ನಾಗೂರು ದೇವಾಡಿಗ ಸಂಘ ನೂತನ ಕಚೇರಿ ಉದ್ಘಾಟನೆ

0
154

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (1) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ಉಪ್ಪುಂದ ಮಾ.27 : ನಾಗೂರು, ಕಿರಿಮಂಜೇಶ್ವರ, ಹಳಗೇರಿ, ಉಳ್ಳೂರು, ಕಂಬದಕೋಣೆ ವ್ಯಾಪ್ತಿಯ ದೇವಾಡಿಗ ಸಮಾಜ ಸೇವಾ ಸೇವಾ ಸಂಘ(ರಿ) ಇದರ ನೂತನ ಕಚೇರಿ ನಾಗೂರು ಕೆ.ಎಸ್. ಕಾಂಪ್ಲೆಕ್ಸ್‍ನಲ್ಲಿ ರವಿವಾರ ಉದ್ಘಾಟನಾ ಸಮಾರಂಭ ನಡೆಯಿತು.

2603uppe1

ದುಬೈ ಉದ್ಯಮಿ ದಿನೇಶ ದೇವಾಡಿಗ ನೂತನ ಕಚೇರಿಯನ್ನು ಉದ್ಘಾಟಿಸಿ ಮಾತನಾಡಿ ಸಮುದಾಯದ ಹಿಂದುಳಿದವರ ನೋವು-ನಲಿವುಗಳಿಗೆ ಎಲ್ಲರು ಒಂದಾಗಿ ಸ್ಪಂದಿಸಿ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರುವಲ್ಲಿ ನಿರಂತರ ಶ್ರಮ ವಹಿಸುವ ಅಗತ್ಯವಿದೆ ಎಂದರು. ಜಿಲ್ಲಾ .ಪಂ. ಸದಸ್ಯೆ ಗೌರಿ ದೇವಾಡಿಗ ಮಾತನಾಡಿ ಒಳ್ಳಯ ಮನಸ್ಸಿನಿಂದ ಒಂದುಗೂಡಿದಾಗ ಸಮಾಜದಲ್ಲಿ ಉತ್ತಮ ಕಾರ್ಯಗಳು ಸಾಧ್ಯವಾಗುತ್ತದೆ, ಸಂಘದ ಸೇವಾ ಕಾರ್ಯ ಇನ್ನಷ್ಟು ಎತ್ತರಕ್ಕೇರಲ್ಲಿ ಎಂದರು.
ತ್ರಾಸಿ ರಾಜು ದೇವಾಡಿಗ ಮಾತನಾಡಿ ಎಲ್ಲರು ಒಂದಡೆ ಸೇರಿ ಸಮುದಾಯದ ಸಮಸ್ಯೆಗಳ ಕುರಿತು ಚರ್ಚಿಸಲು ಸಂಘಗಳಿಗೆ ಕಚೇರಿ ಉಪಯುಕ್ತವಾಗುತ್ತದೆ, ದಿನೇಶ ದೇವಾಡಿಗ ಇವರು ಸಮಾಜಕ್ಕೆ ನೀಡಿರುವ ಸೇವಾ ಕಾರ್ಯವನ್ನು ಶ್ಲಾಘಿಸಿದರು.

ಕೊಲ್ಲೂರು ಡಾಟ್ ಕಾಂ ಸಂಯೋಜಕಿ ಪ್ರಿಯದರ್ಶಿನಿ ದೇವಾಡಿಗ ಶುಭ ಹಾರೈಸಿದರು.ಈ ಸಂದರ್ಭ ಕುಂದಾಪುರ ಎಪಿಎಂಸಿ ಸದಸ್ಯ ಮಂಜು ದೇವಾಡಿಗ, ಈಶ್ವರ ದೇವಾಡಿಗ, ಸಪ್ತಸ್ವರ ವಿವಿದ್ದೋದೇಶ ಸಂಘದ ಅಧ್ಯಕ್ಷ ಸಂಜೀವ ದೇವಾಡಿಗ, ನಾಗೂರು ಸಾಗರ ಸಭಾಭವನ ಮಾಲಕ ಶೇಖರ ಪೂಜಾರಿ, ಕಂಬದಕೋಣೆ ರೈತರ ಸೇವಾ ಸಂಘದ ನಿರ್ದೇಶಕ ಗುರುರಾಜ ಹೆಬ್ಬಾರ್,ಬೈಂದೂರು ಒಕ್ಕೂಟ ಅಧ್ಯಕ್ಷ ಸುಬ್ಬ ದೇವಾಡಿಗ, ಉಪ್ಪುಂದ ಪುರುಷೋತ್ತಮ ದೇವಾಡಿಗ, ಸಂಘದ ಅಧ್ಯಕ್ಷ ರಾಜು ದೇವಾಡಿಗ ಉಪಸ್ಥಿತರಿದ್ದರು.

ಸ್ವಪ್ತಸ್ವರ ಸಹಕಾರಿ ಸಂಘದ ಮುಖ್ಯಕಾರ್ಯನಿರ್ವಹಣಾ„ಕಾರಿ ರವಿ ದೇವಾಡಿಗ ಕಾರ್ಯಕ್ರಮ ನಿರೂಪಿಸಿದರು, ನಾಗೂರು ದಿನೇಶ ದೇವಾಡಿಗ ವಂದಿಸಿದರು.

ವರದಿ : ಕೃಷ್ಣ ಬಿಜೂರು

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (1) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

dinetmedia