ಟೋಲ್ ಗೇಟ್ ಹಣ ವಸೂಲಿ ವಿರುದ್ದ ಪ್ರತಿಭಟನೆ : 144 ಸೆಕ್ಷನ | ಬೈಂದೂರಿನಲ್ಲಿ ನೀರಸ ಪ್ರತಿಕ್ರಿಯೆ

0
483

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (4) ಸಮ್ಮತ (0) ಅಸಮ್ಮತ (0) ಖಂಡಿಸುವೆ (1) ಅಭಿಪ್ರಾಯವಿಲ್ಲ (0)

ಬೈಂದೂರು ಫೆ.13 : ಸಾಸ್ತಾನ, ಹೆಜಮಾಡಿ ಹಾಗೂ ಪಡುಬಿದ್ರೆಗಳಲ್ಲಿ ಟೋಲ್ ಗೇಟ್‍ಗಳ ಹಣ ವಸೂಲಿಯ ವಿರುದ್ದ ಬೃಹತ್ ಪ್ರತಿಭಟನೆ ನಡೆಯುತ್ತಿದೆ.  ಸಾಸ್ತಾನ ಟೋಲ್ ಗೇಟ್‍ನಲ್ಲಿ ಪ್ರತಿಭಟನೆ ಬಿಸಿಗಳು ಹೆಚ್ಚಾಗುತ್ತದೆ. ಆದರೆ  ಬೈಂದೂರಿನಲ್ಲಿ ಎಂದಿನಂತೆ ಅಂಗಡಿಮುಂಗಟ್ಟುಗಳು ವಹಿವಾಟ್ಟುಗಳು ನಡೆಯುತ್ತಿವೆ, ಬಂದ್‍ಗೆ ಯಾವುದೇ ರೀತಿಯ ಬೆಂಬಲವಿಲ್ಲ. ಸರಕಾರಿ ಬಸ್‍ಗಳು ಎಂದಿನಂತೆ ಕಾರ್ಯನಿರ್ವಹಿಸುತ್ತಿದ್ದೆ. ಶಾಲಾ-ಕಾಲೇಜುಗಳು ಎಂದಿನಂತೆ ನಡೆಯುತ್ತಿದೆ. ಜನರು ಸ್ಥಳಿಯ ಖಾಸಗಿ ಬಸ್‍ಗಳಿಗಾಗಿ ಪರದಾಟ ನಡೆಸುತ್ತಿದ್ದಾರೆ. ರಿಕ್ಷಾ, ಟೋಂಪೊ,ಟ್ಯಾಕ್ಸಿ, ಎಂದಿನಂತೆ ಸಂಚರಿಸುತ್ತಿದೆ. ಪ್ರತಿಭಟನೆಯ ಯಾವುದೇ ರೀತಿಯ ಪ್ರತಿಕ್ರಯೆಗಳು ಕಂಡುಬರುತ್ತಿಲ್ಲ.

byndoor 04

byndoor 01

byndoor 02

byndoor 05

ಜಿಲ್ಲಾಧಿಕಾರಿಗಳು ಸೆಕ್ಷನ 144 ಜಾರಿ:  ಹೆಜಮಾಡಿ ಹಾಗೂ ಸಾಸ್ತಾನ ಟೋಲ್ ಗೇಟ್ ಪ್ರದೇಶಗಳಲ್ಲಿ ಈ ಹಿಂದೆಯೇ ಸೆಕ್ಷನ-144 ಅನ್ನು ಉಡುಪಿ ಜಿಲ್ಲಾಧಿಕಾರಿಗಳು ಜಾರಿಗೊಳಿಸಿದ್ದಾರೆ. ಉಡುಪಿ ನಗರಸಭೆ ವ್ಯಾಪ್ತಿಯ ಶಿರೂರುನಿಂದ ತೆಕ್ಕಟ್ಟೆ ರಾಷ್ಟ್ರೀಯ ಹೆದ್ದಾರಿ 66ರ ಇಕ್ಕೆಲ 2 ಕಿ.ಮೀ. ವ್ಯಾಪ್ತಿಯ ತನಕ ಫೆ.12ರ ಮಧ್ಯರಾತ್ರಿ 11 ಗಂಟೆಯಿಂದ ಫೆ.13ರ ಮಧ್ಯರಾತ್ರಿ 12ಗಂಟೆಯ ತನಕ ಪ್ರತಿಬಂಧಕಾಜ್ಞೆ ಜಾರಿಗೊಳಿಸಿದೆ.

ಚಿತ್ರ/ವರದಿ : ಸುಶಾಂತ್ ಬೈಂದೂರು

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (4) ಸಮ್ಮತ (0) ಅಸಮ್ಮತ (0) ಖಂಡಿಸುವೆ (1) ಅಭಿಪ್ರಾಯವಿಲ್ಲ (0)