂಜನೇಯ ದೇವಸ್ಥಾಸದ ಎದುರು ಬಸ್ ಹಾಗೂ ಟ್ಯಾಂಕರ್ ನಡುವೆ ಮುಖಾಮುಖಿ ಡಿಕ್ಕಿಯಾಗಿ ಭೀಕರ ಅಪಘಾತ ಸಂಭವಿಸಿರುವ ಘಟನೆ ಸೋಮವಾರ ಸಂಜೆ ನಡೆದಿದೆ.
ಟ್ಯಾಂಕರ್ ಚಾಲಕ ಮೃತಪಟ್ಟಿದ್ದು ಉಡುಪಿ ಶಿವಳ್ಳಿ ನಿವಾಸಿ ನಾರಾಯಣ ಆಚಾರ್ಯ ಎಂದು ಗುರುತಿಸಲಾಗಿದೆ.

02 copy

ಕುಂದಾಪುರದಿಂದ ಬೈಂದೂರು ಕಡೆಗೆ ಪ್ರಯಾಣಿಸಯತ್ತಿರುವ ಖಾಸಗಿ ಬಸ್ಸ್ ಮತ್ತು ಹುಬ್ಬಳ್ಳಿ ನಿಂದ ಮಂಗಳೂರು ಮಾರ್ಗವಾಗಿ ಹೋಗುತ್ತಿರುವ ಟ್ಯಾಂಕರ್ ನಡುವೆ ನೇರ ಡಿಕ್ಕಿ ಹೊಡೆದಿದ್ದು, ಈ ಸಂದರ್ಭದಲ್ಲಿ ಟ್ಯಾಂಕರ್ ಸ್ಥಳದಲ್ಲಿರುವ ಬೈಕ್ ಸವಾರರಿಗೆ ಹೋಗಿ ಡಿಕ್ಕಿಯಾಗಿದೆ. ಅಪಘಾತದ ಪರಿಣಾಮ ಟ್ಯಾಂಕರ್ ಚಾಲಕ ಮೃತಪಟ್ಟಿದ್ದು, ಬಸ್ಸ್ ಚಾಲಕ ಗಂಭೀರ ಗಾಯಗೊಂಡಿದ್ದು, ಬಸ್ಸ್‍ನಲ್ಲಿರುವ ಸುಮಾರು 20 ಪ್ರಯಾಣಿಕರು ಗಾಯಗೊಂಡಿದ್ದು ಇವರನ್ನು ಕುಂದಾಪುರ ಆಸ್ಪತ್ರಗೆ ದಾಖಲಿಸಲಾಗಿದೆ.

ಬಸ್ಸ್ ಹಾಗೂ ಟ್ಯಾಂಕರ್ ನಡುವೆ ಡಿಕ್ಕಿ ಸಂಭವಿಸಿದ ರಭಸಕ್ಕೆ ಬಸ್ಸ್‍ನಲ್ಲಿರುವ ನಾಲ್ಕು ಜನ ಪ್ರಯಾಣಿಕರು ಬಸ್ಸ್‍ನಿಂದ ಹೊರಗೆ ಎಸೆಯಲ್ಪಟ್ಟಿದ್ದಾರೆ. ಅಪಘಾತ ರಭಸಕ್ಕೆ ಟ್ಯಾಂಕರ್ ಚಾಲಕನ ಕಾಲು ಸ್ಟೈರಿಗ್ ನಡುವೆ ಸಿಕ್ಕಿಹಾಕಿಗೊಂಡಿದ್ದು ಹೊರತೆಗೆಯಲು ಹರಸಾಹಸ ಪಡಬೇಕಾಯಿತು.

04 copy

05 copy

06 copy

ನಿಲ್ಲಿಸಿರುವ ಬೈಕ್‍ಗೆ ಡಿಕ್ಕಿ : ಬೈಕ್ ಸವಾರ ಉಳ್ಳೂರು ದಿನೇಶ ಆಚಾರ್ಯ ಇವರು ಆನಂಜನೇಯ ದೇವಸ್ಥಾನ ಎದುರಿನಲ್ಲಿ ತಮ್ಮ ಬೈಕ್‍ನ್ನು ನಿಲ್ಲಿಸಿಕೊಂಡು ನಿಂತಿರುವಾಗ ಟ್ಯಾಂಕರ್ ಬಸ್ಸ್ ನಡುವೆ ಡಿಕ್ಕಿ ಸಂಭವಿಸಿ ಟ್ಯಾಂಕರ್ ಬಂದು ಬೈಕ್‍ಗೆ ಡಿಕ್ಕಿ ಹೊಡೆದಿದ್ದೆ.

07 copy

ಬಸ್ಸ್‍ನಲ್ಲಿ ಸುಮಾರು 30ರಿಂದ 35 ಪ್ರಯಾಣಿಕರಿದ್ದಾರೆ ಎಂದು ತಿಳಿದು ಬಂದಿದ್ದೆ.

08 copy 09 copy 10 copy

ಟ್ರಾಪಿಕ್ ಜಾಮ

ಅಪಘಾತದಿಂದಾಗಿ ರಾ.ಹೆದ್ದಾರಿಯಲ್ಲಿ ಸುಮಾರು ಒಂದು ಗಂಟೆಗಳ ಕಾಲ ವಾಹನ ಸಂಚಾರದಲ್ಲಿ ವ್ಯತ್ಯಾಸ ಉಂಟಾಯಿತು. ಪೊಲೀಸ್ ಅಧಿಕಾರಿಗಳೊಂದಿಗೆ ಸ್ಥಳೀಯರು ವಾಹನ ಸಂಚಾರ ಸುಗಮಗೊಳಿಸಲು ಸಹಕರಿಸಿದರು

11 copy

ಬಸ್‌ನಲ್ಲಿದ್ದ ವಿಕ್ರಮ್‌ (32), ಸೀತಾ (40), ಚೈತ್ರಾ (26), ರಾಜು (52), ದೇವಕಿ (38), ಸಂಪ್ರೀತಾ (20), ಸುಪ್ರಿತಾ (10), ದಿವ್ಯಾ(31), ಮಂಜುನಾಥ ಆಚಾರ್ಯ (38), ಲಲಿತಾ ದೇವಾಡಿಗ (39), ದೇವೇಂದ್ರ ಗೊಂಡ (31), ದಿನೇಶ್‌ ಆಚಾರ್‌ (30), ಹಿರಿಯಣ್ಣ (37), ಸುಚಿಂದ್ರ (21), ಗೀತಾ (31), ಸುಮಾ (36), ಗಿರಿಜಾ ಬಳೆಗಾರ್‌ (45), ಈಶ್ವರ್‌(29), ಜೂಲಿಯಟ್‌ (47), ಜುಬೇರ್‌ ಭಾಷಾ (40), ಜೂಲೆಟ್‌ ಲೋಬೋ (48), ರಮೇಶ್‌ ಆಚಾರ್ಯ (27), ರವಿ (38) ಗಾಯಗೊಂಡವರು.

ಮೂರು ಆ್ಯಂಬುಲೆನ್ಸ್‌ಗಳಲ್ಲಿ ರವಾನೆ
ಅಪಘಾತ ಸಂಭವಿಸುತ್ತಿದ್ದಂತೆ ಎರಡು 108 ಆ್ಯಂಬುಲೆನ್ಸ್‌ ಹಾಗೂ ಒಂದು ಸ್ಥಳೀಯ ಆಸ್ಪತ್ರೆಯ ಆ್ಯಂಬುಲೆನ್ಸ್‌ ಸಹಿತ ಹಲವಾರು ಸ್ಥಳೀಯ ವಾಹನಗಳಲ್ಲಿ ಗಾಯಾಳುಗಳನ್ನು ಕುಂದಾಪುರದ ಆಸ್ಪತ್ರೆಗೆ ಕರೆದೊಯ್ಯಲಾಯಿತು.

ಆಸ್ಪತ್ರೆಗೆ ದೌಡಾಯಿಸಿದ ಜನರು
ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆ ಬೈಂದೂರು ಹಾಗೂ ಸುತ್ತಮುತ್ತಲ ಜನರು ಕುಂದಾಧಿಪುರದ ಆಸ್ಪತ್ರೆಗೆ ದೌಡಾಯಿಸಿದರು. ಈ ಸಂದರ್ಭಧಿದಲ್ಲಿ ಜಿ.ಪಂ. ಸದಸ್ಯ ಶಂಕರ ಪೂಜಾರಿ ಅವರು ಆಸ್ಪತ್ರೆಗೆ ಆಗಮಿಸಿದ್ದರು. ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜೀವ ಉಳಿಸಿ ಜೀವ ತೆತ್ತ
ಎದುರಿನಿಂದ ಬರುತ್ತಿದ್ದ ಬಸ್‌ ಓವರ್‌ಟೇಕ್‌ ಮಾಡಿಕೊಂಡು ತೀರ ಬಲಭಾಗದಲ್ಲಿ ಬರುತ್ತಿರುವುದನ್ನು ಗಮನಿಸಿದ ಟ್ಯಾಂಕರ್‌ ಚಾಲಕ ನಾರಾಯಣ ಆಚಾರ್‌ ಮತ್ತಷ್ಟು ಬದಿಗೆ ಸರಿದರೂ ಅಲ್ಲಿ ಬೈಕ್‌ನಿಲ್ಲಿಸಿ ವ್ಯಕ್ತಿಯೋರ್ವ ಇರುವುದನ್ನು ಕಂಡು ಇನ್ನಷ್ಟು ಬದಿಗೆ ಹೋಗುವುದನ್ನು ನಿಯಂತ್ರಿಸಿಕೊಂಡರು. ಇದರಿಂದ ಬೈಕ್‌ಗೆ ಸವರಿದಂತೆ ಟ್ಯಾಂಕರ್‌ ಮುಂದಕ್ಕೆ ಹೋಗಿ ಬಸ್‌ಗೆ ಢಿಕ್ಕಿ ಹೊಡೆಯಿತು. ಬೈಕ್‌ ನಿಲ್ಲಿಸಿ ರಸ್ತೆ ಬದಿ ನಿಂತಿದ್ದ ದಿನೇಶ ಆಚಾರ್ಯ ಅವರಿಗೆ ಸಣ್ಣಪುಟ್ಟ ಏಟಾಗಿದೆ. ಬೈಕ್‌ ಸವಾರನ ಜೀವ ಉಳಿಸಿದರೂ ತನ್ನ ಜೀವವನ್ನು ಉಳಿಸಿಕೊಳ್ಳಲು ಚಾಲಕನಿಗೆ ಸಾಧ್ಯವಾಗಲಿಲ್ಲ.

ಬೈಂದೂರು ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

 

ಚಿತ್ರ/ವರದಿ : ಬೈಂದೂರು ಡಾಟ್ ಕಾಮ್

ಹೆಚ್ಚಿನ ಓದುಗರು ಈ ಸುದ್ದಿಯನ್ನು ಸಮ್ಮತ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (1) ಅಸಮ್ಮತ (0) ಖಂಡಿಸುವೆ (1) ಅಭಿಪ್ರಾಯವಿಲ್ಲ (0)