ಕೊಲ್ಲೂರು ವನ್ಯಜೀವ ವಿಭಾಗದ ರೇಂಜರ್ : ಶಿವರಾಮ್ ಆಚಾರ್ಯ ಮನೆಗೆ ಎಸಿಬಿ ದಾಳಿ

0
413

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (6) ಸಮ್ಮತ (0) ಅಸಮ್ಮತ (0) ಖಂಡಿಸುವೆ (1) ಅಭಿಪ್ರಾಯವಿಲ್ಲ (0)

ಬೈಂದೂರು ಮಾ. 9: ಕೊಲ್ಲೂರು ವಲಯ ಅರಣ್ಯಾಧಿಕಾರಿ ಶಿವರಾಮ ಆಚಾರ್ಯ ಅವರ ಕಂಬದಕೋಣೆ ನಿವಾಸದ ಮೇಲೆ ಉಡುಪಿ ಮತ್ತು ಮಂಗಳೂರು ಎಸಿಬಿ ಅಧಿಕಾರಿಗಳ ತಂಡ ಗುರುವಾರ ಬೆಳಗ್ಗೆ ದಾಳಿ ಮಾಡಿದರು.
ಎಸ್‍ಪಿ ಚೆನ್ನಬಸವಣ್ಣ ಎಸ್‍ಎಲ್ ನೇತೃತ್ವದಲ್ಲಿ 4 ಅಧಿಕಾರಿಗಳ ತಂಡದಿಂದ ಆಜ್ರಿ, ಕೊಲ್ಲೂರು ಕಚೇರಿ, ಕಿರಿಮಂಜೇಶ್ವರ ಹಾಗೂ ಕಂಬದಕೋಣೆ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಸಮೀಪದ ವನಶ್ರೀ ಮನೆ ಮೇಲೆ ಒಟ್ಟು 5 ಕಡೆಗಳಲ್ಲಿ ದಾಳಿ ನಡೆಸಿ ದಾಖಲೆಗಳನ್ನು ವಶಪಡಿಸಿಕೊಂಡರು.

Shivaram 01

???????????????????????????????

ಈ ಸಂದರ್ಭದಲ್ಲಿ ರೂ.10 ಲಕ್ಷದ 8 ಸಾವಿರ ಮೌಲ್ಯದ ಚಿನ್ನ, ರೂ. 8 ಲಕ್ಷದ 63 ಸಾವಿರ ನಗದು, 2 ಕಾರು, ಸೈಟ್, 10 ಬ್ಯಾಂಕ್ ಪಾಸ್ ಬುಕ್, ಆಜ್ರಿಯಲ್ಲಿರುವ 27 ಗುಂಟೆ ಜಾಗದ ದಾಖಲೆ ಪತ್ರಗಳು ಸೇರಿದಂತೆ ವಿವಿಧ ದಾಖಲೆಗಳನ್ನು ವಶಪಡಿಸಿಕೊಂಡು ಪರಿಶೀಲನೆ ನಡೆಸುತ್ತಿದ್ದಾರೆ.
ಡಿವೈಎಸ್ಪಿ ಅಧಿಕಾರಿಗಳಾದ ಅರುಣ ಕುಮಾರ್ ಕೊಳೂರು, ಸುಧಾಕರ ಹೆಗ್ಡೆ, ಇನ್ಸ್ಪೆಕ್ಟರ್ ದಿನಕರ ಶೆಟ್ಟಿ, ಯೋಗಿಶ ಕುಮಾರ, ಬ್ರಿಜ್ಸೆ, ಕೃಷ್ಣ ಮೂರ್ತಿ, ರಮೇಶ, ರಾಘವೇಂದ್ರ, ಸುರೇಶ ಎಸ್, ರಂಗನಾಥ ಅಧಿಕಾರಿಗಳ ತಂಡ ದಾಖಲೆಗಳನ್ನು ವಶಪಡಿಸಿಕೊಂಡರು

Shivaram 03

Shivaram 4

ಡೈರಿ, ಡೈರಿ…..
ದಾಳಿ ನಡೆಸಿದ ಸಂದರ್ಭದಲ್ಲಿ  ಎಸಿಬಿ ತಂಡದ ಅಧಿಕಾರಿಗಳಿಗೆ ಶಿವರಾಮ ಆಚಾರ್ಯ ಅವರ ಮನೆಗಳಲ್ಲಿ ಹಣಕಾಸು ವ್ಯವಹಾರದ ಹಲವಾರು ಡೈರಿಗಳು ದೊರಕಿದ್ದು  ಇದರಲ್ಲಿ ಹಣಕಾಸು ವಹಿವಾಟು ನಡೆಸಿರುವ ಕುರಿತು ಮಾಹಿತಿಗಳಿದ್ದು ಇದನ್ನು ಪರಿಶೀಲಿಸುತ್ತಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಅರಣ್ಯಾಧಿಕಾರಿ ಶಿವರಾಮ ಅಚಾರ್ಯ ಅವರ ಮೇಲೆ ಅಕ್ರಮ ಸಂಪತ್ತು ಹೊಂದಿರುವ ದೂರಿನ ಅನ್ವಯ ದಾಳಿಮಾಡಿದ್ದು ಈಗಾಗಲೇ ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿದ್ದು ಸಂಪೂರ್ಣ ದಾಖಲೆಗಳನ್ನು ತನಿಖೆ ಮಾಡಿದ ನಂತರ ಮುಂದಿನ ಕ್ರಮ ಕೈಗೊಳಲಾಗುವುದು ಎಂದು ಎಸ್‍ಪಿ ಚೆನ್ನಬಸವಣ್ಣ ಎಸ್‍ಎಲ್ ತಿಳಿಸಿದ್ದಾರೆ.

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (6) ಸಮ್ಮತ (0) ಅಸಮ್ಮತ (0) ಖಂಡಿಸುವೆ (1) ಅಭಿಪ್ರಾಯವಿಲ್ಲ (0)