ಉಪ್ಪುಂದ ಬೆಳ್ಳಿ ರಥ ನಿರ್ಮಾಣ ಕಾರ್ಯಕ್ಕೆ ಚಾಲನೆ

0
487

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (3) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ಬೈಂದೂರು ಫೆ. 11: ಉಪ್ಪುಂದ ರಾಣಿ ಬಲೆ ಮೀನುಗಾರರ ಒಕ್ಕೂಟದ ವತಿಯಿಂದ ಉಪ್ಪುಂದ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನಕ್ಕೆ ಸೇವಾರೂಪದಲ್ಲಿ ನೀಡುವ ನೂತನ ಬೆಳ್ಳಿ ರಥ ನಿರ್ಮಾಣ ಕಾರ್ಯಕ್ಕೆ ಸಮಸ್ತ ಮೀನುಗಾರರು ಶ್ರೀ ದೇವಿಗೆ ಪೂಜೆ ಸಲ್ಲಿಸುವುದರ ಮೂಲಕ ಸಾಂಕೇತಿಕವಾಗಿ ಚಾಲನೆ ನೀಡಲಾಯಿತು .

up1

ಮೀನುಗಾರರಿಗೆ ಮತ್ಸ್ಯಕಾಮ ತಲೆದೋರಿದ ಸಂದರ್ಭದಲ್ಲಿ ಸಮಸ್ತ ಮೀನುಗಾರರು ಕರಾವಳಿ ಪ್ರದೇಶದ ಆರಾಧ್ಯ ದೇವತೆ ಶ್ರೀ ದುರ್ಗಾ ಮಾತೆಗೆ ಮಾಡಿಕೊಂಡ ಸಂಕಲ್ಪದಂತೆ ನೂತನ 68ಕೆಜಿ ಬೆಳ್ಳಿ ಲೇಪಿತ ರಥ ನಿರ್ಮಾಣಕ್ಕೆ ರೂ. 43ಲಕ್ಷ ಮೊತ್ತದ ಚೆಕ್‍ನ್ನು ರಥ ನಿರ್ಮಾಣ ಶಿಲ್ಪಿ ರಾಜ್ಯ, ರಾಷ್ಟ್ರೀಯ ಶಿಲ್ಪಗುರು ಪ್ರಶಸ್ತಿ ಪುರಸ್ಕ್ರತ ಬಿ.ಲಕ್ಷ್ಮೀನಾರಾಯಣ ಅಚಾರ್ಯ ಮತ್ತು ರಾಜಗೋಪಾಲ ಆಚಾರ್ಯ ಇವರಿಗೆ ಒಕ್ಕೂಟದ ವತಿಯಿಂದ ಬೈಂದೂರು ವಿಶೇಷ ತಹಶೀಲ್ದಾರ ಕಿರಣ ಜಿ. ಗೌರಯ್ಯ ಮೂಲಕ ಹಸ್ತಾಂತರಿಸಲಾಯಿತು. ದೇವಸ್ಥಾನದ ಪ್ರಧಾನ ಅರ್ಚಕ ವೇ.ಮೂ. ಪ್ರಕಾಶ ಉಡುಪ, ಸಂದೇಶ ಭಟ್ ಧಾರ್ಮಿಕ ವಿವಿಧ ಪೂಜೆ ಕಾರ್ಯ ನೆರವೇರಿಸಿದರು.

ರಾಣಿ ಬಲೆ ಮೀನುಗಾರರ ಒಕ್ಕೂಟ ಸಂಘದ ಅಧ್ಯಕ್ಷ ವೆಂಕಟರಮಣ ಖಾರ್ವಿ ಮಾತನಾಡಿ ಬೆಳ್ಳಿ ರಥವನ್ನು ಉತ್ತಮ ರೀತಿಯಲ್ಲಿ ನಿರ್ಮಿಸಿಕೊಡುವಂತೆ ಶಿಲ್ಪಿಗಳಲ್ಲಿ ಕೋರಿದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷ ತಿಮ್ಮಪ್ಪ ಖಾರ್ವಿ, ಕಾರ್ಯದರ್ಶಿ ಮೋಹನ ದಾಸ್, ಕೋಶಾಧಿಕಾರಿ ಜಿ. ಮಾಧವ ಖಾರ್ವಿ, ಸಂಘದ ಪ್ರಮುಖರಾದ ಮಂಜುನಾಥ ಜಿ. ಖಾರ್ವಿ, ಶ್ರೀನಿವಾಸ ಖಾರ್ವಿ, ರಮೇಶ ಖಾರ್ವಿ, ರಾಜು ಖಾರ್ವಿ, ಪದ್ಮನಾಭ ಖಾರ್ವಿ, ಸುಕ್ರ ಖಾರ್ವಿ, ಬಾಲಕೃಷ್ಣ ಖಾರ್ವಿ ಹಾಗೂ ಸಮಸ್ತ ರಾಣಿ ಬಲೆ ಒಕ್ಕೂಟದ ಸರ್ವ ಸದಸ್ಯರು, ದೇವಸ್ಥಾನ ಸಿಬ್ಬದಿ ವರ್ಗದವರು ಉಪಸ್ಥಿತದ್ದರು.

ವರದಿ : ಕೃಷ್ಣ ಬಿಜೂರು..

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (3) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)