ರಸ್ತೆ ಅಪಘಾತ: ಚಿತ್ರಕಲಾ ಶಿಕ್ಷಕ ಭೋಜು ಹಾಂಡ ಮೃತ್ಯು

0
951

ಬೈಂದೂರು ಫೆ.12 : ಹೆಮ್ಮಾಡಿ ಬೈಪಾಸ್‌ ಬಳಿ ಶನಿವಾರ  ಮುಂಜಾನೆ ಬಸ್‌ ಹಾಗೂ ಬೈಕ್‌ ನಡುವೆ ಸಂಭವಿಸಿದ ಅಪಘಾತದಲ್ಲಿ ಬೈಕ್‌ ಸವಾರ, ಖ್ಯಾತ ಚಿತ್ರಕಲಾ ಶಿಕ್ಷಕ, ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಭೋಜು ಹಾಂಡ (58) ಗಂಭೀರ ಗಾಯಗೊಂಡು ಮೃತಪಟ್ಟಿದ್ದಾರೆ.

BOja handa

ಕೋಟೇಶ್ವರ ಪದವಿ ಪೂರ್ವ ಕಾಲೇಜಿನಲ್ಲಿ ಕಳೆದ ಮೂವತ್ತು ವರ್ಷಗಳಿಂದ  ಚಿತ್ರಕಲಾ ಶಿಕ್ಷಕರಾಗಿದ್ದ  ಹೆಮ್ಮಾಡಿ ನಿವಾಸಿ ಭೋಜು ಹಾಂಡ ಕಳೆದ ಕೆಲವು ವರ್ಷಗಳಿಂದ ಹೆಮ್ಮಾಡಿ ಹಾಗೂ ಕಟ್‌ಬೇಲೂ¤ರಿನಲ್ಲಿ ಯೋಗ ತರಬೇತಿ ನೀಡುತ್ತಿದ್ದರು. ಶನಿವಾರ ಹೆಮ್ಮಾಡಿಯ  ತರಗತಿಗೆ ಹೋಗಿ ಯೋಗದ ಪರಿಕರ ತೆಗೆದುಕೊಂಡು ಕಟ್‌ಬೇಲೂ¤ರಿಗೆ ತೆರಳುತ್ತಿದ್ದ ಸಂದರ್ಭ ಈ ಅಪಘಾತ ಸಂಭವಿಸಿದೆ.  ಬೈಕ್‌ ಹಿಂಬದಿ ಕುಳಿತಿದ್ದ ಅರ್ಪಿತಾ (11) ಗಾಯಗೊಂಡು ಕುಂದಾಪುರ ಖಾಸಗಿ ಆಸ್ಪತ್ರೆಗೆ ದಾಖಲಾಗಿ ದ್ದಾರೆ.

ಮುಂಬಯಿಯಿಂದ ಮಂಗಳೂರಿಗೆ ತೆರಳುತ್ತಿದ್ದ ಬಸ್‌ ಬೈಕ್‌ಗೆ ಢಿಕ್ಕಿ  ಹೊಡೆದು ಬೈಕ್‌ನ್ನು ಬಹು ದೂರದ ವರೆಗೆ ಎಳೆದೊಯ್ದಿತ್ತು. ಸ್ಥಳೀಯ  ರಿಕ್ಷಾ ಚಾಲಕರು ಧಾವಿಸಿ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸುವಲ್ಲಿ ನೆರವಾದರು.

ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಭೋಜು ಹಾಂಡ 2013-14ನೇ ಸಾಲಿನ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿಗೆ ಪಾತ್ರರಾಗಿದ್ದರು. ಉಡುಪಿ ಜಿಲ್ಲಾ ಚಿತ್ರಕಲಾ ಶಿಕ್ಷಕರ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ರಾಜ್ಯ ಮಟ್ಟದ ಸಂಪನ್ಮೂಲ ವ್ಯಕ್ತಿಯೂ  ರಾಜ್ಯ ಚಿತ್ರಕಲಾ ಶಿಕ್ಷಕರ ಸಂಘದಲ್ಲಿ ನಿರ್ದೇಶಕರೂ  ಉಡುಪಿ ಜಿಲ್ಲಾ ಚಿತ್ರಕಲಾ ಶಿಕ್ಷಕರ ಸಂಘದ ಪ್ರಸ್ತುತ ಸಾಲಿನ ಅಧ್ಯಕ್ಷರೂ ಆಗಿದ್ದರು. ಇವರ ಪ್ರತಿಭೆಗೆ ಉತ್ತಮ ಶಿಕ್ಷಕ ಜಿಲ್ಲಾ ಪ್ರಶಸ್ತಿ ಸೇರಿದಂತೆ ಅನೇಕ ಸಮ್ಮಾನಗಳಿಂದ ಪುರಸ್ಕೃತರಾಗಿದ್ದರು. ಮೃತರು  ಉತ್ತಮ ಯೋಗ ಪಟುವೂ ಆಗಿದ್ದು, ಕಳೆದ 17 ವರ್ಷದಿಂದ ಡ್ರಾಯಿಂಗ್‌ ಹೈಯರ್‌ ಗ್ರೇಡ್‌ ಪರೀûಾ ಕೇಂದ್ರವನ್ನು  ತಮ್ಮ ಶಾಲೆಯಲ್ಲಿ ನಡೆಸಿಕೊಂಡು ಬರುತ್ತಿದ್ದರು.

ಮೃತರು ಪತ್ನಿ, ಇಬ್ಬರು ಪುತ್ರರು ಹಾಗೂ ಪುತ್ರಿಯನ್ನು ಅಗಲಿದ್ದಾರೆ.