ಭಜನೆಯಿಂದ ಸಮಾಜಕ್ಕೆ ಸಂಸ್ಕಾರ ಪಾಠ : ಕೃಷ್ಣ ಉಪಾಧ್ಯಾಯ

0
381

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ಬೈಂದೂರು.11 : ಜಗತ್ತು ಬಾಹ್ಯ ಸಂತೋಷ, ಅನೂಕೂಲ ತೃಪ್ತಿಯನ್ನೇ ನಿಜವಾದ ಸುಖ ಎಂಬ ಭ್ರಮೆಯಲ್ಲಿ ಮುಳುಗಿದೆ. ಆದರೆ ಅಂತರ್ಯದಲ್ಲಿರುವ ಸುಖವೇ ನಿಜವಾದ ಸುಖ.ಭಜನೆಯಿಂದ ಅಂತರಂಗದ ಸುಖ ಪ್ರಾಪ್ತಿಯಾಗುತ್ತದೆ. ಭಜನೆಗೆ ಆಶ್ರಯವಾಗಿರುವ ದೇಗುಲಗಳಿಂದ ಸಮಾಜಕ್ಕೆ ಸಂಸ್ಕಾರದ ಪಾಠ ಲಭಿಸುತ್ತದೆ ಎಂದು ಸ್ವಚ್ಛ ಪುತ್ತೂರು ಸಂಯೋಜಕ ಕೃಷ್ಣ ಉಪಾಧ್ಯಾಯ ಹೇಳಿದರು.

IMG-20170211-WA0018

ಬಡಾಕೆರೆಯ ಶ್ರೀರಾಮ ಭಜನಾ ಮಂಡಳಿ ಬೆಳ್ಳಿಹಬ್ಬದ ಅಂಗವಾಗಿ ಶನಿವಾರ ರಾತ್ರಿ ಇಲ್ಲಿನ ಶ್ರೀಲಕ್ಷ್ಮೀಜನಾರ್ದನ ದೇವಳ ವಠಾರದಲ್ಲಿ ಜರುಗಿದ ಸಮಾರಂಭದಲ್ಲಿ ದಿಕ್ಸೂಚಿ ಭಾಷಣ ಮಾಡಿದರು.
ಆರಾಧನೆಯಲ್ಲಿ ಉಪಕರಣಗಳಿಗಿತ ಅಂತಃಕರಣ ಬಹಳ ಮುಖ್ಯ. ದಾರ್ಮಿಕ ಸಂಸ್ಕಾರಗಳ ಜ್ಞಾನವನ್ನು ಇಂದಿನ ಕಿರಿಯ ತಲೆಮಾರಿನವರಿಗೆ ತಲುಪಿಸುವ ನಿಟ್ಟಿನಲ್ಲಿ ದೆವಾಲಯಗಳು ಶಿಕ್ಷಣ ಕೇಂದ್ರಗಳಾಗಿ ಕಾರ್ಯನಿರ್ವಹಿಸಬೇಕಾಗಿದೆ. ಶೀಲ ನಿರ್ಮಾಣವೇ ಶಿಕ್ಷಣ ಗುರಿಯಾಗಬೇಕು ಎಂದರು.

IMG-20170211-WA0019

IMG-20170211-WA0020

IMG-20170211-WA0022

IMG-20170211-WA0023

ನಾಗಯಕ್ಷಿ ಪಾತ್ರಿ ವೇ. ಮೂ. ಲೋಕೇಶ್ ಅಡಿಗ ಅಧ್ಯಕ್ಷತೆ ವಹಿಸಿದರು ಎಬಿವಿಪಿ ರಾಷ್ಟ್ರೀಯ ಕಾರ್ಯಕಾರಿಣಿ ಸದೆಸ್ಯೆ ಚೈತ್ರಾ ಕುಂದಾಪುರ, ಉದ್ಯಮಿ ಅಶೋಕ್ ಶೆಟ್ಟಿ ಸಂಸಾಡಿ, ಸಾಫ್ಟ್‍ವೇರ್ ಆರ್ಕಿಟೆಕ್ ಗಣೇಶ್ ದೇವಾಡಿಗ, ಭಜನಾ ಮಂಡಳಿಯ ಮಹೇಶ್ ಮೆಂಡನ್, ಶ್ರೀಲಕ್ಷ್ಮೀಜನಾರ್ದನ ದೇವಳ ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಜನಾರ್ದನ ದೇವಾಡಿಗ ಉಪಸ್ಥಿತರಿದ್ದರು. ಶ್ರೀಧರ ದೇವಾಡಿಗ ಸ್ವಾಗತಿಸಿದರು,ವಿಕ್ರಮ ವರದಿ ವಾಚಿಸಿದರುಮ ರವಿರಾಮ್ ಸಂದೇಶ ವಾಚಿಸಿದರು, ಸಚಿನ್ ಎಂ. ನಾಯ್ಕ್ ಮತ್ತು ಜಗದೀಶ್ ದೇವಾಡಿಗ ಬಹುಮಾನಿತರ ಪಟ್ಟಿ ಓದಿದರು, ನಿವೃತ್ತ ಶಿಕ್ಷಕ ಎಂ ಗೋವಿಂದ ಕಾರ್ಯಕ್ರಮವನ್ನು ನಿರ್ವಹಿಸಿದರು.

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)