ಮೂರು ದಶಕಗಳ ತಾಲೂಕು ಹೋರಾಟದ ಪ್ರತಿಫಲ: ಇಂದಿನ ಬಜೆಟ್‍ನಲ್ಲಿ ಬೈಂದೂರು ತಾಲೂಕು ಘೋಷಣೆ

0
440

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (20) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ಬೈಂದೂರು ಮಾ.015 : ಬೈಂದೂರು ತಾಲೂಕು ರಚನೆಯ ವಿಚಾರ ಪ್ರಸ್ತಾಪಗೊಂಡು 30 ವರ್ಷಗಳೇ ಕಳೆದು ಹೋಗಿದೆ. ಬೈಂದೂರು ಜನರ ನಡೆಸುತ್ತಿರುವ ಕೂಗು ಮಾನ್ಯ ಮುಖ್ಯಮಂತ್ರಿಗಳಿಗೆ ಬೈಂದೂರಿನ ತಾಲೂಕು ಕೂಗು ಚುರುಕುಗೊಂಡಿದ್ದೆ. ಮುಖ್ಯಮಂತ್ರಿಗಳು ಬೈಂದೂರು ಜನರ ಕೂಗು ಮೆಚ್ಚಿ ಇಂದು ರಾಜ್ಯದ ಬಜೆಟ್‍ನಲ್ಲಿ ಬೈಂದೂರು ತಾಲೂಕು ಘೋಷಣೆ ಮಾಡಿದ್ದಾರೆ.

Byndoor 1

ಹೋರಾಟಕ್ಕೆ ಸ್ಪಂದಿಸಿದ ಹಿಂದಿನ ಬಿಜೆಪಿ ಸರ್ಕಾರ 43 ಹೊಸ ತಾಲೂಕು ರಚನೆಯ ಪ್ರಸ್ತಾಪದಲ್ಲಿ ಬೈಂದೂರು ಪ್ರಮುಖವಾಗಿ ಪರಿಗಣಿಸಿ ತನ್ನ ಕೊನೆಯ ಬಜೆಟ್‍ನಲ್ಲಿ ತಾಲೂಕು ರಚನೆಯನ್ನು ಘೋಷಿಸಿ ಅನುದಾನ ತೆಗೆದಿರಿಸಿತ್ತು. ಬೈಂದೂರು ಕ್ಷೇತ್ರದ ಜನ ಇದು ಮೂರು ದಶಕಗಳ ಹೋರಾಟಕ್ಕೆ ಸಂದ ಜಯ ಎಂದು ಸಂಭ್ರಮಿಸಿದ್ದರು. ಇನ್ನೇನು ಬೈಂದೂರು ತಾಲೂಕು ರಚನೆ ಆಗೇಬಿಟ್ಟಿತು ಎಂಬ ನಿರೀಕ್ಷೆಯಲ್ಲಿದ್ದರು, ಆದರೆ ಆ ಬಳಿಕ ಬಂದ ಕಾಂಗ್ರೆಸ್ ಸರ್ಕಾರ 43 ತಾಲೂಕು ರಚನೆಯ ಪ್ರಸ್ತಾಪವನ್ನು ತಡೆಹಿಡಿದು ಪುನರ್ ಪರಿಶೀಲಿಸುವ ನಿರ್ದಾರ ಕೈಗೊಂಡಿತು. ಆದರೆ ಈಗ ಇದೇ ಕಾಂಗ್ರೆಸ್ ಪಕ್ಷದ ಮುಖ್ಯಮಂತ್ರಿ ಮಾನ್ಯ ಸಿದ್ಧರಾಮಯ್ಯನವರು ಇಂದು ಬಜೆಟ್‍ನಲ್ಲಿ ಬೈಂದೂರು ತಾಲೂಕು ಘೋಷಿಸಿದರು. ಬೈಂದೂರಿನ ಅಭಿವೃದ್ದಿಯ ಹರಿಕಾರ ಎಂದೇ ಹೆಸರು ಪಡೆದಿರುವ ಜನರ ಮೆಚ್ಚಿನ ಶಾಸಕರಾದ ಕೆ.ಗೋಪಾಲ ಪೂಜಾರಿಯವರ ದೊಡ್ಡದಾದ ಶ್ರಮ ವಹಿಸಿದರು.

ತಾಲೂಕು ಘೋಷಣೆಯ ಅದ್ದೂರಿಯ ಸಂಭ್ರಮಾಚರಣೆ

byndoor 02

ರಾಜ್ಯದ ಬಜೆಟ್ ಘೋಷಣೆಯಾದ ಬಳಿಕ ಬೈಂದೂರಿನ ನಾಗರಿಕರು ಪಟಾಕಿ ಸಿಡಿಸಿ, ಸಿಹಿತಿಂಡಿಗಳನ್ನು ಹಂಚಿಕೊಂಡದರು. ಬೈಂದೂರು ತಾಲೂಕು ಹೋರಾಟ ಸಮಿತಿಯ ಮುಖಂಡರುಗಳಾದ ನಿವೃತ್ತ ಐಎಫ್‍ಎಸ್ ಅಧಿಕಾರಿಯಾದ ಬಿ,ಜಗನ್ನಾಥ ಶೆಟ್ಟಿ,ಉಡುಪಿ ಜಿಲ್ಲಾ ಕೆಡಿಪಿ ಸದಸ್ಯರಾದ ಎಸ್.ರಾಜು ಪೂಜಾರಿ, ಬೈಂದೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಸ್.ಮದನ ಕುಮಾರ್, ಕಾರ್ಯದರ್ಶಿ ನಾಗರಾಜ್ ಗಾಣಿಗ ಬಂಕೇಶ್ವರ, ಕಾಲ್ತೋಡು ತಾ.ಪಂ ಸದಸ್ಯರಾದ ವಿಜಯ ಶೆಟ್ಟಿ, ಪಡುವರಿ ಗ್ರಾ.ಪಂ ಸದಸ್ಯರುಗಳಾದ ಮಾಣಿಕ್ಯ ಹೋಬಳಿದಾರ್, ವೆಂಕಟರಮಣ ಹೇನ್‍ಬೇರ್, ಸುಬ್ರಹ್ಮಣ್ಯ ಪೂಜಾರಿ, ಶೇಖರ್ ಪೂಜಾರಿ ಉಪ್ಪುಂದ, ಶಿರೂರು ಗ್ರಾ.ಪಂ ಸದಸ್ಯರಾದ ಮಂಜುನಾಥ ಬಿಲ್ಲವ, ಮೊದಲಾದವರು ಭಾಗವಹಿಸಿದರು.

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (20) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)