ಮರವಂತೆ ಮೀನುಗಾರಿಕಾ ಬಂದರು : ಶಾಸಕರಿಂದ ಪ್ರಗತಿ ಪರಿಶೀಲನೆ

0
366

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (2) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

1-06-2016-6

ಬೈಂದೂರು, ಜೂ.1 : ಮರವಂತೆಯಲ್ಲಿ ರೂ. 52 ಕೋಟಿ ವೆಚ್ಚದಲ್ಲಿ ಅನುಷ್ಠಾನಗೊಳ್ಳುತ್ತಿರುವ ಮೀನುಗಾರಿಕಾ ಹೊರಬಂದರು ಕಾಮಗಾರಿಯನ್ನು ಕನಿಷ್ಠ ಮುಂದಿನ ಮಾರ್ಚ್ ಮುನ್ನ ಪೂರ್ತಿಗೊಳಿಸಬೇಕೆಂದು ಶಾಸಕ ಕೆ. ಗೋಪಾಲ ಪೂಜಾರಿ ಬಂದರು ಮತ್ತು ಮೀನುಗಾರಿಕಾ ಇಲಾಖೆಯ ಕಾರ್ಯಪಾಲಕ ಇಂಜಿನಿಯರ್ ಟಿ. ಎಸ್. ರಾಥೋಡ್ ಮತ್ತು ಗುತ್ತಿಗೆದಾರರ ಪ್ರತಿನಿಧಿ ಕಲೈರಾಜ್ ಅವರಿಗೆ ಸೂಚಿಸಿದರು. ಬುಧವಾರ ಅವರು ಕಾಮಗಾರಿ ಪ್ರದೇಶಕ್ಕೆ ಬಂದು ಮೀನುಗಾರ ಮುಖಂಡರ ಸಮಕ್ಷಮಕೆಲಸದ ಪ್ರಗತಿ ಪರಿಶೀಲಿಸಿದರು.

ಈ ಸಂದರ್ಭದಲ್ಲಿ ಕಾಮಗಾರಿಯ ಪ್ರಗತಿಯ ವಿವರ ನೀಡಿದ ರಾಥೋಡ್ ಈ ವರೆಗೆ ಶೇ. 60 ಪ್ರಗತಿ ಸಾಧಿಸಲಾಗಿದೆ. ಗುತ್ತಿಗೆದಾರರಿಗೆ ರೂ. 36 ಕೋಟಿ ಪಾವತಿಸಲಾಗಿದೆ. ಮೀನುಗಾರರ ಅಪೇಕ್ಷೆಯಂತೆ ದಕ್ಷಿಣದ ತಡೆಗೋಡೆಯ ಉದ್ದ ಹೆಚ್ಚಿಸುತ್ತಿದ್ದು, ಅದರ ಪರಿಣಾಮವಾಗಿ ಪಶ್ಚಿಮದ ತಡೆಗೋಡೆಯ ಉದ್ದ ಹೆಚ್ಚಲಿದೆ. ಈ ಹೆಚ್ಚುವರಿ ಕಾಮಗಾರಿಗೆ ರೂ. 25 ಕೋಟಿ ಅಧಿಕ ಮೊತ್ತ ಅಗತ್ಯವಿದೆ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಶಾಸಕರು ಈ ಬಗ್ಗೆ ಪ್ರಸ್ತಾವನೆ ಸಿದ್ಧವಾದೊಡನೆ ಸಂಸದ ಆಸ್ಕರ್ ಫೆರ್ನಾಂಡಿಸ್ ಜತೆ ಮುಖ್ಯ ಮಂತ್ರಿಯವರನ್ನು ಭೇಟಿಯಾಗಿ ಅಗತ್ಯ ಮೊತ್ತದ ಬಗ್ಗೆ ಮಂಜೂರಾತಿ ಪಡೆಯಲಾಗುವುದು ಎಂದರು. ಮೀನುಗಾರ ಮುಖಂಡರು ಕಾಮಗಾರಿ ನಿಧಾನವಾಗುತ್ತಿರುವ ಬಗ್ಗೆ ಮತ್ತು ತಡೆಗೋಡೆಗಳ ರಕ್ಷಣೆಗೆ ಬಳಸುತ್ತಿರುವ ಟೆಟ್ರಾಪಾಡ್‌ಗಳ ಗುಣಮಟ್ಟದ ಬಗ್ಗೆ ಆತಂಕ ವ್ಯಕ್ತ ಪಡಿಸಿದರು. ಈ ಬಗ್ಗೆ ಗಮನ ಹರಿಸುವಂತೆ ಶಾಸಕರು ಇಂಜಿನಿಯರ್ ಮತ್ತು ಗುತ್ತಿಗೆದಾರರಿಗೆ ಸೂಚಿಸಿದರು.

ನಿವೃತ್ತ ಇಂಜಿನಿಯರ್ ಎನ್. ಎಂ. ಖಾರ್ವಿ, ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಎಸ್.ರಾಜು ಪೂಜಾರಿ, ಮೀನುಗಾರರ ಸೇವಾಸಮಿತಿಯ ಅಧ್ಯಕ್ಷ ಬಿ. ವೆಂಕಟರಮಣ ಖಾರ್ವಿ, ಮಾಜಿ ಅಧ್ಯಕ್ಷ ಸೋಮಯ್ಯ ಖಾರ್ವಿ, ಗ್ರಾಮ ಪಂಚಾಯತ್ ಮಾಜಿ ಸದಸ್ಯರಾದ ರಾಮಕೃಷ್ಣ ಖಾರ್ವಿ, ಮೋಹನ ಖಾರ್ವಿ, ಕೆ. ಎಂ. ಜನಾರ್ದನ ಖಾರ್ವಿ, ಶಂಕರ ಖಾರ್ವಿ, ಮಾಜಿ ಅಧ್ಯಕ್ಷ ಎಸ್. ಜನಾರ್ದನ ಇನ್ನಿತರರು ಇದ್ದರು.

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (2) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)