ಇಂದಿನ ಒತ್ತಡದ ಬದುಕು ಹಾಗೂ ಅನಿಯಮಿತ ಆಹಾರ ಪದ್ದತಿಗೆ ಒಳಗಾಗಿ ಬಹುಬೇಗ ರೋಗಗಳನ್ನಾಗಿಸುತ್ತವೆ : ಡಾ. ಕಮಲ್ ಗಾಂದಿ

0
411

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (2) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ಬೈಂದೂರು ಫೆ.11 : ನಮ್ಮ ಹಿರಿಯರು ಪ್ರಕೃತಿಯೊಂದಿಗಿನ ಪ್ರೀತಿಯ ಜೊತೆಗೆ ಬದುಕನ್ನು ರೂಪಿಸಿಕೊಂಡವರು. ಯೋಗ, ವ್ಯಾಯಾಮಗಳ ಮೂಲಕ ಶರೀರ ದಂಡನೆಯಂತಕ ನೈಸರ್ಗಿಕವಾದ ಪ್ರಕ್ರೀಯೆಗೆ ಅನುಗುಣವಾಗಿ ಆರೋಗ್ಯ ಕಾಪಾಡಿಕೊಂಡಿದ್ದಾರೆ. ಆದರೆ ಇಂದಿನ ಒತ್ತಡದ ಬದುಕು ಹಾಗೂ ಅನಿಯಮಿತ ಆಹಾರ ಪದ್ದತಿಗೆ ಒಳಗಾಗಿ ಬಹುಬೇಗ ರೋಗಗಳನ್ನು ಆಮಂತ್ರಿಸುತ್ತಿದ್ದೇವೆ ಎಂದು ರಾಜಸ್ಥಾನದ ಡಾ. ರಾಮಮನೋಹರ್ ಲೋಹಿಯಾ ಆರೋಗ್ಯ ಜೀವನ್ ಸಂಸ್ಥಾನದ ಡಾ. ಕಮಲ್ ಗಾಂಧಿ ಹೇಳಿದರು.

BYN-Feb11-1-JCI Programe

ಶಿರೂರು ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ರಾಜಸ್ಥಾನದ ಡಾ. ರಾಮಮನೋಹರ್ ಲೋಹಿಯಾ ಆರೋಗ್ಯ ಜೀವನ್ ಸಂಸ್ಥಾನ್ ಮತ್ತು ಸ್ಥಳೀಯ ಜೆಸಿಐ ಘಟಕದ ಸಹಯೋಗದಲ್ಲಿ ಏಳು ದಿನಗಳ ಕಾಲ ನಡೆದ ಅಕ್ಯುಪ್ರೇಶರ್ ಹಾಗೂ ಸುಜೋಕ್ ತೆರಪಿ ಚಿಕಿತ್ಸಾ ಶಿಬಿರದ ಸಮಾರೋಪದಲ್ಲಿ ಮಾತನಾಡಿದರು. ನಮ್ಮ ಆರೋಗ್ಯ ನಮ್ಮ ಕೈಯಲ್ಲಿದೆ ಅದನ್ನು ಕಾಪಾಡಿಕೊಳ್ಳುವ ಪ್ರಯತ್ನ ನಿರಂತರವಾಗಿರಬೇಕು. ರಾಸಾಯನಿಕ ಗೊಬ್ಬರದಿಂದ ಕೂಡಿದ ಆಹಾರ ಬಳಕೆಯಲ್ಲಿನ ವ್ಯತ್ಯಾಸಗಳಿಂದ ಹೆಚ್ಚಿನವರು ಅನಾರೋಗ್ಯಕ್ಕೆ ತುತ್ತಾಗುತ್ತಾರೆ. ಕಾಯಿಲೆ ಬರದಂತೆ ಪ್ರತಿನಿತ್ಯ ವ್ಯಾಯಾಮ, ಹಿತ-ಮಿತವಾದ ಶುದ್ಧವಾದ ನೀರು ಮತ್ತು ಆಹಾರ ಸೇವನೆ, ಮನೆಯ ಒಳಗೆ ಮತ್ತು ಹೊರಗೆ ಸ್ವಚ್ಛತೆ ಬಗ್ಗೆ ಎಚ್ಚರ ವಹಿಸಿದರೆ ರೋಗಗಳನ್ನು ತಡೆಗಟ್ಟಬಹುದು ಎಂದು ಸಲಹೆ ನೀಡಿದರು.

ಜೇಸಿ ಅಧ್ಯಕ್ಷ ಅರುಣ್ ಕುಮಾರ್ ವಲಯ ಜೇಸಿ ಅಧಿಕಾರಿ ಎಸ್. ಪ್ರಸಾದ ಪ್ರಭು, ಸ್ಥಾಪಕಾಧ್ಯಕ್ಷ ಮೋಹನ್ ರೇವಣ್‍ಕರ್, ನಿಕಟಪೂರ್ವಾಧ್ಯಕ್ಷ ಹರೀಶ್ ಶೇಟ್, ಸದಸ್ಯರಾದ ಕೃಷ್ಣ ಬಿಲ್ಲವ, ಮಣಿಗಾರ್ ಅಬ್ದುಲ್ ರೆಹಮಾನ್, ರೂಪಾ ರೇವಣ್‍ಕರ್, ಸಂಧ್ಯಾ ವಿಶ್ವನಾಥ್, ನಾಗರತ್ನ ಬಿಲ್ಲವ ಮತ್ತಿತರರು ಉಪಸ್ಥಿತಿಯಿದ್ದರು. ಈ ಸಂದರ್ಭ ಬಡರೋಗಿಗಳಿಗೆ ಶಿರೂರು ಜೇಸಿಐ ವತಿಯಿಂದ ಆರೋಗ್ಯ ಸಲಕರಣೆಗಳನ್ನು ಉಚಿತವಾಗಿ ನೀಡಲಾಯಿತು.

ವರದಿ : ನಹಸಿಂಹ ನಾಯಕ್ ಉಪ್ಪುಂದ

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (2) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)