ಬೈಂದೂರು ತಾಲೂಕು: ಹತ್ತಿರದವರಿಗೆ ಸಂತೊಷ – ದೂರದವರಿಗೆ ಆತಂಕ!

0
951

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (4) ಸಮ್ಮತ (0) ಅಸಮ್ಮತ (0) ಖಂಡಿಸುವೆ (3) ಅಭಿಪ್ರಾಯವಿಲ್ಲ (0)

byndoor_tlk

 ( This Map shows south demarcation as Navunda!!)

ಬೈಂದೂರು ಮಾ.18 : ಬೈಂದೂರು ತಾಲೂಕು ಘೋಷಣೆಯಾಗುತ್ತಿದ್ದಂತೆ ವಂಡ್ಸೆ ಹೋಬಳಿ, ಶಂಕರನಾರಾಯಣ, ಗಂಗೊಳ್ಳಿ ಹಾಗೂ ಹಳ್ಳಿಹೊಳೆ ಗ್ರಾಮಸ್ಥರಿಂದ ವಿರೋಧ ವ್ಯಕ್ತವಾಗಿದೆ. ಗ್ರಾಮವನ್ನು ಕುಂದಾಪುರ ತಾಲೂಕಿನಲ್ಲಿಯೇ ಉಳಿಸಿಕೊಳ್ಳುವ ಬಗ್ಗೆ ಕೆಲವು ಗ್ರಾಮ ಪಂಚಾಯತ್‍ಗಳು ಬೇಡಿಕೆಯನ್ನಿಟ್ಟರೆ ಶಂಕರನಾರಾಯಣ ಪ್ರತ್ಯೇಕ ಹೋಬಳಿಯ ಬೇಡಿಕೆಯನ್ನಿಟ್ಟರೆ, ಹಳ್ಳಿಹೊಳೆ ಗ್ರಾಮವನ್ನು ಶಂಕರನಾರಾಯಣ ಹೋಬಳಿಯಲ್ಲಿರಿಸುವಂತೆ ಗ್ರಾಮಸ್ಥರು ಬೇಡಿಕೆಗಳು ಬಂದಿದೆ.

byndoor

ಗಂಗೊಳ್ಳಿ ಗ್ರಾಮವನ್ನು ಕುಂದಾಪುರ ತಾಲೂಕಿನಲ್ಲಿಯೇ ಉಳಿಸಿಕೊಳ್ಳುವ ದೃಷ್ಟಿಯಿಂದ ಹೋರಾಟದ ರೂಪರೇಷಗಳನ್ನು ಚರ್ಚಿಸಲು ಗಂಗೊಳ್ಳಿಯ ಶ್ರೀ ವೀರೇಶ್ವರ ಮಾಂಗಲ್ಯ ಮಂದಿರದಲ್ಲಿ ಸಭೆ ಆಯೋಜಿಸಲಾಗಿದೆ.

ಬೈಂದೂರು ತಾಲೂಕು ಘೋಷಣೆ ಸ್ವಾಗತಾರ್ಹ ಆದರೆ ಪ್ರಾಸ್ತಾವಿಕ ಬೈಂದೂರು ತಾಲೂಕಿನಲ್ಲಿ ಗಂಗೊಳ್ಳಿ ಗ್ರಾಮವನ್ನು ಸೇರ್ಪಡೆಗೊಳಿಸುವುದಕ್ಕೆ ಗಂಗೊಳ್ಳಿಯ ಸಮಸ್ತ ನಾಗರಿಕರ ವಿರೋಧ ಇದೆ. ಕುಂದಾಪುರದೊಂದಿಗೆ ಗಂಗೊಳ್ಳಿ ಯ ಜನತೆಗೆ ಅನೇಕ ದಶಕಗಳಿಂದ ಅವಿನಾಭಾವ ಸಂಬಂಧವಿದೆ. ಗಂಗೊಳ್ಳಿಯ ಜನರು ತಮ್ಮ ದೈನಂದಿನ ಕಾರ್ಯಗಳಿಗೆ ಕುಂದಾಪುರವನ್ನೇ ಅವಲಂಬಿಸಿಕೊಂಡಿದ್ದು, ಗಂಗೊಳ್ಳಿಯಿಂದ ಕುಂದಾಪುರಕ್ಕೆ ಬಸ್ ವ್ಯವಸ್ಥೆ ಉತ್ತಮವಾಗಿದ್ದು, ಬೈಂದೂರಿಗಿಂತ ಕುಂದಾಪುರ ಎಲ್ಲ ರೀತಿಯಲ್ಲೂ ಅನುಕೂಲಕರವಾಗಿದೆ. ಈ ಹಿಂದೆ ಬೈಂದೂರು ತಾಲೂಕು ಘೋಷಣೆಯಾಗಿದ್ದೆ ಸಂದರ್ಭ ಗಂಗೊಳ್ಳಿ ಗ್ರಾಮವನ್ನು ಬೈಂದೂರು ತಾಲೂಕು ಸೇರ್ಪಡೆಗೊಳಿಸದಂತೆ ಗ್ರಾ.ಪಂ ನಿರ್ಣಯ ಕೈಗೊಂಡು ಸಂಬಂಧಪಟ್ಟ ಇಲಾಖೆಗಳಿಗೆ ನೀಡಿದೆ.

ಇದೀಗ ಪುನಃ ನೂತನವಾಗಿ ಘೋಷಣೆಯಾಗಿರುವ ಬೈಂದೂರು ತಾಲೂಕಿನ ಗಂಗೊಳ್ಳಿ ಗ್ರಾಮವನ್ನು ಸೇರ್ಪಡೆಗೊಳಿಸುತ್ತಿರುವ ವಿಚಾರದಲ್ಲಿ ಹೋರಾಟ ನಡೆಸುವುದು ಅನಿರ್ವಾವಾಗಿದೆ ಎಂದು ನಾಗರಿಕ ಹೋರಾಟ ಸಮಿತಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.

ಹಳ್ಳಿಹೊಳೆ ಗ್ರಾಮ ಬೈಂದೂರು ತಾಲೂಕಿಗೆ ಸೇರ್ಪಡೆ : ತೀವ್ರ ವಿರೋಧನೂತನ ಬೈಂದೂರು ತಾಲೂಕು ವ್ಯಾಪ್ತಿಗೆ ಬೈಂದೂರು 70 ಕಿ.ಮಿ ದೂರದಲ್ಲಿ ಹಳ್ಳಿಹೊಳೆ ಗ್ರಾಮವನ್ನು ಸೇರ್ಪಡಿಸಿದ್ದು. ತೀವ್ರ ವಿರೋಧ ವ್ಯಕ್ತವಾಗಿದೆ.
ಹಳ್ಳಿಹೊಳೆ ಗ್ರಾಮವನ್ನು ಈಗಾಗಲೇ ಶಂಕರ ನಾರಾಯಣ ತಾಲೂಕು ನಾರಾಯಣ ತಾಲೂಕು ರಚನೆಯೊಳಗಡೆ ಸೇರುವಂತೆ, ಈಗಾಗಲೇ ಹಳ್ಳಿಹೊಳೆ ಗ್ರಾಮ ಪಂಚಾಯಿತ್ ನಿರ್ಣಯ ಕೈಗೊಂಡಿದ್ದು ಉಡುಪಿ ಜಿಲ್ಲಾಡಳಿತವು ಹಳ್ಳಿಹೊಳೆ ಗ್ರಾಮವು ಶಂಕರನಾರಾಯಣ 12 ಕಿ.ಮೀ ವ್ಯಾಪ್ತಿಯೊಳಗೆ ಇದ್ದು ಶಂಕರನಾರಯಣ ತಾಲೂಕು ರಚನಾ ವ್ಯಾಪ್ತಿಗೆ ಬರಬೇಕೆಂದ ಸಮಗ್ರ ವರದಿಯನ್ನು ರಾಜ್ಯ ಸರಕಾರಕ್ಕೆ ಈಗಾಗಲೇ ಕಳಿಹಿಸಲಾಗಿತ್ತು.

ಇದ್ದನ್ನು ಬಿಟ್ಟು ನಮ್ಮ ಹಳ್ಳಿಹೊಳೆ ಗ್ರಾಮವನ್ನು ದೂರದ ಬೈಂದೂರು ತಾಲೂಕಿಗೆ ಸೇರ್ಪಡಿಕೊಂಡೆರೆ ತೀವ್ರ ಹೋರಟ ಮಾಡಲಾಗುವುದು ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ವಂಡ್ಸೆ ಹೋಬಳಿಯನ್ನು ಕೈ ಬಿಟ್ಟು ಹೊಸ ಬೈಂದೂರು ತಾಲೂಕು ರಚನೆಯಾಗಬೇಕು. ರಚನೆಯಾಗುವ ಹೊಸ ಬೈಂದೂರು ತಾಲೂಕಿನ ಭೌಗೋಳಿಕ ಗಡಿಯ ಬಗ್ಗೆ ಗೊಂದಲ ಇದ್ದು ವಂಡ್ಸೆ ಹೋಬಳಿ ವ್ಯಾಪ್ತಿಯ ಗ್ರಾಮಗಳನ್ನು ಹೊಸ ರಚನೆಯಾಗುವ ಹೊಸ ಬೈಂದೂರು ತಾಲೂಕಿನ ಭೌಗೋಳಿಕ ಗಡಿಯ ಬಗ್ಗೆ ಗೊಂದಲ ಇದ್ದು ವಂಡ್ಸೆ ಹೋಬಳಿ ವ್ಯಾಪ್ತಿಯ ಗ್ರಾಮಗಳ ಗ್ರಾಮಸ್ಥರು ತಮ್ಮ ಗ್ರಾಮಗಳನ್ನು ಹೊಸ ಬೈಂದೂರು ತಾಲೂಕಿಗೆ ಸೇರಿದಲ್ಲಿ ದೂರದ ಬೈಂದೂರಿಗೆ ಹೋಗುವುದು ಬಹಳ ಕಷ್ಟ ಎನ್ನುವ ಅಭಿಪ್ರಾಯ ಹೊಂದಿದ್ದು ಹೊಸ ತಾಲೂಕಿಗೆ ಬೈಂದೂರು ಹೋಬಳಿಯನ್ನು ಮಾತ್ರ ಸೇರಿಸಿ ವಂಡ್ಸೆ ಹೋಬಳಿಯನ್ನು ಕೈಬಿಟ್ಟು ಹೊಸ ಬೈಂದೂರು ತಾಲೂಕು ರಚನೆ ಆಗಬೇಕು ಎಂದು ಮನವಿ ಸಲ್ಲಿಸಿದ್ದಾರೆ. ಈ ಕುರಿತು ಆ ಭಾಗದ ಪ್ರಮುಖರು ಕುಂದಾಪುರದಲ್ಲಿ ಸಭೆ ಸೇರಿ ಚರ್ಚೆ ನಡೆಸಿ ಬೈಂದೂರು ಕ್ಷೇತ್ರದ ಶಾಸಕರಾದ ಕೆ.ಗೋಪಾಲ ಪೂಜಾರಿಯವನ್ನು ಸಂಪರ್ಕಿಸಿದ್ದಾರೆ.

ಮನವಿ ಉತ್ತರಿಸಿರುವ ಮಾನ್ಯ ಶಾಸಕರು ಹೊಸ ಬೈಂದೂರು ತಾಲೂಕಿಗೆ ಬೈಂದೂರು ಹೋಬಳಿಯ ಗ್ರಾಮಗಳನ್ನು ಮಾತ್ರ ಸೇರಿಸಿ ಬೈಂದೂರು ತಾಲೂಕು ರಚಿಸಲಾಗುತ್ತದೆ. ಆ ಕುರಿತು ತಾನು ಕುಂದಾಪುರದಲ್ಲಿ ಪ್ರತೇಕ ಪತ್ರಿಕಾಗೋಷ್ಟಿ ಕರೆದು ತಿಳಿಸಲ್ಲಿದ್ದೇನೆ ಎಂದು ಗೋಪಾಲ ಪೂಜಾರಿಯವರು ಹೇಳಿದ್ದಾರೆ. ಎಂದು ನ್ಯಾಯವಾದಿ ಟಿ.ಬಿ.ಶೆಟ್ಟಿ ಅವರು ಸಭೆಯ ತಂದರು.ಮಾನ್ಯ ಶಾಸಕರು ಹೇಳಿದ ಪ್ರಕಾರ ಬೈಂದೂರು ಹೋಬಳಿಯನ್ನು ಮಾತ್ರ ಸೇರಿಸಿ ವಂಡ್ಸೆ ಹೋಬಳಿಯನ್ನು ಕೈಬಿಟ್ಟು ಹೊಸ ಬೈಂದೂರು ತಾಲೂಕು ರಚನೆಯನ್ನು ಸ್ವಾಗತಿಸುತ್ತಾರೆ.

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (4) ಸಮ್ಮತ (0) ಅಸಮ್ಮತ (0) ಖಂಡಿಸುವೆ (3) ಅಭಿಪ್ರಾಯವಿಲ್ಲ (0)